ಬಸ್ ಅಪಘಾತದಲ್ಲಿ ಗಾಯಗೊಂಡು ಆಳಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು.
ಆಳಂದ: ಕಮಲಾಪುರದಲ್ಲಿ ಬಸ್ಗಳೆರಡು ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟ ಟನೆ ಮರೆಮಾಸುವ ಮುನ್ನವೇ ತಾಲೂಕಿನ ರಾಜೋಳ ಕ್ರಾಸ್ ಬಳಿ ಸರ್ಕಾರಿ ಬಸ್ ಪಲ್ಟಿ ಹೊಡೆದ ಟನೆ ಬುಧವಾರ ಸಂಜೆ ನಡೆದಿದೆ.
ಹನೀಫಾ ಖಾಸೀಂ ಪಟೆಟ್, ದಿಶಾ ವಿಲಾಸ್, ಆದಿತ್ಯಾ ಕಾಂತು, ಪುಲಾಬಾಯಿ ರಾಠೋಡ್, ನಂದಿನಿ, ವಿಶಾಲ್ ವಿಲಾಸ ಚವ್ಣಾಣ್ ತೀವ್ರ ಗಾಯಗೊಂಡಿದ್ದು, ಇವರೆಲ್ಲರನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನುಳಿದವರಿಗೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಾಲಾ&ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿತ್ಯ ಸಂಜೆ 4ಕ್ಕೆ ಆಳಂದನಿಂದ ಜಮಗಾ, ಜಿಡಗಾ, ರಾಜೋಳಾ, ಭೂಸನೂರ ತಾಂಡಾ ಮಾರ್ಗವಾಗಿ ಸಂಗೋಳಿ ತಾಂಡಾಕ್ಕೆ ಬಸ್ ಸಂಚರಿಸುತ್ತದೆ. ಎಂದಿನಂತೆ ಬುಧವಾರ ಸಂಜೆ ಆಳಂದ ಬಸ್ ನಿಲ್ದಾಣದಿಂದ ಬಸ್ ಹೊರಟಿದ್ದು, ಜಮಗಾ, ಜಿಡಗಾ ದಾಟಿ ರಾಜೋಳ ಹೋಗುವ ಮಾರ್ಗ ಮಧ್ಯೆದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅವಡ ಸಂಭವಿಸಿದೆ.
ಶಾಲಾ ವಿದ್ಯಾರ್ಥಿಗಳು ಹಾಗೂ ವಿವಿಧ ಹಳ್ಳಿಗಳ ಜನ ಸೇರಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗುತ್ತಿದೆ. ತಿರುವಿನ ಬಳಿಯ ತಗ್ಗಿಗೆ ಉರುಳಿ ಬಿದ್ದಿದ್ದರಿಂದ ಪ್ರಯಾಣಿಕರ ಕಾಲು, ಕೈ ಮುರಿತವಾಗಿವೆ. ಆಂಬುಲೆನ್ಸ್ಗೆ ಕರೆ ಮಾಡಿದರೂ ಸಮಯಕ್ಕೆ ಬಾರದಿರುವುದರಿಂದ ಕೆಲವರು ತಮ್ಮ ಸಂಬಂಧಿಕರನ್ನು ಖಾಸಗಿ ವಾಹನಗಳ ಮೂಲಕ ಆಸ್ಪತ್ರೆಗೆ ಕರೆದೊಯ್ದರು.
ಕಳೆದೊಂದು ವಾರದಲ್ಲಿ ಮೂರನೇ ಬಾರಿಗೆ ಸರ್ಕಾರಿ ಬಸ್ ಪಲ್ಟಿಯಾಗಿದ್ದು, ಸುರಕ್ಷತೆಗೆ ಹೆಸರಾಗಿದ್ದ ಕೆಕೆಆರ್ಟಿಸಿ ಬಸ್ಗಳನ್ನು ಹತ್ತಲು ಪ್ರಯಾಣಿಕರಿಗೆ ಭಯಪಡುವಂತಾಗಿದೆ.
ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಪ್ರಯಾಣಿಕರಿಗೆ ಗಾಯಗಳಾಗಿದ್ದು, ಕೆಲವರನ್ನು ಖಾಸಗಿ ಆಸ್ಪತ್ರೆಗೆ ಹಾಗೂ ತೀವ್ರ ಗಾಯಗೊಂಡವರನ್ನು ಜಿಮ್ಸ್ಗೆ ಸೇರಿಸಲಾಗಿದೆ. ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ.
— > ಯೋಗಿನಾಥ ಸರಸಂಬಿ, ಆಳಂದ ಘಟಕ ವ್ಯವಸ್ಥಾಪಕ