ಬೈರಕೂರು ಸೊಸೈಟಿ ಕೈ ವಶ Society
ಮುಳಬಾಗಿಲು: ತಾಲೂಕಿನ ಬೈರಕೂರು ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ರಮೇಶ್ ರೆಡ್ಡಿ, ಉಪಾಧ್ಯಕ್ಷರಾಗಿ ಟಿ.ಎಸ್.ರವಿ ಆಯ್ಕೆಯಾಗಿದರು.Society
20 ವರ್ಷ ಕಾಲಗಳ ಕಾಲ ಜೆಡಿಎಸ್ ವಶದಲ್ಲಿದ್ದ ಸೊಸೈಟಿಯನ್ನು ಪ್ರಸ್ತುತ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಚುನಾವಣೆ ನಡೆಯಿತು. ಕಾಂಗ್ರೆಸ್ ಬೆಂಬಲಿತ 6, ಜೆಡಿಎಸ್ ಬೆಂಬಲಿತ 6 ನಿರ್ದೇಶಕರು ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಮೇಶ್ ರೆಡ್ಡಿ 7 ಮತ ಪಡೆದು ವಿಜೇತರಾದರು.
ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್, ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆದಿನಾರಾಯಣ ಅವರನ್ನು ಒಳಗೊಂಡಂತೆ ಹಲವು ಕಾಂಗ್ರೆಸ್ ಮುಖಂಡರ ಸಹಕಾರದಿಂದ ಸೊಸೈಟಿ ಕೈವಶವಾಗಿದೆ. ಇದು ಮುಂದಿನ ಚುನಾವಣೆಗೆ ಗೆಲುವಿನ ದಿಕ್ಸೂಚಿ ಎಂದು ಬೂಡದೇರು ಕಾಂಗ್ರೆಸ್ ಯುವ ಮುಖಂಡ ಆನಂದಮೋಹನ ರೆಡ್ಡಿ ಹೇಳಿದರು.