ಕಲಬುರಗಿಯಲ್ಲಿ ಮಹಾವೀರ ಜಯಂತಿ ಅಂಗವಾಗಿ ಜೈನ ಸಮಾಜದಿಂದ ಸೋಮವಾರ ಹಮ್ಮಿಕೊಂಡಿದ್ದ ತೀರ್ಥಂಕರರ ಭಾವಚಿತ್ರದ ಮೆರವಣಿಗೆಯಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ನಾಗಣ್ಣ ಚಿಂದೆ, ರಮೇಶ ಗಡಗಡೆ, ಸುರೇಶ ತಂಗಾ, ಪ್ರಕಾಶ ಜೈನ್, ಕಿರಣಕುಮಾರ ಪಂಡಿತ್, ಧರಣೇಂದ್ರ ಸಂಗಮಿ, ಚೇತನ ಪಂಡಿತ್, ರಾಹುಲ ಕುಂಬಾರೆ, ಅಜೀತ್ ಕಾಸರ, ಶಾಂತು ಕಂಚಿನಕೋಟೆ ಇತರರಿದ್ದರು.
- ಡಾ.ಶರಣಪ್ರಕಾಶ ಪಾಟೀಲ್ ಅನಿಸಿಕೆ
- ಭಗವಾನ್ ಮಹಾವೀರ ಜಯಂತಿ ಮೆರವಣಿಗೆ
ಕಲಬುರಗಿ: ಮನುಕುಲದ ಸಮಗ್ರ ಕಲ್ಯಾಣಕ್ಕಾಗಿ ಭಗವಾನ್ ಶ್ರೀಮಹಾವೀರ ತೀರ್ಥಂಕರರು ಬೋಧಿಸಿದ ಅಹಿಂಸೆ, ಪರಸ್ಪರ ವಿಶ್ವಾಸ, ಸಾಮರಸ್ಯ ಮತ್ತು ಸಹಬಾಳ್ವೆ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕ. ಅಹಿಂಸೆಯ ಮೂಲಕ ಸುಂದರ ಸಮಾಜ ಕಟ್ಟಬಹುದು ಎಂದು ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅಭಿಪ್ರಾಯಪಟ್ಟರು.
ಸಕಲ ಜೈನ ಸಮಾಜದಿಂದ ಶ್ರೀ ಭಗವಾನ ಮಹಾವೀರ ತೀರ್ಥಂಕರರ ಜನ್ಮಕಲ್ಯಾಣ ಮಹೋತ್ಸವದ ನಿಮಿತ್ತ ಸೋಮವಾರ ಆಯೋಜಿಸಿದ್ದ ಬೃಹತ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ದ್ವೇಷ ಮರೆತು ಪರಸ್ಪರ ಮನುಷ್ಯ ಮನುಷ್ಯನನ್ನು ಪ್ರೀತಿಸುವುದರ ಮೂಲಕ ಪ್ರೇಮಮಯವಾದ ಸಮಾಜ ನಿರ್ಮಿಸಬಹುದು. ಇಂದು ವಿಶ್ವ ಅಹಿಂಸೆ ಮತ್ತು ಶಾಂತಿ ಎದುರು ನೋಡುತ್ತಿದೆ. ಇಂತಹ ಸಮಯದಲ್ಲಿ ಭಗವಾನ ಶ್ರೀ ಮಹಾವೀರ ತೀರ್ಥಂಕರರ ಬೋಧನೆಗಳು ಬೆಳಕಾಗಿ ತೋರಬಲ್ಲವು ಎಂದರು.
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಎಪಿಎಂಸಿ ಮಾಜಿ ಅಧ್ಯಕ್ಷ ಅಪ್ಪು ಕಣಕಿ, ಪ್ರಮುಖರಾದ ನಾಗಲಿಂಗಯ್ಯ ಮಠಪತಿ, ಬಸವರಾಜ ಮಠಪತಿ ಕಮಲಾಪೂರ, ಚನ್ನವಿರ ಹಿರೇಮಠ, ನಾಗಣ್ಣ ಚಿಂದೆ, ರಮೇಶ ಗಡಗಡೆ, ಸುರೇಶ ತಂಗಾ, ಪ್ರಕಾಶ ಜೈನ್, ಕಿರಣಕುಮಾರ ಪಂಡಿತ್, ಧರಣೇಂದ್ರ ಸಂಗಮಿ, ಚೇತನ ಪಂಡಿತ್, ರಾಹುಲ ಕುಂಬಾರೆ, ಅಜೀತ್ ಕಾಸರ, ಶಾಂತು ಕಂಚಿನಕೋಟೆ ಇತರರಿದ್ದರು.