ಸುರಪುರ ವಿಭಾಗದ ಡಿವೈಎಸ್​ಪಿ ಜಾವೀದ್​ ಇನಾಂದಾರ್​ ಅವರ ವರ್ಗಾವಣೆ ರದ್ದುಪಡಿಸುವಂತೆ ಆಗ್ರಹಿಸಿ ದಲಿತ ಸಂರ್ಷ ಸಮಿತಿ ಮುಖಂಡರು ಠಾಣೆ ಪಿಐ ಮೂಲಕ ಗೃಹ ಸಚಿವರಿಗೆ ಮನವಿಪತ್ರ ಸಲ್ಲಿಸಿದರು. ಮಲ್ಲಿಕಾರ್ಜುನ ಕ್ರಾಂತಿ, ಚಂದ್ರಶೇಖರ ಕಟ್ಟಿಮನಿ, ಸಿದ್ದಪ್ಪ ಸುರಪುರಕರ್​, ಬಸವರಾಜ ಶೆಳ್ಳಗಿ, ಮೂರ್ತಿ ಬೊಮ್ಮನಳ್ಳಿ, ರಾಮಣ್ಣ ಶೆಳ್ಳಗಿ, ಆನಂದ ಹೆಮನೂರ ಇತರರಿದ್ದರು. 
ರಾಜ್ಯ

ಡಿವೈಎಸ್​ಪಿ ವರ್ಗಾವಣೆ ರದ್ದುಗೊಳಿಸಿ

ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ಉಪ ವಿಭಾಗದ ಡಿವೈಎಸ್​ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಾವೀದ್​ ಇನಾಂದಾರ್​ ಅವರ ವರ್ಗಾವಣೆ ಕೂಡಲೇ ರದ್ದುಪಡಿಸಿ, ಅವರನ್ನೇ ಅದೇ ಸ್ಥಳದಲ್ಲಿ ಮುಂದುವರೆಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂರ್ಷ ಸಮಿತಿ (ಕ್ರಾಂತಿಕಾರಿ) ಆಗ್ರಹಿಸಿದೆ.
ಇಲ್ಲಿನ ಪೊಲೀಸ್​ ಠಾಣೆಯ ಪಿಐ ಮೂಲಕ ಗೃಹ ಸಚಿವಗೆ ಮನವಿಪತ್ರ ಸಲ್ಲಿಸಲಾಯಿತು. ನಂತರ ಸಮಿತಿ ಸಂಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, 2023ರ ಆಗಸ್ಟ್​ ತಿಂಗಳಲ್ಲಿ ಸುರಪುರ ಉಪ ವಿಭಾಗಕ್ಕೆ ಡಿವೈಎಸ್​ಪಿಯಾಗಿ ಅಧಿಕಾರ ವಹಿಸಿಕೊಂಡ ಜಾವೀದ್​ ಇನಾಂದಾರ್​ ಅವರು ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ ಎಂದರು.
ಸುರಪುರ ಉಪ ವಿಭಾಗದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕುವ ಮೂಲಕ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮತ್ತು ಸಾಮಾನ್ಯ ಜನರಿಗೆ ನ್ಯಾಯ ಒದಗಿಸುವಲ್ಲಿ ಶ್ರಮಿಸಿ ಜನಪ್ರಿಯತೆ ಗಳಿಸಿದ್ದಾರೆ. ಇಂತಹ ಪ್ರಾಮಾಣಿಕ ಅಧಿಕಾರಿಯನ್ನು ಸದ್ಯ ಬೇರೆಡೆಗೆ ವರ್ಗಾವಣೆ ಮಾಡಿರುವುದು ಸಾರ್ವಜನಿಕರಿಗೆ ಅನ್ಯಾಯವಾಗಲಿದೆ. ಕಾರಣ ಪ್ರಾಮಾಣಿಕರ ಹಾಗೂ ದಕ್ಷ ಅಧಿಕಾರಿಯಾಗಿರುವ ಡಿವೈಎಸ್​ಪಿ ಅವರ ವರ್ಗಾವಣೆ ತಕ್ಷಣ ರದ್ದುಗೊಳಿಸಿ, ಅದೇ ಸ್ಥಳದಲ್ಲಿ ಮುಂದುವರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಮುಖಂಡರಾದ ಚಂದ್ರಶೇಖರ ಕಟ್ಟಿಮನಿ, ಸಿದ್ದಪ್ಪ ಸುರಪುರಕರ್​, ಸಮಿತಿ ತಾಲೂಕು ಸಂಚಾಲಕ ಬಸವರಾಜ ಶೆಳ್ಳಗಿ, ಮೂರ್ತಿ ಬೊಮ್ಮನಳ್ಳಿ, ರಾಮಣ್ಣ ಶೆಳ್ಳಗಿ, ಆನಂದ ಹೆಮನೂರ, ಖಾಜಾ ಹುಸೇನ್​ ಗುಡುಗುಂಟಿ, ಮಹೇಶ ಸುಂಗಲ್​, ಶರಣು ಹಸನಾಪುರ, ಗಣಪತಿ ದೇವಿಕೇರಿ, ಮರಲಿಂಗಪ್ಪ ದೇವಿಕೇರಿ, ಮಾನಪ್ಪ ಇಸ್ಲಾಂಪುರ, ತಿಪ್ಪಣ್ಣ ಪೂಜಾರಿ ಇತರರಿದ್ದರು.