ತಲ್ಲೂರ ಗ್ರಾಮದಿಂದ ಸುಬ್ಬಾಪುರ, ರಾಮಾಪುರ ಹಾಗೂ ಯರಗಟ್ಟಿ ಎರಡು ಮಾರ್ಗವಾಗಿ ಬೈಲಹೊಂಗಲಕ್ಕೆ ಸಂಚರಿಸುವ ಸಾರಿಗೆ ಬಸ್ಗಳಿಗೆ ಬಸ್ ಪಾಸ್ ಅನುಮತಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ವಿಜಯವಾಣಿ ಸುದ್ದಿಜಾಲ ತಲ್ಲೂರ
ಸುಬ್ಬಾಪುರ, ರಾಮಾಪುರ ಹಾಗೂ ಯರಗಟ್ಟಿ ಎರಡೂ ಮಾರ್ಗವಾಗಿ ಬೈಲಹೊಂಗಲಕ್ಕೆ ಸಂಚರಿಸುವ ಬಸ್ಗಳಲ್ಲಿ ಪಾಸ್ ಹೊಂದಿದವರೆಗೆ ಸಂಚಾರಕ್ಕೆ ಅನುಮತಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು, ಗ್ರಾಮಸ್ಥರು ಬುಧವಾರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ತಲ್ಲೂರಿನಿಂದ ಬೈಲಹೊಂಗಲಕ್ಕೆ ಎರಡು ಮಾರ್ಗವಾಗಿ ತೆರಳುವ ವಿದ್ಯಾರ್ಥಿಗಳು ದಿನನಿತ್ಯ ಸವದತ್ತಿ ಟಕದ ಬಸ್ಸಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಬೈಲಹೊಂಗಲ ಶಾಲೆ&ಕಾಲೇಜುಗಳಿಗೆ ಸಂಚರಿಸುತ್ತಾರೆ.
ಸವದತ್ತಿ ಟಕದ ಕೆಲ ನಿರ್ವಾಹಕರು ವಿದ್ಯಾರ್ಥಿಗಳ ಬಸ್ ಪಾಸ್ಗೆ ಅವಕಾಶ ಕೊಡುತ್ತಿಲ್ಲ. ಇದರಿಂದ ಶಾಲೆ ಕಾಲೇಜಿಗೆ ಹಾಜರಾಗದೆ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ. ಕೂಡಲೇ ವಿದ್ಯಾರ್ಥಿಗಳು ಬಸ್ಪಾಸ್ ಸಹಿತ ಎರಡು ಮಾರ್ಗದಲ್ಲಿ ಸಂಚರಿಸುವಂತೆ ಮೇಲಧಿಕಾರಿಗಳು ಆದೇಶ ಹೊರಡಿಸಬೇಕು ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಿಂದ ಕೆಲ ಹೊತ್ತು ಸಂಚಾರ ಸಿಕ್ಕು ಉಂಟಾಯಿತು. ಸ್ಥಳಕ್ಕೆ ಭೇಟಿ ನೀಡಿದ
ಯರಗಟ್ಟಿ ಪಿಎಸ್ಐ ಎಲ್.ಬಿ.ಮಾಳಿ ಮಾತನಾಡಿ, ವಿದ್ಯಾರ್ಥಿಗಳ ಮನವೊಲಿಸಿ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಒಂದೇ ವಾರದಲ್ಲಿ ಸಂಚರಿಸಲು ಮುಕ್ತ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಬಳಿಕ ವಿದ್ಯಾರ್ಥಿಗಳು ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಯುವ ಮುಖಂಡ ಪ್ರಕಾಶ ನಾಗನೂರ, ಪ್ರವಿಣ ಮಲ್ಲೂರ, ನವೀನ ಬೆನಕಟ್ಟಿ, ಹನುಮಂತ ಉಪ್ಪಾರ, ಸುಪ್ರೀತ ಅಣ್ಣಿಗೇರಿ, ಬಸವರಾಜ ಕೊಪ್ಪದ, ಕಾರ್ತಿಕ ಸುಬಾನವರ, ಮಹಾಂತೇಶ ಉಪ್ಪಿನ, ಸಚಿನ ಕಲ್ಲನವರ, ಯಶವಂತ ಹೊಸೂರ, ಸಂದೀಪ ಶೀಲವಂತರ, ಪ್ರವಿಣ ಮುರಗೋಡ, ಬಾಬು ಬಾನದಾರ, ಶಿವಾನಂದ ಬೈಲವಾಡ, ಸಿದ್ಧಾರ್ಥ ನಡುವಿನಮನಿ, ಚೇತನ ಕಲ್ಲನ್ನವರ, ಭರತ ನಡುವಿನಮನಿ ಇತರರಿದ್ದರು.