ಹಂತ ಹಂತವಾಗಿ ಎಲ್ಲ ಕಡೆಗೂ ಬಸ್​ ವ್ಯವಸ್ಥೆ Bus system 
ರಾಜ್ಯ

ಹಂತ ಹಂತವಾಗಿ ಎಲ್ಲ ಕಡೆಗೂ ಬಸ್​ ವ್ಯವಸ್ಥೆ Bus system

ಕೋಲಾರ ಡೆಸ್ಕ್
ಮುಳಬಾಗಿಲು: ಗ್ರಾಮಾಂತರ ಪ್ರದೇಶಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ಸಂಕಲ್ಪ ಮಾಡಲಾಗಿದೆ. ಹಂತ, ಹಂತವಾಗಿ ಎಲ್ಲ ಹಳ್ಳಿಗಳಿಗೂ ಕೆಎಸ್​ಆರ್​ಟಿಸಿ ಬಸ್​ ಸಂಪರ್ಕ ಕಲ್ಪಿಸಲಾಗುವುದು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ಹೇಳಿದರು.Bus system
ತಾಲೂಕಿನ ಕಾಂತರಾಜ ಸರ್ಕಲ್​ ಬಳಿ ಸೋಮವಾರ ಮುಳಬಾಗಿಲಿನಿಂದ ಕಾಂತರಾಜ ವೃತ್ತ ಮಾರ್ಗವಾಗಿ ಆವಣಿ, ಶಾಪೂರು, ಅಬ್ಬಣಿ, ಹರಟಿ ಮಾರ್ಗವಾಗಿ ಕೋಲಾರ&ಮುಳಬಾಗಿಲು ಬಸ್​ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಕಾಂತರಾಜ ಸರ್ಕಲ್​ನಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್​ ಕಾಲೇಜು, ದೇವರಾಯಸಮುದ್ರ ಬಳಿ ಇರುವ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಈ ಬಸ್​ ವ್ಯವಸ್ಥೆ ಮಾಡಲಾಗಿದೆ. ಈ ಮಾರ್ಗದ ಎಲ್ಲ ಗ್ರಾಮಗಳ ವಿದ್ಯಾರ್ಥಿಗಳಿಗೂ ಸಾರ್ವಜನಿಕರಿಗೂ ಅನುಕೂಲವಾಗಲಿದೆ ಎಂದರು.
ಕರೋನಾ ನಂತರದ ದಿನಗಳಲ್ಲಿ ಕೆಎಸ್​ಆರ್​ಟಿಸಿ ತುಂಬಾ ಕಮರ್ಷಿಯಲ್​ ಆಗಿದೆ. ಸಾಕಷ್ಟು ಗ್ರಾಮಗಳಲ್ಲಿ ರಾತ್ರಿ ವೇಳೆಯಲ್ಲಿ ತಂಗಬೇಕಾಗಿದ್ದ ಬಸ್​ ಇಲ್ಲವಾಗಿವೆ. ಮುಂದಿನ ದಿನಗಳಲ್ಲಿ ಯಥಾ ಪ್ರಕಾರ ಬಸ್​ ಸಂಚಾರ ಮಾಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬೆಂಗಳೂರು ಕಡೆಯಿಂದ ತಿರುಪತಿಗೆ ಹೋಗುವ ಮತ್ತು ವಾಪಸ್​ ಬರುವ ಪ್ರತಿಯೊಂದು ಬಸ್​ ಸಹ ಮುಳಬಾಗಿಲು ನಗರಕ್ಕೆ ಬಂದು ಹೋಗಬೇಕೆಂದು ಪ್ರಯಾಣಿಕರು ಈಗಾಗಲೇ ಸಾಕಷ್ಟು ಮನವಿ ನೀಡಿದ್ದಾರೆ. ಆದ್ದರಿಂದ ಶೀಘ್ರವಾಗಿ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚೆ ಮಾಡಿ ತಿರುಪತಿಗೆ ಹೋಗುವ ಪ್ರತಿಯೊಂದು ಬಸ್​ ನಗರಕ್ಕೆ ಬಂದು ಹೋಗುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಬೆಸ್ಕಾಂ ಜೆ.ಇ.ಶ್ರೀನಾಥ್​, ದಲಿತ ಮುಖಂಡ ವರದಗಾನಹಳ್ಳಿ ಮುನಿವೆಂಕಟಪ್ಪ, ಚಲಪತಿ, ಮಂಜುನಾಥ್​ ಇತರರು ಇದ್ದರು.