WEB
ರಾಜ್ಯ

ಸಪ್ತರ್ಷಿಗಳ ಅನುಗ್ರಹದಿಂದ ಮಹರ್ಷಿಯಾದ ಬುಕ್ಕ

ಕಾಡಿನ ಜನಾಂಗದಲ್ಲಿ ಹುಟ್ಟಿ ಸಿಕ್ಕ ಸಿಕ್ಕಲ್ಲಿ ಕಳ್ಳತನ ದರೋಡೆ ಮಾಡುತ್ತ ಕ್ರೂರ ಜೀವನ ನಡೆಸುತ್ತಿದ್ದ ಬುಕ್ಕ (ಬೇಡ) ದರೋಡೆ ಕಳ್ಳತನ ಮಾಡಲಿಕ್ಕೆಂದು ಬೇಟೆ ನಾಯಿಗಳನ್ನು ಸಾಕಿದ್ದ. ಈ ಬುಕ್ಕ ವಾಸವಿದ್ದ ಅಡವಿಯ ಮೂಲಕ ಸಾಗುತ್ತಿದ್ದ ಸಪ್ತ ಮಹರ್ಷಿಗಳಾದ ಮರೀಚಿ, ಅತ್ರಿ, ಅಂಗೀರಸ, ಪುಲಹ, ಪುಲಸ್ಱ, ಕ್ರತು, ವಸಿಷ್ಠ ಅವರನ್ನು ನೋಡಿ ಬುಕ್ಕ ನಾಯಿಗಳನ್ನು ಛೂ ಬಿಡುತ್ತಾನೆ. ರಣಬೇಟೆಯಾಡುವ ನಾಯಿಗಳು ರಭಸದಿಂದ ಓಡಿಬಂದು ಸರ್ಪ¤ಗಳನ್ನು ನೋಡುತ್ತಿದ್ದಂತೆ ವಿನಮ್ರವಾಗಿ ಕಾಲನೆತ್ತಿ ನಮಸ್ಕಾರ ಮಾಡಿ ನಿಲ್ಲುತ್ತವೆ.

ಕಾಡಿನ ಜನಾಂಗದಲ್ಲಿ ಹುಟ್ಟಿ ಸಿಕ್ಕ ಸಿಕ್ಕಲ್ಲಿ ಕಳ್ಳತನ ದರೋಡೆ ಮಾಡುತ್ತ ಕ್ರೂರ ಜೀವನ ನಡೆಸುತ್ತಿದ್ದ ಬುಕ್ಕ (ಬೇಡ) ದರೋಡೆ ಕಳ್ಳತನ ಮಾಡಲಿಕ್ಕೆಂದು ಬೇಟೆ ನಾಯಿಗಳನ್ನು ಸಾಕಿದ್ದ. ಈ ಬುಕ್ಕ ವಾಸವಿದ್ದ ಅಡವಿಯ ಮೂಲಕ ಸಾಗುತ್ತಿದ್ದ ಸಪ್ತ ಮಹರ್ಷಿಗಳಾದ ಮರೀಚಿ, ಅತ್ರಿ, ಅಂಗೀರಸ, ಪುಲಹ, ಪುಲಸ್ಱ, ಕ್ರತು, ವಸಿಷ್ಠ ಅವರನ್ನು ನೋಡಿ ಬುಕ್ಕ ನಾಯಿಗಳನ್ನು ಛೂ ಬಿಡುತ್ತಾನೆ. ರಣಬೇಟೆಯಾಡುವ ನಾಯಿಗಳು ರಭಸದಿಂದ ಓಡಿಬಂದು ಸರ್ಪ¤ಗಳನ್ನು ನೋಡುತ್ತಿದ್ದಂತೆ ವಿನಮ್ರವಾಗಿ ಕಾಲನೆತ್ತಿ ನಮಸ್ಕಾರ ಮಾಡಿ ನಿಲ್ಲುತ್ತವೆ. ‘ಓ... ಇವರು ಮಾಂತ್ರಿಕರಿರಬೇಕು’ ಎಂದೆಣಿಸಿದ ಬುಕ್ಕ ಅವರ ಮೇಲೆ ಅಸ್ತ್ರ ಶಸ್ತ್ರ ಬಾಣಗಳನ್ನು ಭಯಂಕರವಾಗಿ ಹೂಡುತ್ತಾನೆ. ಆದರೆ ಅವ್ಯಾವುವೂ ಕೆಲಸ ಮಾಡದೆ ನಿರುಪಯುಕ್ತವಾಗುತ್ತವೆ. ‘ಯಾರಿವರು’ ಅನ್ನುವ ಕುತೂಹಲಭರಿತ ಪ್ರಶ್ನೆಯೊಂದಿಗೆ ಹತ್ತಿರ ಬಂದು ‘ಯಾರು ನೀವು’ ಅಂತ ಕೇಳುತ್ತಾನೆ. ಆಗ ವಸಿಷ್ಠರು ಬುಕ್ಕನನ್ನು ದೃಷ್ಟಿಸಿ ನೋಡಿ ‘ಓ ಈತ ನಮ್ಮಸಹೋದರ ಪ್ರಾಚೇತಸನ ಮಗ’ ಅಂತ ಅತ್ರಿ ಸೇರಿದಂತೆ ಎಲ್ಲರಿಗೂ ಪಿಸುಗುಟ್ಟಿದಾಗ, ಬುಕ್ಕ ತಕ್ಷಣ ‘ನೀವು ಯಾರು ಅಂತ ಹೇಳಿ, ನೀವು ಏನೇ ಯೋಜನೆ ರೂಪಿಸಿದರೂ ನಿಮ್ಮನ್ನು ಯಾರೂ ರಕ್ಷಣೆ ಮಾಡಲು ಸಾಧ್ಯವಿಲ್ಲ, ನಿಮ್ಮನ್ನು ದೋಚಿಯೇ ತೀರುತ್ತೇನೆ’ ಅಂತ ಗುಡುಗುತ್ತಾನೆ. ಆಗ ಸರ್ಪ¤ಗಳು ನಸುನಕ್ಕು ತಮ್ಮ ತಪಃಶಕ್ತಿಯಿಂದ ಚಿನ್ನದ ರಾಶಿಯನ್ನು ಸೃಷ್ಟಿಸಿ ‘ತಗೋ ಇದನ್ನು ಎತ್ತಿಕೊಂಡು ಹೋಗು. ನಿನ್ನ ತಂದೆ, ತಾಯಿ, ಹೆಂಡತಿ, ಮಕ್ಕಳನ್ನು ಸಾಕುವುದಕ್ಕೆ ತಾನೇ ಈ ನೀಚ ಕೃತ್ಯವನ್ನು ಮಾಡುತ್ತಿರುವುದು? ತೆಗೆದುಕೊಂಡು ಹೋಗು. ಆದರೆ ನೀನು ಮಾಡುತ್ತಿರುವುದು ಮಹಾ ಪಾಪದ ಕೆಲಸ ನೆನೆಪಿರಲಿ. ಈ ಪಾಪದ ಕೆಲಸವನ್ನು ಯಾರಿಗೋಸ್ಕರ ಮಾಡುತ್ತಿದ್ದೀಯೋ ಅವರು ನಿನ್ನ ಪಾಪವನ್ನು ಹಂಚಿಕೊಳ್ಳುತ್ತಾರೋ?’ ಎಂದು ಕೇಳುತ್ತಾರೆ. ಬುಕ್ಕ ‘ಹಂಚಿಕೊಳ್ಳುತ್ತಾರೆ’ ಅಂತ ಹೇಳುತ್ತಾನೆ. ಆಗ ಅವರು ‘ಮೊದಲು ನಿನ್ನ ಕುಟುಂಬದವರನ್ನು ಕಂಡು ಕೇಳಿ ಬಾ’ ಅಂತ ಕಳುಹಿಸುತ್ತಾರೆ. ಆಗ ಬುಕ್ಕ ತನ್ನ ತಂದೆ ಬಳಿ ಬಂದು ‘ನನ್ನ ಕೃತ್ಯಗಳ ಪಾಪದ ಹೊರೆಯನ್ನು ನೀನು ಸಹ ಹಂಚಿಕೊಳ್ಳುತ್ತೀ ಅಲ್ಲವಾ?’ ಎಂದಾಗ ಆತ ‘ನಿನ್ನ ಹುಟ್ಟಿಸಿ ನಾನು ಪಾಪ ಮಾಡಿರುವ ಕಾರಣ ಅದನ್ನು ತೀರಿಸಲೇ ನನ್ನಿಂದ ಆಗುತ್ತಿಲ್ಲ, ಇನ್ನು ನಿನ್ನ ಕೃತ್ಯಗಳ ಪಾಪವನ್ನು ಹಂಚಿಕೊಳ್ಳಲು ಸಾಧ್ಯವೇ?’ ಅನ್ನುತ್ತಾನೆ. ಸರಿ, ತಾಯಿ ಬಳಿ ಬಂದು ಕೇಳಿದಾಗ, ಆಕೆಯೂ ಒಪ್ಪುವುದಿಲ್ಲ. ಹೆಂಡತಿ, ಮಕ್ಕಳೂ ಒಪ್ಪುವುದಿಲ್ಲ. ಆಗ ಬುಕ್ಕ ದುಃಖಿತನಾಗಿ ವಾಪಸ್ ಬಂದು ಸರ್ಪ¤ಗಳ ಕಾಲಿಗೆ ಬಿದ್ದು ‘ನಾನು ಮಾಡಿರುವ ಪಾಪಗಳಿಂದ ಮುಕ್ತಿ ದೊರೆಯಲು ದಾರಿ ತೋರಿ’ ಎಂದು ಗೋಗರೆಯುತ್ತಾನೆ. ಸರ್ಪ¤ಗಳು ಸೂರ್ಯ ಗಾಯತ್ರಿ ಮಂತ್ರ ನೀಡಿ ಹರಸಿ ‘ನಾವು ಬರುವವರೆಗೂ ಮಂತ್ರದ ಮೂಲಕ ತಪೋನಿರತನಾಗಿರು’ ಎಂದು ಹೇಳಿ ಹಿಮಾಲಯದ ಕಡೆಗೆ ಹೊರಡುತ್ತಾರೆ.

