ಗುರುಮಠಕಲ್ ತಾಲೂಕಿನ ಯಂಪಾಡ ಮತ್ತು ತಾತಳಗೇರ ಒಳ ರಸ್ತೆ ಬಳಿ ಕಿರುಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿ ಗುರುವಾರ ಯಂಪಾಡ ರಸ್ತೆ ಮೇಲೆ ಗುರುವಾರ ಉಮೇಶ ಮುದ್ನಾಳ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಲ್ಲೆಶ್, ಶರಣಪ್ಪ, ಮಲ್ಲಿಕಾರ್ಜುನ್, ಆಶಪ್ಪ ಸಣ್ಣ ಗವೀಂದ್ರ, ಇಬ್ರಾಹಿಂ, ಹುಸೇನಪ್ಪ, ನಾಗಪ್ಪ ಮಡಿವಾಳ, ಶರಣಪ್ಪ ಜಲ್ಲಪ್ಪ, ಹಣಮಂತ, ಅಂಜಪ್ಪ, ಹರೀಶ ಪೂಜಾರಿ ಇತರರಿದ್ದರು.
- ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಆಗ್ರಹ
- ಗ್ರಾಮಸ್ಥರೊಂದಿಗೆ ಪ್ರತಿಭಟನೆ
ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಯಂಪಾಡ ಮತ್ತು ತಾತಳಗೇರ ಒಳ ರಸ್ತೆಯಿಂದ ಆಶನಾಳ ಸೇರಿ ಹತ್ತಾರು ಗ್ರಾಮಗಳಿಗೆ ಸಂಪರ್ಕವಿರುವ ಹಳ್ಳದ ರಸ್ತೆಗೆ ಕೂಡಲೇ ಕಿರು ಸೇತುವೆ ನಿರ್ಮಿಸಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ಸಂಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಒತ್ತಾಯಿಸಿದ್ದಾರೆ.
ಗುರುವಾರ ಆ ಸ್ಥಳದಲ್ಲಿ ಗ್ರಾಮಸ್ಥರೊಂದಿಗೆ ತೆರಳಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ವಿರುದ್ಧ ೂಷಣೆ ಕೂಗುವ ಮೂಲಕ ಕೂಡಲೇ ಈ ಕಿರು ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿದರು.
ಕಿರು ಸೇತುವೆ ನಿರ್ಮಾಣ ಮಾಡದ ಅಧಿಕಾರಿಗಳ, ಜನಪ್ರತಿನಿಧಿಗಳ ರ್ನಿಲ್ಯತನದಿಂದಾಗಿ ಜನರು ಕಳೆದ ಎರಡು ವರ್ಷಗಳಿಂದ ಕಷ್ಟಕ್ಕೆ ಸಿಲುಕಿದ್ದಾರೆ. ಇಡೀ ವರ್ಷ ಒಂದಿಲ್ಲೊಂದು ಸಮಸ್ಯೆ ವಿವಿಧ ಗ್ರಾಮಸ್ಥರನ್ನು ಕಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿ ವರ್ಷ ಮಳೆಗಾಲದಲ್ಲಿ ಹಳ್ಳ ತುಂಬಿ ನೀರು ಹರಿಯುವುದರಿಂದ ಸಂಚಾರ ಬಂದ್ ಆಗಿ ಜನಜೀವನವೇ ಅಸ್ತವ್ಯಸ್ತಗೊಳ್ಳುತ್ತಿದೆ. ದಿನನಿತ್ಯ ಈ ಕಿರು ಹಳ್ಳದ ರಸ್ತೆಯ ಮುಖಾಂತರ ಟ್ರಾಕ್ಟರ್, ಎತ್ತಿನಬಂಡಿ, ಟಂಟಂ, ಎತ್ತು, ದನ ಕರು&ಕುರಿಗಳು ಸಂಚರಿಸುತ್ತವೆ. ರಾತ್ರಿ ಹೊತ್ತು ಹೊಸಬರು ಈ ರಸ್ತೆಗೆ ಬಂದರೆ ಭೀಕರ ಅಪಘಾತವಾಗುವ ಸಂಭವವಿದೆ. ಕಾರಣ ಕೂಡಲೇ ಕಿರು ಸೇತುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಲ್ಲೆಶ್, ಶರಣಪ್ಪ, ಮಲ್ಲಿಕಾರ್ಜುನ್, ಆಶಪ್ಪ ಸಣ್ಣ ಗವೀಂದ್ರ, ಇಬ್ರಾಹಿಂ, ಹುಸೇನಪ್ಪ, ನಾಗಪ್ಪ ಮಡಿವಾಳ, ಶರಣಪ್ಪ ಜಲ್ಲಪ್ಪ, ಹಣಮಂತ, ಅಂಜಪ್ಪ, ಹರೀಶ ಪೂಜಾರಿ ಲವಕುಮಾರ್, ಸಾಬಣ್ಣ, ತಿಪ್ಪಣ್ಣ, ನಾಗಪ್ಪ, ಸಾಬಣ್ಣ, ಭೀಮಣ್ಣ, ಸಣ್ಣಬುಗ್ಗಪ್ಪ, ಹಣಮಂತ ಸಕ್ರೆ, ಸದಾನಂದ, ಭೀಮೇಶ್, ಶಿವು, ನಾಗಪ್ಪ, ಶರಣಪ್ಪ, ಭೀಮಣ್ಣ, ಆನಂದ, ಚನ್ನಬಸಪ್ಪ, ಮಾದೇಶ ರವಿ, ಬಸವರಾಜ, ಹನುಮಂತ ಇತರರಿದ್ದರು.