ಬೈಂದೂರು ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಮಂಜು ದೇವಾಡಿಗ ಅವರ ಜನ್ಮದಿನವನ್ನು ಆಚರಿಸಲಾಯಿತು.  
ರಾಜ್ಯ

ದೈನಂದಿನ ಒತ್ತಡಗಳಿಗೆ ಜೀವನ ಶೈಲಿಯೇ ಕಾರಣ

ಬೈಂದೂರು:ನಮ್ಮದೈನಂದಿನ ಒತ್ತಡಗಳಿಗೆ ನಮ್ಮಜೀವನ ಶೈಲಿಯೇ ಕಾರಣ.ನಿವೃತಿಯನಂತರದ ಬದುಕಿನಲ್ಲಿ ನಮ್ಮಪ್ರವೃತ್ತಿಯ ಮೂಲಕ ಜೀವನೋತ್ಸಾಹವನ್ನುವೃದ್ಧಿಸಿಕೊಳ್ಳಬೇಕು.ನಿವೃತ್ತಿಯನಂತರದ ಬದುಕು ಹೊಸಲೋಕದ ಪರಿಚಯಮೂಡಿಸುತ್ತದೆ.ಕೆಲವರಿಗೆಅದು ಮಧುರವಾದರೆ ಇನ್ನು ಕೆಲವರಿಗೆಯಮಯಾತನೆಯಾಗಬಹುದು.ಇದೆಲ್ಲವೂಅವರವರು ಜೀವನವನ್ನು ಕಾಣುವ ಮತ್ತುಸ್ವೀಕರಿಸುವ ಮನೋಭಾವದ ಮೇಲೆನಿರ್ಧಾರವಾಗುತ್ತದೆ ಎಂದುಉದ್ಯಾವರದ ಶ್ರೀ ಧರ್ಮಸ್ಥಳಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಅಧೀಕ್ಷಕ ಡಾ.ನಾಗರಾಜ್ಹೇಳಿದರು.

ಬೈಂದೂರುತಾಲೂಕು ಸರ್ಕಾರಿ ನಿವೃತ್ತ ನೌಕರರಸಂಘದ ಸಮಾರಂಭದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಮಾತನಾಡಿದರು.ಭಾವನಾತ್ಮಕಸಂಬಂಧಗಳು ಕಡಿಮೆಯಾಗುತ್ತಿರುವಇಂದಿನ ಕಾಲಘಟ್ಟದಲ್ಲಿ ಇಂತಹಸಂಘಟನೆಗಳಲ್ಲಿ ಸಕ್ರಿಯರಾಗುವಮೂಲಕ ನಮ್ಮ ಜೀವನದ ವಿಶೇಷಸಂದರ್ಭಗಳನ್ನು ನಮ್ಮ ಧಾರ್ಮಿಕ,ಸಾಂಸ್ಕೃತಿಕಚೌಕಟ್ಟಿನಲ್ಲಿ ಅರ್ಥಪೂರ್ಣವಾಗಿಆಚರಿಸಿ ಸಂಭ್ರಮಿಸಲು ಸಾಧ್ಯವಿದೆ.ಮಾನವಸಂಘಜೀವಿಯಾಗಿದ್ದು,ಸಮಾಜಮುಖಿಚಿಂತನೆಗಳನ್ನು ಅಳವಡಿಸಿಕೊಳ್ಳಬೇಕುಎಂದರು.

ಸಂಘದಅಧ್ಯಕ್ಷ ಐ.ನಾರಾಯಣಅಧ್ಯಕ್ಷತೆ ವಹಿಸಿದ್ದರು.ಇತ್ತೀಚೆಗೆನಿಧನರಾದ ಹಿರಿಯ ಸದಸ್ಯ,ನಿವೃತ್ತಶಿಕ್ಷಕ ಸುಬ್ಬಯ್ಯ ಗಾಣಿಗ ಅವರಿಗೆನುಡಿನಮನ ಸಲ್ಲಿಸಲಾಯಿತು.ಅದೃಷ್ಟವಂತಸದಸ್ಯರಿಗೆ ಬಹುಮಾನ ನೀಡಲಾಯಿತು.ಕಾರ್ಯದರ್ಶಿಗೋವಿಂದ ಬಿಲ್ಲವ ವರದಿ ವಾಚಿಸಿದರು.ಉಪಾಧ್ಯಕ್ಷಮಂಜು ದೇವಾಡಿಗ,ಬೈಂದೂರುಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆಕೆ.ಶಾರದಾಉಪಸ್ಥಿತರಿದ್ದರು.ಬೈಂದೂರುಹಿರಿಯ ನಾಗರಿಕ ವೇದಿಕೆ ಅಧ್ಯಕ್ಷಗಿರೀಶ್ ಶ್ಯಾನುಭಾಗ್ ವಂದಿಸಿದರು.