ಬುಕ್ಕ ವಾಲ್ಮೀಕಿಯಾದ ಬಗೆ: ಅನೇಕ ವರ್ಷಗಳ ಕಾಲ ಚಳಿ ಗಾಳಿ ಮಳೆ ಬಿಸಿಲು ಅನ್ನದೇ ಬುಕ್ಕ ಸುದೀರ್ಘ ಕಠಿಣ ತಪಸ್ಸು ಮಾಡುತ್ತಾನೆ. ಸರ್ಪ¤ಗಳು ಹಿಮಾಲಯದಿಂದ ವಾಪಸ್ಸು ಬಂದು ಬುಕ್ಕನನ್ನು ನೋಡಿದಾಗ ಅವನು ಕೂತ ಜಾಗದ ಸುತ್ತಲೂ ಹುತ್ತ ಬೆಳೆದಿರುತ್ತದೆ. ವರಿಷ್ಠರು ವರುಣನಲ್ಲಿ ಮಳೆಗಾಗಿ ಪ್ರಾರ್ಥಿಸುತ್ತಾರೆ. ಮಳೆ ಬರುತ್ತದೆ. ಅದರ ರಭಸಕ್ಕೆ ಹುತ್ತ ಕರಗುತ್ತದೆ. ಸರ್ಪ¤ಗಳು ಒಟ್ಟಿಗೆ ಕಮಂಡಲದಿಂದ ನೀರು ಪ್ರೋಕ್ಷಣೆ ಮಾಡಿ ಸಂಸ್ಕೃತದಲ್ಲಿ ವಲ್ಮೀಕ (ವಾಲ್ಮೀಕಿ) ಅಂತ ಕರೆಯುತ್ತಾರೆ. ಅದರರ್ಥ ‘ಹುತ್ತದಿಂದ ಹೊರಗೆ ಬಾ’ ಅಂತ. ಹಾಗೆ ಬುಕ್ಕನು ವಾಲ್ಮೀಕಿ ಆಗುತ್ತಾನೆ. ಸರ್ಪ¤ಗಳು ಅವನಿಗೆ ಅಮೃತ ಸಮಾನ ಜಲ ಪ್ರೋಕ್ಷಿಸುತ್ತಾರೆ. ಆಗ ಅವನಲ್ಲಿ ದೈವತ್ವ ಪ್ರಕಟವಾಗಿ ಪವಿತ್ರ ಪಾವನ ನಾಮ ‘ರಾಮ’ ಎಂದು ಉಚ್ಚರಿಸುತ್ತಾನೆ. ಬುಕ್ಕನನ್ನು ‘ಹುತ್ತದಿಂದ ಹೊರಗೆ ಬಾ’ ಅಂತ ಕರೆದ ದಿನವೇ ವಾಲ್ಮೀಕಿ ಜಯಂತಿಯ ದಿನವಾಯಿತು.

