Business growth through the digital revolution 
ರಾಜ್ಯ

ಡಿಜಿಟಲ್​ ಕ್ರಾಂತಿಯಿಂದ ವ್ಯವಹಾರ ವೃದ್ಧಿ

ಕುಣಿಗಲ್​:: ತಂತ್ರಜ್ಞಾನವು ಗ್ರಾಹಕರ ಖರೀದಿ ವರ್ತನೆಯ ಮೇಲೆ ಪ್ರಭಾವ ಬೀರುತ್ತಿದೆ. ಡಿಜಿಟಲ್​ ಕ್ರಾಂತಿಯಿಂದ ಗ್ರಾಹಕರಿಗೆ ಅಗತ್ಯದ ವಸ್ತುಗಳು ಕೈಗೆಟುಕುವ ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತಿವೆ ಎಂದು ಪ್ರಭಾರ ಪ್ರಾಂಶುಪಾಲ ಸಿ.ಆರ್​.ಮನೋಜ್​ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ ಮತ್ತು ವಾಣಿಜ್ಯಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಗ್ರಾಹಕರ ವರ್ತನೆ ಮತ್ತು ಆಧುನಿಕ ಮಾರುಕಟ್ಟೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಹಕರ ಅವಶ್ಯಕತೆಗನುಗುಣವಾಗಿ ಸರಕು ಮತ್ತು ಸೇವೆಗಳ ಪೂರೈಸಲು ತಂತ್ರಜ್ಞಾನವು. ಮಾರುಕಟ್ಟೆಗೆ ಪೂರಕವಾದ ವಾತಾವರಣ ಸೃಷ್ಟಿಸುತ್ತಿದೆ ಎಂದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಟಿ.ಎನ್​.ನರಸಿಂಹಮೂರ್ತಿ ಮಾತನಾಡಿ, ಆಧುನಿಕ ಮಾರುಕಟ್ಟೆಯು ಗ್ರಾಹಕರಿಗೆ ವಿನೂತನ ಉತ್ಪನ್ನ ಮತ್ತು ಸೇವೆಗಳನ್ನು ಒದಗಿಸುತ್ತಿವೆ. ಅಂತರ್ಜಾಲ ತಾಣಗಳು ಸರಕು ಸೇವೆಗಳ ಗುಣಲಕ್ಷಣಗಳನ್ನು ಪರಾಮರ್ಶಿಸಲು ಸಹಕರಿಸಿ, ಜಾಗತಿಕ ಮಾರುಕಟ್ಟೆ ಒದಗಿಸುತ್ತಿವೆ. ಸಂತೃಪ್ತ ಗ್ರಾಹಕರು ನೀಡಿದ ರೇಟಿಂಗ್​ ಆಧರಿಸಿ ಗ್ರಾಹಕರು ಖರೀದಿ ಮಾಡಬೇಕೋ, ಬೇಡವೋ ಎಂದು ನಿರ್ಧರಿಸುತ್ತಾರೆ. ಆದುದರಿಂದ ಯುವಜನರು ತಂತ್ರಜ್ಞಾನ ಬಳಸಿ ನಾವೀನ್ಯತೆಯ ಉದ್ಯಮ ಕಟ್ಟಿ ಉದ್ಯಮಿಗಳಾಗಿ ಎಂದರು. ಉಪನ್ಯಾಸಕರಾದ ಡಾ.ಕುಮಾರಗೌಡ, ಕೆ.ಎಸ್​.ಮಹಾಲಕ್ಷಿ$್ಮ, ಡಾ.ಕುಸುಮಾ, ವಿದ್ಯಾ, ಮೇಘಾ ಇದ್ದರು.