ಮಹಿಳೆಯರ ಸೃಜನಶೀಲತೆಯಿಂದ ಸದೃಢ ಸಮಾಜ ನಿರ್ಮಾಣ women's creativity
- ಪೊಲೀಸ್ ಠಾಣೆಯ ಪಿಎಸ್ಐ ಎಚ್.ಡಿ. ವಿದ್ಯಾಶ್ರೀ ಅಭಿಮತ
- ಕುಟುಂಬದಲ್ಲಿ ಸುಸಂಸತಿ ಇದ್ದಾಗ ಶಾಂತಿ ಸಮಾಜ ನಿರ್ಮಾಣ
ಮುಳಬಾಗಿಲು: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದು, ಈ ಕಾಲಘಟ್ಟದಲ್ಲಿ ಸೃಜನಶೀಲ ಸಮಾಜ ನಿಮಾರ್ಣ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದಾಗ ಮಾತ್ರ ಸದೃಢ ಸಮಾಜ ನಿಮಾರ್ಣ ಸಾಧ್ಯವಾಗಲಿದೆ ಎಂದು ನಂಗಲಿ ಪೊಲೀಸ್ ಠಾಣೆಯ ಪಿಎಸ್ಐ ಎಚ್.ಡಿ. ವಿದ್ಯಾಶ್ರೀ ಅಭಿಮತ ವ್ಯಕ್ತಪಡಿಸಿದರು.women's creativity
ನಗರದ ಕನಕ ಭವನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಶನಿವಾರ ಏರ್ಪಡಿಸಿದ್ದ ತಾಲೂಕುಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಮಹಿಳೆ ಸಮಾಜದ ಕಣ್ಣು ಎಂಬ ನಾಣ್ಣುಡಿಯಂತೆ ಕಾರ್ಯ ನಿರ್ವಹಿಸಬೇಕಾದ ಜವಾಬ್ದಾರಿ ಎಂದಿಗೂ ಮರೆಯಬಾರದು. ಮನೆಯ ಯಜಮಾನಿ ಇಡೀ ಕುಟುಂಬ ಗಮನಿಸುವ ಮೂಲಕ ಸುಸಂಸ್ಕತ ಕುಟುಂಬವಾಗಿಸಿದರೆ ಇಡೀ ಗ್ರಾಮ ಸೃಜನಶೀಲತೆಯಿಂದ ಕೂಡಿರುತ್ತದೆ. ಇದರಿಂದ ಸಮಾಜ ಶಾಂತಿ ಸುವ್ಯವಸ್ಥೆಯಿಂದ ಕೂಡಿರುತ್ತದೆ ಎಂಬ ಸಂಕಲ್ಪ ಪ್ರತಿ ಮಹಿಳೆಯಲ್ಲೂ ಮೂಡಿ ಬರಬೇಕಿದೆ ಎಂದರು.
ಧರ್ಮಸ್ಥಳ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎಂ.ಸೀನಪ್ಪ ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮ ಸರ್ವಧರ್ಮ ಸಮನ್ವಯದಿಂದ ಕೊಡಿದೆ. ಮುಳಬಾಗಿಲು ತಾಲೂಕಿನಲ್ಲಿ 2,854 ಸ್ವಸಹಾಯ ಸಂಘಗಳ ಮೂಲಕ 25,875 ಸದಸ್ಯರಿಗೆ 900 ಕೋಟಿ ರೂ. ಪ್ರಗತಿ ನಿಧಿ ವಿತರಿಸಲಾಗಿದೆ. ಈಗ ಚಾಲ್ತಿಯಲ್ಲಿ 142 ಕೋಟಿ ಪ್ರಗತಿಯಲ್ಲಿದ್ದು, ಒಟ್ಟು 15.35 ಕೋಟಿ ರೂ. ಉಳಿತಾಯದಲ್ಲಿದ್ದು ಇದು ಸಮಾಜದ ಕಲ್ಯಾಣಕ್ಕೆ ಬಳಕೆಯಾಗಲಿದೆ ಎಂದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಮುಖ್ ಬಿ. ಎಸ್. ಶಶಿಕಲಾ ಮಾತನಾಡಿ, ಮಹಿಳೆಯರು ಮಕ್ಕಳ ಮೇಲೆ ನಿಗಾವಹಿಸಿ ದಾರಿ ತಪ್ಪದಂತೆ ನೋಡಿಕೊಂಡಾಗ ಸಮಾಜದ ಜವಾಬ್ದಾರಿ ನಿರ್ವಹಿಸಿದಂತಾಗುತ್ತದೆ. ಈ ರೀತಿ ಪ್ರತಿ ಕುಟುಂಬದ ಮುಖ್ಯಸ್ಥೆ ಹಾಗೂ ಹೆಣ್ಣು ಮಕ್ಕಳು ಎಚ್ಚರಿಕೆ ವಹಿಸಬೇಕಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ಕೆ.ವಾಸುದೇವ್, ಸದಸ್ಯೆ ವಕೀಲೆ ಮಂಜು, ಕನ್ಯಕಾಪರಮೇಶ್ವರಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದೇವಾನಂದ್, ಜಿಲ್ಲಾ ನಿಕಟ ಪೂರ್ವ ಉಪಾಧ್ಯಕ್ಷ ಎ.ಅಪ್ಪಾಜಿಗೌಡ, ಮುಖಂಡ ಕೋಳಿ ನಾಗರಾಜ್, ಯೋಜನೆ ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ, ತಾಲೂಕು ನಿರ್ದೇಶಕ ಸಿ.ಹರೀಶ್ಕುಮಾರ್, ಮೇಲ್ವಿಚಾರಕ ಮುದ್ದಣ್ಣ ಇದ್ದರು.