ಪೂರ್ವ ಜನ್ಮದ ಅರಿವು: ಬುಕ್ಕನಿಂದ ವಾಲ್ಮೀಕಿಯಾಗಿ ಪರಿವರ್ತನೆ ಆದಾಗ ತಾನು ಹಿಂದಿನ ಜನ್ಮದಲ್ಲಿ ಏನಾಗಿದ್ದೆ ಎಂಬ ಅರಿವಾಗುತ್ತದೆ. ತಾನು ಪ್ರಾಚೇತಸ ಮಹರ್ಷಿಯ ಮಗನಾಗಿದ್ದು ನನ್ನ ತಂದೆ ಅವರ ತಂದೆಯಾದ ಬ್ರಹ್ಮದೇವರಿಂದ ಹೊಟ್ಟೆಯ ಭಾಗದಿಂದ ಆರನೇ ಮಗನಾಗಿ ಹುಟ್ಟುತ್ತಾನೆ. ಅವರಿಂದ ಮೂಲ ರಾಮಾಯಣ ಕೇಳಿ, ಅದನ್ನು ಬರಹಕ್ಕಿಳಿಸಿ ನೂರು ಕೋಟಿ ಶ್ಲೋಕ, ಇನ್ನೂರು ಕೋಟಿ ಸಾಲನ್ನು ಬರೆದು ಬ್ರಹ್ಮಲೋಕ ಹಾಗೂ ದೇವಲೋಕವನ್ನು ಸಂತುಷ್ಟಿಗೊಳಿಸಿದ್ದನು. ಇದರಿಂದಾಗಿ ಅವನಿಗೆ ಹೋದ ಕಡೆಯೆಲ್ಲ ಗೌರವ, ಸನ್ಮಾನ. ಇದರಂತೆ ದೇವಲೋಕದಿಂದ ದೇವೇಂದ್ರನೂ ಪ್ರಾಚೇತಸ ಮಹರ್ಷಿಯನ್ನು ಆಹ್ವಾನಿಸಿ ಸತ್ಕರಿಸುತ್ತಾನೆ. ಆ ಸಂದರ್ಭದಲ್ಲಿ ಪ್ರಾಚೇತಸ ಮಹರ್ಷಿ ದೇವನರ್ತಕಿಯರತ್ತ ವ್ಯಾಮೋಹಿತನಾಗಿ, ಮಗು ಹುಟ್ಟುತ್ತದೆ. ಅದು ಹುಟ್ಟುತ್ತಲೇ ‘ಹಸಿವು ಹಸಿವು’ ಅಂತ ಚೀರಿದಾಗ ಪ್ರಾಚೇತಸ ಮಹರ್ಷಿಗೆ ಸಿಟ್ಟು ಬರುತ್ತದೆ. ‘ನೀನು ಕಾಡಲ್ಲಿ ಹುಟ್ಟಿ ಅಲೆಯುವಂತಾಗಲಿ’ ಅಂತ ಶಾಪ ನೀಡುತ್ತಾನೆ. ಆದರೆ ಆ ಮಗು ಹುಟ್ಟಿರುವುದೇ ಲೋಕ ಕಲ್ಯಾಣಕ್ಕಾಗಿ ಎಂದು ಅರಿವಾಗಿ, ಮತ್ತೆ ಆ ಮಗುವಿಗೆ ‘ಯಾವತ್ತು ನಿನಗೆ ಸರ್ಪ¤ಗಳು ದರ್ಶನ ನೀಡುತ್ತಾರೋ ಅಂದು ನಿನ್ನ ಶಾಪ ವಿಮೋಚನೆಯಾಗಿ ರಾಮಾಯಣ ಬರೆಯುವಂತಾಗಲಿ’ ಎಂದು ವರ ನೀಡುತ್ತಾನೆ. ಹೀಗೆ ಪೂರ್ವದ ತನ್ನ ವೃತ್ತಾಂತವನ್ನು ಅರಿತು ವಾಲ್ಮೀಕಿ ಮಹರ್ಷಿಗಳು ‘ಲೋಕನೀತಿಯನ್ನು ರಾಮಾಯಣದ ಮೂಲಕ ಹೇಳಲು ಬ್ರಹ್ಮನು ಪ್ರಾಚೇತಸರಿಗೆ ನೀಡಿದಂತೆ ನನಗೂ ಅವಕಾಶ ಕೊಟ್ಟಿದ್ದು, ಅದನ್ನು ಮಾಡುವುದೇ ಸುಯೋಗ’ ಎಂದರಿತು ರಾಮಾಯಣ ಬರೆಯಲು ಶುರುವಿಟ್ಟ್ಟುಕೊಂಡರು.

