ಅಫಜಲಪುರ ತಾಲೂಕಿನ ಶಿವೂರಿನಲ್ಲಿ ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಶಾಖಾ ಮಠ ನಿರ್ಮಾಣಕ್ಕೆ ಅರ್ಧ ಎಕರೆ ಜಮೀನು ನೀಡಿದ ಬಸವಣ್ಣ ಅಳ್ಳಗಿ ಅವರನ್ನು ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಸತ್ಕರಿಸಿದರು. ಗೆ ಸಿದ್ದಯ್ಯ ಹಿರೇಮಠ, ಗಂಗಾಧರ ಶರಣರು ಇದ್ದರು. 
ರಾಜ್ಯ

ಮಠ-ಮಂದಿರಗಳಿಂದ ಭಾವೈಕ್ಯ ನಾಡು ನಿರ್ಮಾಣ

ಪ್ರಮುಖ ಮುಖ್ಯಾಂಶಗಳು

  • ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ನುಡಿ
  • ಶಿವೂರಿನಲ್ಲಿ ಜಮೀನು ಹಸ್ತಾಂತರ ಕಾರ್ಯಕ್ರಮ
ಅಫಜಲಪುರ: ಮಠ&ಮಂದಿರಗಳು ಸಮಾಜದಲ್ಲಿ ಸಹೋದರತ್ವ ಬೆಸೆದು, ಭಾವೈಕ್ಯತೆ ನಾಡನ್ನು ಕಟ್ಟಲು ಶ್ರಮಿಸುತ್ತಿವೆ ಎಂದು ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.
ಶಿವೂರಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಶಾಖಾ ಮಠಕ್ಕೆ ಅರ್ಧ ಎಕರೆ ಜಮೀನು ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿ, ಸತ್ಯ ಕಾಯಕದಿಂದ ಸಂಪಾದಿಸಿದ ಸಂಪತ್ತು ಜೀವನದ ಕೊನೆಯವರೆಗೂ ಜತೆಗಿರುತ್ತದೆ. ನಿರಂತರ ಪರರ ನಿಂದನೆ ಮಾಡಿದರೆ, ಪಾಪದ ಮೂಟೆ ಹೆಗಲೇರುತ್ತದೆ. ಇಂತಹ ಆಧುನಿಕ ಕಾಲದಲ್ಲಿಯೂ ಭಗವಂತನ ಆರಾಧನೆಗೆ ಅರ್ಧ ಎಕರೆ ಜಮೀನು ನೀಡಿದ ಬಸವಣ್ಣ ಅಳ್ಳಗಿ ಅವರ ದೈವ ಭಕ್ತಿ ಸಮಾಜಕ್ಕೆ ಮಾದರಿ ಎಂದರು.
ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್​ ಮಾತನಾಡಿ, ಮಠಗಳು ನಿರಂತರವಾಗಿ ಧರ್ಮ ಬೋಧನೆಯ ಮೂಲಕ ಭಕ್ತ ಕುಲಕೋಟಿಗೆ ಮಾರ್ಗದರ್ಶನ ಮಾಡುತ್ತಿವೆ. ಭಗವಂತನು ಮತ್ತು ಭಕ್ತರ ನಡುವಿನ ಕೊಂಡಿಯಾಗಿರುವ ಗುರುಗಳನ್ನು ಗೌರವಿಸಿ, ಆರಾಧಿಸಬೇಕು. ಮಠಗಳ ಜೀಣೋರ್ದ್ಧಾರ ಮತ್ತು ಬೆಳವಣಿಗೆಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.
ಬಸವಣ್ಣ ಅಳ್ಳಗಿ, ಗಂಗಾಧರ ಶರಣರು, ಸಿದ್ದಯ್ಯ ಹಿರೇಮಠ, ಗುರುಲಿಂಗಯ್ಯ ಸ್ವಾಮಿ, ಸಿದ್ದು ಹಳಗೋದಿ, ಶಂಕರಗೌಡ ಹಡಗನೂರ ಇತರರಿದ್ದರು.
"

ಶಿವೂರಿನಲ್ಲಿ ಪವಾಡ ಪುರುಷ ಶ್ರೀ ಮಳೇಂದ್ರ ಶಿವಾಚಾರ್ಯರ ಮಠ ನಿರ್ಮಾಣದಿಂದ ದಾರಿದ್ರ್ಯ ದೂರವಾಗಿ ಸೌಖ್ಯ, ಸಂಪತ್ತು ದೊರೆಯಲಿದೆ. ವಿಶ್ವಾರಾಧ್ಯ ಮಳೇಂದ್ರ ಶ್ರೀಗಳ ಸಾಮಾಜಿಕ, ಧಾರ್ಮಿಕ, ಶೈಣಿಕ, ಸಾಮಾಜಿಕ ಕಾರ್ಯಗಳಿಗೆ ಶರಣಾಗಿ ಶಾಖಾ ಮಠ ನಿರ್ಮಾಣಕ್ಕೆ ಅರ್ಧ ಎಕರೆ ಜಮೀನು ನೀಡಿದ್ದೇನೆ.

> ಬಸವಣ್ಣ ಅಳ್ಳಗಿ,

ಭೂದಾನಿ, ಶಿವೂರ