Bus runs over elderly man's leg
ಚಿಂತಾಮಣಿ: ಬಸ್ ಹತ್ತಲು ಬಂದಿದ್ದ ಪ್ರಯಾಣಿಕನ ಕಾಲಿನ ಮೇಲೆ ಸಾರಿಗೆ ಬಸ್ ಹರಿದಿರುವುದು ನಗರದ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ಮಂಗಳವಾರ ನಡೆದಿದ್ದು, ಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಿಂತಾಮಣಿ ತಾಲೂಕಿನ ಯರ್ರಮ್ಮರೆಡ್ಡಿಹಳ್ಳಿಯ ಕೆ.ವೈ.ನಾರಾಯಣರೆಡ್ಡಿ (65) ಅವರು ಮಂಗಳವಾರ ಕನ್ನಂಪಲ್ಲಿಯಿಂದ ಯರ್ರಮ್ಮರೆಡ್ಡಿಹಳ್ಳಿಗೆ ಹೋಗಲು ಸಂಬಂಧಿ ಚಿಂತಾಮಣಿ ಕನ್ನಂಪಲ್ಲಿ ಬಡಾವಣೆಯ ನಿವಾಸಿ ಅಮರಾವತಿ ಜತೆ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಬೆಂಗಳೂರು&ಚಿಂತಾಮಣಿ ಮಾರ್ಗದ ಬಸ್ ಚಾಲಕನ ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದೆ. ನಾರಾಯಣರೆಡ್ಡಿ ಕೆಳಗೆ ಬಿದ್ದಾಗ ಬಸ್ನ ಮುಂಭಾಗದ ಚಕ್ರ ಬಲಗಾಲಿನ ಪಾದದ ಮೇಲೆ ಹರಿದಿದೆ. ತಕ್ಷಣ ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಂತಾಮಣಿ ನಗರ ಠಾಣೆಗೆ ದೂರು ನೀಡಿದ್ದಾರೆ.