ನಾಲ್ಕು ವೇದಗಳೇ ರಾಮಾಯಣಕ್ಕೆ ಮೂಲ: ನಾಲ್ಕು ವೇದಗಳ ಸಾರವನ್ನೇ ವಾಲ್ಮೀಕಿ ಮಹರ್ಷಿಗಳು ರಾಮಾಯಣದಲ್ಲಿ ಅನೇಕ ಪಾತ್ರಗಳ ಮೂಲಕ ತುಂಬಿದರು. ಸೂರ್ಯ ಚಂದ್ರರಿರುವತನಕ ಜನಸಾಮಾನ್ಯರ ಬಾಳಲ್ಲಿ ಬೆಳಗುವ ಬೆಳಕಾಗಿ ಲೋಕನೀತಿಯನ್ನು, ಬ್ರಹ್ಮ ಸತ್ಯವನ್ನ ಸಾರಿದರು. ಮೊದಲ ವೇದವಾದ ಋಗ್ವೇದದಿಂದ ಮೊದಲ ‘ರಾ’ ಅಕ್ಷರವನ್ನು, ಎರಡನೇ ವೇದವಾದ ಸಾಮವೇದದಿಂದ ಎರಡನೇ ‘ಮ’ ಅಕ್ಷರವನ್ನು ತೆಗೆದುಕೊಂಡು, ಮೂರನೇ ವೇದ ಯಜುರ್ವೆದದಿಂದ ‘ಯ’ ಎಂಬ ಮೂರನೇ ಅಕ್ಷರವನ್ನು ಹಾಗೂ ನಾಲ್ಕನೇ ವೇದವಾದ ಅಥರ್ವಣದಿಂದ ‘ಣ’ ಎಂಬ ಅಕ್ಷರವನ್ನು ತೆಗೆದುಕೊಂಡು ‘ರಾಮಾಯಣ’ ಎಂಬ ಹೆಸರನ್ನಿಟ್ಟು ಲೋಕಪ್ರಿಯಗೊಳಿಸಿದರು.

ರಾಮಾಯಣದ ಸಂದೇಶವೇನು?: ಪಿತೃವಾಕ್ಯ ಪರಿಪಾಲನೆ, ಸಾಧು ಸಜ್ಜನರ ರಕ್ಷಣೆ, ದುಃಖಿಗಳಿಗೆ ನ್ಯಾಯ ಕೊಡಿಸುವುದು, ಅಧರ್ಮವನ್ನು ಕೊನೆಗಾಣಿಸುವುದು, ಭಕ್ತಿ ಶ್ರೇಷ್ಠ ಅಣ್ಣನನ್ನು ಅನುಸರಿಸುವುದು, ಗಂಡ ಸಮಾಜಕ್ಕೆ ಸೇವೆ ಸಲ್ಲಿಸುವಾಗ ಹೆಂಡತಿಯು ತನ್ನ ಸ್ವಾರ್ಥ ನೋಡದಿರುವುದು, ಪರರ ಪತ್ನಿಗಾಗಿ ಮತ್ತು ಪರರ ಆಸ್ತಿಗಾಗಿ ಆಸೆ ಪಡದಿರುವುದು, ಸಹಕಾರ ತತ್ತ್ವ, ರಾಜನು ಯಾವತ್ತೂ ಪ್ರಜಾಸೇವೆಯಲ್ಲಿರುವುದು, ಅಧಿಕಾರ ಅಂತಸ್ತು ಸಂಪನ್ಮೂಲಗಳನ್ನು ಬಳಸುವಾಗ ಇದು ದೇವರು ಕೊಟ್ಟ ಅವಕಾಶ ಎಂದೆಣಿಸಿಸುವುದು, ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ... ಮುಂತಾದ ಗುಣಗಳನ್ನು ತಿಳಿಯಲು ರಾಮಾಯಣವು ಮೂಲ ಪವಿತ್ರ ಗ್ರಂಥವಾಯಿತು. ಹೀಗೆ ನೂರಾರು ಸಾವಿರಾರು ಲೋಕನೀತಿಯುಳ್ಳ ತತ್ತಾ್ವಂಶಗಳನ್ನು ರಾಮಾಯಣವು ಒಳಗೊಂಡು, ತಿಳಿದಷ್ಟೂ ಅರಿತಷ್ಟೂ ಬತ್ತದ ಜ್ಞಾನಗಂಗೆಯಾಗಿ ಹಾಗೂ ಅರಿವಿನ ಸಾಗರವಾಗಿ ನಿರಂತರವಾಗಿ ಹರಿಯುತ್ತಿದೆ. ರಾಮಾಯಣ ಬರಿ ಮಹಾಕಾವ್ಯವಲ್ಲ, ನಮ್ಮ ಬಾಳನ್ನು ಬೆಳಗುವ ಮಹಾಬೆಳಕು. ಇಂತಹ ದೈವೀ ಕೃತಿಯನ್ನು ಕೊಟ್ಟ ಆದಿಕವಿ ವಾಲ್ಮೀಕಿ ಮಹರ್ಷಿಗಳಿಗೆ ವಂದನೆ.

-ಸಾಯಿಚನ್ನಪ್ಪ ರಾಜು