ಗುಂಡ್ಲುಪೇಟೆ ಪಟ್ಟಣದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಎತ್ತಿನಗಾಡಿಗಳ ಮೆರವಣಿಗೆ ಹಾಗೂ ಟ್ರಾೃಕ್ಟರ್ ರ‌್ಯಾಲಿಗಳಿಗೆ ಸಿ.ಎಸ್.ನಿರಂಜನಕುಮಾರ್ ಚಾಲನೆ ನೀಡಿ ಮಾತನಾಡಿದರು. ದಿಲೀಪ್ ಹಂಗಳ, ಮಾಧು, ಕುಮಾರ್, ಲೋಕೇಶ್‌ಇತರರಿದ್ದರು. 
ರಾಜ್ಯ

ಪ್ರೊ.ಎಂಡಿಎನ್ ಜನ್ಮದಿನದ ಅಂಗವಾಗಿ ಎತ್ತಿನಗಾಡಿಗಳ ಮೆರವಣಿಗೆ

ಗುಂಡ್ಲುಪೇಟೆ: ರೈತಸಂಘಟನೆಗಳ ವತಿಯಿಂದ ಪಟ್ಟಣದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ 90ನೇ ವರ್ಷದ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಿಂದ ಆಯೋಜಿಸಿದ್ದ ಎತ್ತಿನಗಾಡಿಗಳ ಮೆರವಣಿಗೆ ಹಾಗೂ ಟ್ರಾೃಕ್ಟರ್ ರ‌್ಯಾಲಿಗಳಿಗೆ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್, ಪ್ರೊ.ನಂಜುಂಡಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಪ್ರೊ. ನಂಜುಂಡಸ್ವಾಮಿಯವರು ರೈತಪರ ಹೋರಾಟಕ್ಕೆ ಹೊಸ ಆಯಾಮ ನೀಡಿದರು. ಇಂದಿಗೂ ರೈತಸಂಘಟನೆಗಳು ಅದೇ ಹಾದಿಯಲ್ಲಿ ಸಾಗುತ್ತಿವೆ ಎಂದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದ ಮೆರವಣಿಗೆ ಹಳೆ ಪ್ರವಾಸಿ ಮಂದಿರದ ಮಾರ್ಗವಾಗಿ ತಾಲೂಕು ಕಚೇರಿವರೆಗೆ ಸಾಗಿತು.
ರಕ್ತದಾನ ಶಿಬಿರ, ಅನ್ನಸಂತರ್ಪಣೆ
ಈ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ನೂರಾರು ಯುವ ರೈತರು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿ ರೈತರು ಸಾರ್ವಜನಿಕರಿಗೆ ಹಣ್ಣುಹಂಪಲು ವಿತರಣೆ ಹಾಗೂ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ರೈತಸಂಘದ ತಾಲೂಕು ಅದ್ಯಕ್ಷ ಹಂಗಳ ದಿಲೀಪ್ ಹಂಗಳ, ಮಾಧು, ಕುಮಾರ್, ಲೋಕೇಶ್, ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ಕುಂದಕೆರೆ ಸಂಪತ್ತು, ಮಹೇಶ್ ಹಾಲಹಳ್ಳಿ, ಪ್ರಕಾಶ್ ಕಬ್ಬಹಳ್ಳಿ, ಶಿವಮಲ್ಲು ಹೊನ್ನೆಗೌಡನಹಳ್ಳಿ, ಮಹೇಶ್, ಸಿದ್ದಪ್ಪ ಶಿರಮಳ್ಳಿ, ಶಿವಕುಮಾರ್, ಮಹದೇವಪ್ಪ, ಬಿಜೆಪಿ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಕಣ್ಣೇಗಾಲಸ್ವಾಮಿ ಸೇರಿದಂತೆ ಮತ್ತಿತರರಿದ್ದರು.