ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಬಳಿ ಅಪಘಾತವಾದ ಬಸ್​. 
ರಾಜ್ಯ

ನಿಂತಿದ್ದ ಲಾರಿಗೆ ಡಿಕ್ಕಿಯಾದ ಬಸ್​ / DODDABALLAPUR

ದೊಡ್ಡಬಳ್ಳಾಪುರ : ಮಾಕಳಿ ರೈಲ್ವೆ ನಿಲ್ದಾಣ ಬಳಿಯ ತಿರುವಿನಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಶುಕ್ರವಾರ ಮುಂಜಾನೆ ಕಾರ್ಮಿಕರಿದ್ದ ಬಸ್​ ಡಿಕ್ಕಿಯಾಗಿ ಚಾಲಕ ಸೇರಿ 10 ಮಂದಿ ಗಾಯಗೊಂಡಿದ್ದಾರೆ. ಗೌರಿಬಿದನೂರಿನಿಂದ ಖಾಸಗಿ ಕಾರ್ಖಾನೆಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಾಗ ಮುಂಜಾನೆ ಮಂಜಿನಿಂದ ರಸ್ತೆ ಕಾಣದೆ ಅಪಘಾತ ಸಂಭವಿಸಿದೆ. ಚಾಲಕನ ಕಾಲಿಗೆ ಗಂಭೀರ ಪೆಟ್ಟಾಗಿದ್ದು, 10 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಲಾರಿ ಚಾಲಕನ ರ್ನಿಲಕ್ಷ್ಯ : ಕೆಟ್ಟು ನಿಂತ ಲಾರಿ ಚಾಲಕ ಇತರ ವಾಹನಗಳಿಗೆ ಸೂಚನೆ ದೊರಕುವಂತೆ ರಿಪ್ಲೆಕ್ಟರ್​ ಅಳವಡಿಸದೆ ಇರುವುದು, ಮಂಜಿನ ಹಿನ್ನೆಲೆಯಲ್ಲಿ ಕೆಟ್ಟು ನಿಂತ ಲಾರಿ ಕಾಣದೆ ಬಸ್​ ಅಪಘಾತವಾಗಲು ಕಾರಣವಾಗಿದೆ ಎನ್ನಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.