ಘಟನೆಯ ಸ್ಥಳ 
ರಾಜ್ಯ

ಬೆಂಗಳೂರಿನಲ್ಲಿ ರಸ್ತೆ ವಿಭಜಕವನ್ನು ಹಾರಿ ರೆಸ್ಟೊರೆಂಟ್​ಗೆ ಗುದ್ದಿದ ಕಾರು; ಹಲವು ಜನ ಜಸ್ಟ್ ಮಿಸ್: ವಿಡಿಯೋ ನೋಡಿ | Car crashes

ಬೆಂಗಳೂರು: ನಗರದ ಇಂದಿರಾ ನಗರದ 100 ಅಡಿ ರಸ್ತೆಯಲ್ಲಿ ಗುರುವಾರ(ಜ. 08) ರಾತ್ರಿ ರಾತ್ರಿ 11.35ರ ಸುಮಾರಿಗೆ ಕಾರೊಂದು ವೇಗವಾಗಿ ಬಂದು ರಸ್ತೆ ವಿಭಜಕವನ್ನು ಹಾರಿ ಪಕ್ಕದ ರೆಸ್ಟೋರೆಂಟ್​ವೊಂದಕ್ಕೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಸ್ಥಳದಲ್ಲಿದ್ದ ಹಲವು ಮಂದಿ ಜಸ್ಟ್ ಮಿಸ್ ಆಗಿದ್ದಾರೆ. ಸಿಸಿಟಿಯ 10 ಸೆಕೆಂಡ್​ಗಳ ವಿಡಿಯೋದಲ್ಲಿ ಅಪಘಾತದ ದೃಶ್ಯಾವಳಿ ಸೆರೆಯಾಗಿದೆ.

ಪೊಲೀಸರ ಪ್ರಕಾರ, 42 ವರ್ಷದ ಡೆರಿಕ್ ಟೋನಿ ಎನ್ನುವವರ ಸ್ಕೋಡಾ ಮಾದರಿ ಕಾರು ಅಪಘಾತವಾಗಿದೆ. ಟೋನಿ 18ನೇ ಮುಖ್ಯ ರಸ್ತೆಯಿಂದ 100 ಅಡಿ ರಸ್ತೆಯ ಕಡೆಗೆ ಪ್ರಯಾಣಿಸುತ್ತಿದ್ದರು. ಮದ್ಯದ ಅಮಲಿನಲ್ಲಿದ್ದ ಅವರು, ಅತಿ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದರು ಎನ್ನಲಾಗಿದೆ.

ಕುಡಿದು ವಾಹನ ಚಲಾಯಿಸುತ್ತಿದ್ದ ಟೋನಿ ಅವರು, ಎಡಕ್ಕೆ ತಿರುವು ಪಡೆಯುವ ಬದಲು ಬಲಕ್ಕೆ ತಿರುವು ಪಡೆದಿದ್ದು, ಸ್ಥಳದಲ್ಲಿದ್ದ ಬೈಕ್​ವೊಂದಕ್ಕೆ ಡಿಕ್ಕಿಹೊಡೆದು ಅದೇ ಸ್ಪೀಡ್​ನಲ್ಲಿ ರಸ್ತೆ ವಿಭಜಕವನ್ನು ಹಾರಿ ಬಾರ್ಬೆಕ್ಯು ನೇಷನ್‌ ರೆಸ್ಟೋರೆಂಟ್​ ಗೋಡೆಗೆ ಡಿಕ್ಕಿ ಹೊಡೆದಿದೆ. ರೆಸ್ಟೊರೆಂಟ್​ನಲ್ಲಿ ಊಟ ಮುಗಿಸಿಕೊಂಡು ಹೊರಗೆ ನಿಂತಿದ್ದ ಹಲವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಘಟನೆಯಲ್ಲಿ ಯಾವುದೇ ಸಾವುನೋವು ಆಗಿಲ್ಲ. ಕಾರು ಚಾಲನೆ ಮಾಡ್ತಿದ್ದ ಟೋನಿ ಗಾಯಗಳಾಗಿದೆ. ಜಬೀರ್ ಅಹ್ಮದ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಕುರಿತು ಜೀವನ್ ಭೀಮಾ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಖರಣದಲ್ಲಿ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎನ್ನಲಾಗಿದೆ (ಏಜೆನ್ಸೀಸ್).