ಆನೆ ದಾಳಿಯಿಂದ ಸಂಪೂರ್ಣವಾಗಿ ನಾಶವಾಗಿರುವ ಕಬ್ಬಿನ ಹಾಲಿನ ಗಾಡಿ.  
ರಾಜ್ಯ

ಕಾಡಾನೆ ದಾಳಿಗೆ ಕಾರು, ಕಬ್ಬಿನ ಹಾಲಿನ ಗಾಡಿ ಜಖಂ

ಪ್ರಮುಖ ಮುಖ್ಯಾಂಶಗಳು

  • ಬಿಳಿಗಿರಿರಂಗನಬೆಟ್ಟ
  • ವಾಹನ ನಿಲ್ದಾಣದ ಬಳಿ ನಿಲ್ಲಿಸಿದ್ದ ಕಾರನ್ನು
ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿನ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ವಾಹನ ನಿಲ್ದಾಣದ ಬಳಿ ನಿಲ್ಲಿಸಿದ್ದ ಕಾರನ್ನು ಸೋಮವಾರ ರಾತ್ರಿ ಕಾಡಾನೆ ದಾಳಿ ನಡೆಸಿ ಜಖಂಗೊಳಿಸಿದೆ.
ರಂಗನಾಥ್ ಅವರಿಗೆ ಸೇರಿದ ಆಲ್ಟೋ ಕಾರು ಜಖಂಗೊಂಡಿದೆ.ರಾತ್ರಿ ವೇಳೆ ಆಹಾರ ಅರಸಿ ಬಂದ ಕಾಡಾನೆ ದೇಗುಲಕ್ಕೆ ತೆರಳುವ ಮಾರ್ಗದಲ್ಲಿ ಹ್ಯಾಂಡ್ ಬ್ರೇಕ್ ಹಾಕಿ ನಿಲ್ಲಸಿದ್ದ ಕಾರನ್ನು ಹಲವು ಮೀಟರ್ ದೂರದವರೆಗೆ ತಳ್ಳಿದೆ. ಅಲ್ಲದೆ ಕಾರಿನ ಬಾಗಿಲು, ಗಾಜು, ಮೇಲ್ಭಾಗವನ್ನು ಸಂಪೂರ್ಣ ಜಖಂಗೊಳಿಸಿದೆ. ಮತ್ತೊಂದೆಡೆ ಪಕ್ಕದಲ್ಲಿ ನಿಲ್ಲಿಸಿದ್ದ ಕುಮಾರ್ ಅವರಿಗೆ ಸೇರಿದ ಕಬ್ಬಿನ ಹಾಲಿನ ಗಾಡಿಯನ್ನೂ ಮುರಿದು ಹಾಕಿದೆ.
ಆನೆ ದಾಳಿಯಿಂದ ಇಲ್ಲಿನ ವಾಸಿಗಳು ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ವಹಿಸಿದ್ದಾರೆ.