yadgiri car accident 
ರಾಜ್ಯ

ಯಾದಗಿರಿಯಲ್ಲಿ ಕಾರು, ಖಾಸಗಿ ಬಸ್ ಮಧ್ಯೆ ಡಿಕ್ಕಿ; ಆರು ಮಂದಿ ಸಜೀವ ದಹನ..Accident Yadgiri

ಪ್ರಮುಖ ಮುಖ್ಯಾಂಶಗಳು

  • ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಬಳಿ ಅಪಘಾತ
  • ದಗ ದಗನೇ ಹೊತ್ತಿ ಉರಿದ ಕಾರು, ಸಂಪೂರ್ಣವಾಗಿ ಸುಟ್ಟು ಕರಕಲು
  • ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡು ಬೆಂಕಿ ನಂದಿಸಲು ಹರಸಾಹಸ..
ಸುರಪುರ: ಕಾರು ಮತ್ತು ಖಾಸಗಿ ವಾಹನದ ಮಧ್ಯೆ ಡಿಕ್ಕಿ ಹೊಡೆದು, ಏಳು ಮಂದಿ ಸಜೀವ ದಹನಗೊಂಡ ಘಟನೆ ಯಾದಗಿರಿಯ ಸುರಪುರ ತಾಲೂಕಿನ ದೇವಾಪುರ ಗ್ರಾಮದ ಬಳಿ ನಡೆದಿದೆ.
ಯಾದಗಿರಿಯಿಂದ ರಾಯಚೂರು ಕಡೆಗೆ ಕಾರು ಹೊರಟಿತ್ತು, ಇತ್ತ ಖಾಸಗಿ ಬಸ್​​ ಬೆಂಗಳೂರಿನಿಂದ ಕಲಬುರಗಿ ಕಡೆಗೆ ಬರುತ್ತಿತ್ತು. ಎರಡರ ಮಧ್ಯೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದುಕೊಂಡ ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.

ಎಸ್ಪಿ ಭೇಟಿ

ಅಪಘಾತದ ತೀವ್ರತೆ ಬಗ್ಗೆ ಸುದ್ದಿ ಮುಟ್ಟುತ್ತಲೇ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ, ರಕ್ಷಣ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯವನ್ನು ಕೈಗೊಂಡರು. ಇನ್ನು ಬಸ್​ನಲ್ಲಿ ಪ್ರಯಾಣಿಕರನ್ನು ರಕ್ಷಣೆ ಮಾಡಲಾಯಿತು ಎನ್ನಲಾಗಿದೆ. ಜೊತೆಗೆ ಸ್ಥಳಕ್ಕೆ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ದೌಡಾಯಿಸಿ, ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ

ಮೃತರು ಯಾರು?

ಶರಣಪ್ಪ, ಅನಂತಕಲಾ, ಕೃಷ್ಣ ನಾಯಕ, ನಿಸರ್ಗ, ಸಿದ್ದಾರ್ಥ, ಶಶಿಕಲಾ ಮೃತಪಟ್ಟವರು.ಅದ್ವಿಕಾ ಮತ್ತು ಶ್ರೀ ನಿಧಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಸುಟ್ಟಿರುವ ಕಾರಣ ಮುಖ ಗುರುತಿಸಲಾಗದಷ್ಟು ಕರಕಲಾಗಿದೆ. ಕಾರಿನಲ್ಲಿ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು ಎಂದು ಎಸ್ಪಿ ಪೃಥ್ವಿಕ್ ಶಂಕರ್​ ಹೇಳಿದರು. ಅಪಘಾತದಲ್ಲಿ ಮೃತಪಟ್ಟವರು ರಾಯಚೂರು ಜೆಲ್ಲೆಯ ಸಿರವಾರ ಪಟ್ಟಣದ ನಿವಾಸಿಗಳು ಎಂದು ಗುರುತಿಸಲಾಗಿದೆ.(ಏಜೆನ್ಸೀಸ್​)