ತೋಟಗಟ್ಟಿ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಚೂನಪ್ಪ ಪೂಜೇರಿ ಮಾತನಾಡಿದರು. ಕಲ್ಮೇಶ್ವರ ಸ್ವಾಮೀಜಿ, ಮಲ್ಲಣ್ಣ ಯಾದವಾಡ ಇತರರಿದ್ದರು. 
ರಾಜ್ಯ

ಜಮೀನುಗಳಿಗೆ ಸಂಪರ್ಕ ರಸ್ತೆ ನಿರ್ಮಿಸಿ

ಪಣಜಿಯಿಂದ ಹೈದರಾಬಾದ್​ಗೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸುತ್ತಿರುವ ಗ್ರೀನ್​ ಹೈವೇಯಲ್ಲಿ ಸಂಪರ್ಕ ರಸ್ತೆ ನಿರ್ಮಿಸಿಲ್ಲ. ಹೆದ್ದಾರಿ ಕೆಳಗೆ ಅಲ್ಲಲ್ಲಿ ನಿರ್ಮಿಸಿದ ಸೇತುವೆಗಳನ್ನೂ ಎತ್ತರಿಸಿಲ್ಲ ಎಂದು ಆರೋಪಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ತಾಲೂಕಿನ ತೋಟಗಟ್ಟಿ ಗ್ರಾಮದ ಬಳಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ರೈತ ಸಂದ ಅಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ, ಜಿಲ್ಲಾಧಿಕಾರಿ, ಸಂಸದರು ಹಾಗೂ ಶಾಸಕರು ಶ್ರೀ ರೈತರ ಸಮಸ್ಯೆ ಕರೆದು ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ ಬಳಿಕ ಹೆದ್ದಾರಿ ಕಾಮಗಾರಿ ಪ್ರಾರಂಭಿಸಬೇಕು. ಅಲ್ಲಿಯವರೆಗೆ ಹೆದ್ದಾರಿ ನಿರ್ಮಾಣಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಪವನ ಗುರ್ವೆ, ಇಂಜಿನಿಯರ್​ ಪವನಕುಮಾರ ಯಾದವ, ಗುತ್ತಿಗೆ ಕಂಪನಿಯ ಬಸವರಾಜ ರೈತರನ್ನು ಸಮಾಧಾನಪಡಿಸಲು ಹರಸಾಹಸಪಟ್ಟರು. ಐದು ದಿನಗಳೊಳಗೆ ರಸ್ತೆ ಪಕ್ಕ ನಿರ್ಮಿಸಿದ ತಡೆಗೋಡೆ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ ರೈತರು ಪ್ರತಿಭಟನೆ ಹಿಂಪಡೆದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್​ ಪ್ರಕಾಶ ಗಾಯಕವಾಡ ರೈತರ ಸಮಸ್ಯೆ ಆಲಿಸಿ, ರೈತರ ಬೇಡಿಕೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಬಿಜಗುಪ್ಪ ಮಠದ ಕಲ್ಮೇಶ್ವರ ಸ್ವಾಮೀಜಿ, ರೈತ ಸಂದ ತಾಲೂಕಾಧ್ಯ ಜಗದೀಶ ದೇವರಡ್ಡಿ, ಮುಖಂಡರಾದ ಶಿವಾನಂದ ದೊಡವಾಡ, ಮಲ್ಲಣ್ಣ ಯಾದವಾಡ, ಬಿ.ಎಸ್​.ನಾಯಕ, ಮಲ್ಲಪ್ಪ ಮೇಟಿ, ಸುರೇಶ ಗುಂಜೇರಿ ಇತರರಿದ್ದರು.