ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ, ನಟ ವೆಂಕಟಪುರ ರೀಲ್ಸ್ ಮಂಜಣ್ಣ, ಕುಂಚ ಕಲಾವಿದ ದೇವನಹಳ್ಳಿ ಮೂರ್ತಿ, ಶರಣ ಸಾಹಿತ್ಯ ಪರಿಷತ್ತು ಶರಣಯ್ಯ ಹಿರೇಮಠ, ಐಬಸಾಪುರ ರಾಮು ಇದ್ದರು.
ವಿಜಯಪುರ: ಕನ್ನಡದ ಅಸ್ಮಿತೆ ಎತ್ತಿ ಹಿಡಿಯಲು ಹಾಗೂ ಮಕ್ಕಳಲ್ಲಿ ಸಾಹಿತ್ಯ, ನಾಟಕ, ಭಾಷೆ ಮತ್ತು ಸಂವಹನ ಕೌಶಲ ವೃದ್ಧಿಸಲು ಬೇಸಿಗೆ ಶಿಬಿರಗಳು ಅತ್ಯಗತ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ಕೃಷ್ಣಪ್ಪ ಅಭಿಪ್ರಾಯಪಟ್ಟರು.
ನಗರದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು. ಕಿರುತೆರೆ ನಟ ದೇವನಹಳ್ಳಿ ದೇವರಾಜು ಮಾತನಾಡಿ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಹಾಕಲು ಇಂತಹ ಶಿಬಿರಗಳು ಪೂರಕವಾಗಿವೆ. 35 ದಿನ ನಡೆದ ಶಿಬಿರದಲ್ಲಿ ಮಕ್ಕಳಿಗೆ ಜಾನಪದ, ಶಾಸ್ತ್ರೀಯ ನೃತ್ಯ, ಮೂಕಾಭಿನಯ, ಕಿರುನಾಟಕಗಳು ಸೇರಿ ವಿವಿಧ ಕಲೆಗಳಲ್ಲಿ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳು ಕಲೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬೆಳೆಯಬೇಕು ಎಂದರು.
ಶಿಬಿರಾರ್ಥಿಗಳಾದ 40ಕ್ಕೂ ಹೆಚ್ಚು ಮಕ್ಕಳು ಸಾಂಸತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನಾಟಕ ಮತ್ತು ನೃತ್ಯಗಳ ಮೂಲಕ ಮಕ್ಕಳು ಕಲಾ ಸಾಮರ್ಥ್ಯ ಪ್ರದರ್ಶಿಸಿದರು. ಕಸಾಪ ಗೌರವ ಕಾರ್ಯದರ್ಶಿ ಯಲಿಯೂರು ದೇವರಾಜ್, ಡ್ರೀಮ್ ಹಂರ್ಟಸ್ ಸ್ಟುಡಿಯೋ ದೀಪಿಕಾ ದೇವರಾಜ್, ಮಿಮಿಕ್ರಿ ಪ್ರೇಮ್ ಇತರರು ಇದ್ದರು.