ಮುದನೂರು ಗ್ರಾಮದ ಬಳಿಯ ತೂಬೂ ಸಂಖ್ಯೆ ೧೦ಎ ಗೇಟ್‌ಗೆ ರೈತರು ಪೂಜೆ ಸಲ್ಲಿಸಿದರು. ರೈತ ಸಂಘದ ಅಧ್ಯಕ್ಷ ಮಲ್ಲನಗೌಡ ನಗನೂರು ಇತರರಿದ್ದರು. ರಾಮನಗೌಡ ಅಲಿಪುರ್, ಬಸನಗೌಡ ಪಡೇಕ್ನೂರ್, ಸಿದ್ದರಾಮರೆಡ್ಡಿ ಬಳವಾಟ್, ಬಸವರಾಜ್ ಬಳಿ, ಸತೀಶ್ ರಸ್ತಾಪುರ್, ಶಾಂತಗೌಡ ಹಂದ್ರಾಳ, ರೆಡ್ಡಿ ಕಡಕಲ್, ಮಂಜುನಾಥ್ ಬೊಮ್ಮನಹಳ್ಳಿ, ಈ. ರಾಮರಾವ್, ಪಿ. ಆನಂದ್, ಕೆ ರಾಮಣ್ಣ, ಶರಣು ಕೊಳ್ಳಿ, ಮಹೇಶ್ ಕೊಳ್ಳಿ ಇತರರಿದ್ದರು.
- ಅನ್ನದಾತರ ಮನವಿಗೆ ಸ್ಪಂದಿಸಿದ ಸರ್ಕಾರ
ಹುಣಸಗಿ : ರೈತರ ಮನವಿಗೆ ಸ್ಪಂದಿಸಿ ಸರ್ಕಾರ ಕಾಲುವೆಗೆ ನೀರು ಹರಿಸಿರುವುದರಿಂದ ಬೆಳೆಗಳಿಗೆ ಜೀವ ತುಂಬಿದAತಾಗಿದೆ ಎಂದು ರೈತ ಸಂಘಟನೆ ಹುಣಸಗಿ ತಾಲೂಕು ಅಧ್ಯಕ್ಷ ಮಲ್ಲನಗೌಡ ನಗನೂರು ಹೇಳಿದರು.
ಇಲ್ಲಿನ ಮುದನೂರು ಗ್ರಾಮದ ತೂಬೂ ಸಂಖ್ಯೆ ೧೦ಎ ಗೇಟ್‌ಗೆ ಮಂಗಳವಾರ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕಾಲುವೆಗೆ ನೀರು ಹರಿಯುತ್ತಿರುವುದರಿಂದ ಸಾವಿರಾರು ಎಕರೆ ಕೃಷಿ ಭೂಮಿಗೆ ಜೀವಕಳೆ ಬರಲಿದೆ. ಆದರೆ ನೀರು ಹರಿಸುವುದಷ್ಟೇ ಸಾಲದು, ಕಾಲುವೆ ಕೊನೇ ಭಾಗದ ರೈತರ ಜಮೀನುಗಳಿಗೂ ಸಮರ್ಪಕ ಪ್ರಮಾಣದಲ್ಲಿ ನೀರು ತಲುಪುವಂತೆ ಅಽಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಅಲ್ಲದೆ ರೈತರು ಕೂಡ ನೀರು ಹಿತ ಮತ್ತು ಮಿತವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಸರ್ಕಾರ ಹಾಗೂ ಸಂಬAಽಸಿದ ಅಽಕಾರಿಗಳು ರೈತರ ಮನವಿಗೆ ಸ್ಪಂದಿಸಿ ನೀರು ಹರಿಸಿರುವುದು ಸ್ವಾಗತಾರ್ಹ ಎಂದರು.
ಈ ವೇಳೆ ರಾಮನಗೌಡ ಅಲಿಪುರ್, ಬಸನಗೌಡ ಪಡೇಕ್ನೂರ್, ಸಿದ್ದರಾಮರೆಡ್ಡಿ ಬಳವಾಟ್, ಬಸವರಾಜ್ ಬಳಿ, ಸತೀಶ್ ರಸ್ತಾಪುರ್, ಶಾಂತಗೌಡ ಹಂದ್ರಾಳ, ರೆಡ್ಡಿ ಕಡಕಲ್, ಮಂಜುನಾಥ್ ಬೊಮ್ಮನಹಳ್ಳಿ, ಈ. ರಾಮರಾವ್, ಪಿ. ಆನಂದ್, ಕೆ ರಾಮಣ್ಣ, ಶರಣು ಕೊಳ್ಳಿ, ಮಹೇಶ ಕೊಳ್ಳಿ, ಪ್ರಭು ಹಂದ್ರಾಳ, ಸಿದ್ದು ಹುಡದರ್, ಶಿವಪುತ್ರ ಹಡಪದ್ ಇತರರಿದ್ದರು.