ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಎಎಐ ರೇವಣ್ಣ ಸಿದ್ದಪ್ಪ ರೀಲ್ಸ್​ ಮಂಜಗೆ ದಂಡ ಹಾಕಿ ಬುದ್ದಿಹೇಳಿದರು. ಸಿಬ್ಬಂದಿ ಗಣಪತಿ ಇದ್ದರು. 
ರಾಜ್ಯ

ಬನ್ರೋ ಬನ್ರೋ ಮಂಜಣ್ಣನಿಗೆ ದಂಡ / DODABALLAPUR

ದೊಡ್ಡಬಳ್ಳಾಪುರ: ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್​ ಮಾಡುತ್ತಿದ್ದ ರೀಲ್ಸ್​ ಮಂಜಣ್ಣ ಬೈಕ್​ನಲ್ಲಿ ತ್ರಿಬಲ್​ ರೈಡ್​ ಮಾಡಿ ಪೊಲೀಸರಿಗೆ ದಂಡ ಕಟ್ಟಿದ್ದಾನೆ.
ನಗರದ ಈ ಮಂಜುನಾಥ್​ ರೀಲ್ಸ್​ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ "ಬನ್ರೋ ಬನ್ರೋ" ಎನ್ನುವ ಮೂಲಕ ಪ್ರಸಿದ್ಧಿಯಾಗಿದ್ದಾನೆ. ಇದೀಗ ಇದೇ ರೀಲ್ಸ್​ ಮಂಜಣ್ಣ ರೀಲ್ಸ್​ ಮಾಡುವ ಇಬ್ಬರು ಮಹಿಳೆಯರ ಜತೆಗೆ ಹೆಲ್ಮೆಟ್​ ಇಲ್ಲದೇ ತ್ರಿಬಲ್​ ರೈಡಿಂಗ್​ ಮಾಡಿದ ರೀಲ್ಸ್​ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಕೂಡಲೇ ಠಾಣೆಗೆ ಕರೆಸಿ ದಂಡ ಹಾಕಿದ್ದಾರೆ. ಇನ್ನು ಮುಂದೆ ಸಂಚಾರ ನಿಯಮ ಪಾಲಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಜತೆಗೆ ಮಂಜಣ್ಣನೂ ತಪ್ಪಿನ ಅರಿವಾಗಿ ಕ್ಷಮೆ ಕೇಳಿ ದಂಡ ಕಟ್ಟಿದ್ದಾರೆ.
ಮಂಜಣ್ಣನಿಗೆ ಜ್ಞಾನೋದಯವಾಗಿದ್ದು, ಹೆಲ್ಮೆಟ್​ ಹಾಕದೆ ತ್ರಿಬಲ್​ ರೈಡಿಂಗ್​ ಮಾಡಿದ್ದು ನನ್ನ ತಪ್ಪು, ಮನೆಯಲ್ಲಿ ನಮ್ಮನ್ನೇ ನಂಬಿರುವ ಜನರಿದ್ದಾರೆ, ಸುರಕ್ಷಿತ ಚಾಲನೆಗೆ ಹೆಲ್ಮೆಟ್​ ಧರಿಸಿ ಎಂದು ಜನರಿಗೆ ಮನವಿ ಮಾಡಿದ್ದಾರೆ.