ಮಾದಕ ವಸ್ತು ವಿರೋಧಿ ಜಾಗೃತಿ ಪ್ರಯುಕ್ತ ನೆಲಮಂಗಲದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಆರಕ್ಷಕ ನಿರೀಕ್ಷಕ ಭರತ್​ಗೌಡ, ಸಬ್​ ಇನ್​ಸ್ಪೆಕ್ಟರ್​ ನಾಗರಾಜು, ಪ್ರೊಪೆಷನರಿ ಇನ್​ಸ್ಪೆಕ್ಟರ್​ ಪ್ರಭುಲಿಂಗರೆಡ್ಡಿ ಇದ್ದರು. 
ರಾಜ್ಯ

ಚಟಗಳಿಗೆ ಒಳಗಾಗದೆ ಬದುಕು ಕಟ್ಟಿಕೊಳ್ಳಿ / NELAMANGAL

ಬೆಂಗಳೂರು ಗ್ರಾಮಾಂತರ ಡೆಸ್ಕ್
ನೆಲಮಂಗಲ : ವಿದ್ಯಾರ್ಥಿ ಜೀವನವು ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವ ಮಹತ್ವದ ಟ್ಟವಾಗಿದ್ದು, ಈ ಹಂತದಲ್ಲಿ ಮಾದಕವಸ್ತು ಸೇರಿದಂತೆ ಆರೋಗ್ಯ ಮತ್ತು ಭವಿಷ್ಯಕ್ಕೆ ಮಾರಕವಾಗುವ ಯಾವುದೇ ಚಟಗಳಿಗೆ ಒಳಗಾಗಬಾರದು ಎಂದು ನಗರ ಪೊಲೀಸ್​ ಠಾಣೆ ಆರಕ್ಷಕ ನಿರೀಕ್ಷಕ ಭರತ್​ಗೌಡ ತಿಳಿಸಿದರು.
ಮಾದಕ ವಸ್ತು ವಿರೋಧಿ ಜಾಗೃತಿ ಪ್ರಯುಕ್ತ ನಗರದ ಡಾ.ಅಂಬೇಡ್ಕರ್​ ಕ್ರೀಡಾಂಗಣ ಬಳಿ ಗುರುವಾರ ನಗರ ಠಾಣೆಯಿಂದ ಹಮ್ಮಿಕೊಂಡಿದ್ದ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಮಾದಕ ವಸ್ತುಗಳ ಸೇವನೆ ತ್ಯಜಿಸುವ ಮೂಲಕ ಯುವಜನತೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು, ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ದುಶ್ಚಟಗಳಿಗೆ ಯುವಜನತೆ ಆಕರ್ಷಿತರಾಗುತ್ತಿರುವುದು ಆತಂಕಕಾರಿ. ದೈಹಿಕ ಹಾಗೂ ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಮಾದಕ ವಸ್ತುಗಳ ಸೇವನೆಯನ್ನು ತ್ಯಜಿಸಬೇಕು. ಸ್ವಸ್ಥ ಸಮಾಜ ನಿರ್ಮಾಣ ಸಂಕಲ್ಪ ಮಾಡುವ ಮೂಲಕ ಬಲಿಷ್ಠ ದೇಶ ಕಟ್ಟಲು ಮುಂದಾಗಬೇಕು. ಮಾದಕ ಪದಾರ್ಥಗಳ ಉತ್ಪಾದನೆ, ಸಾಗಣೆ, ಬಳಕೆಗೆ ಸಂಪೂರ್ಣ ಕಡಿವಾಣ ಬೀಳಬೇಕು ಎಂದರು.
ಉತ್ತಮ ಹವ್ಯಾಸಗಳು ಇರಲಿ : ದುರ್ಜನ ಹಾಗೂ ದುಶ್ಚಟಗಳ ಸಹವಾಸದಿಂದ ವಿದ್ಯಾರ್ಥಿಗಳು ದೂರವಿರಬೇಕು. ಒಳ್ಳೆಯ ಅಭಿರುಚಿ ಹೊಂದಿರುವ ಸ್ನೇಹಿತರು ಹಾಗೂ ಗುರುಗಳ ಒಡನಾಟ ಇಟ್ಟುಕೊಂಡು ಉತ್ತಮ ಅಭ್ಯಾಸಗಳ ಕಡೆಗೆ ಗಮನ ಕೊಡಬೇಕು. ಮನಸ್ಸನ್ನು ಯಾವಾಗಲು ಶುದ್ಧವಾಗಿ ಇಟ್ಟುಕೊಳ್ಳಬೇಕು. ಇದರಿಂದ ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯ ಎಂದು ಭರತ್​ಗೌಡ ಕಿವಿಮಾತು ಹೇಳಿದರು.
112 ಸಹಾಯವಾಣಿಗೆ ಕರೆ ಮಾಡಿ : ಸಾರ್ವಜನಿಕ ಸ್ಥಳ ಅಥವಾ ತಮ್ಮ ಸುತ್ತಮುತ್ತ ಯಾರೇ ಮಾದಕ ವಸ್ತು ಮಾರಾಟ ಹಾಗೂ ಸಾಗಾಟ ಸೇರಿದಂತೆ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡರೆ ಕೂಡಲೇ 112 ಸಹಾಯವಾಣಿಗೆ ಕರೆ ಮಾಡುವ ಮೂಲಕ ಮಾಹಿತಿ ನೀಡಬಹುದು ಎಂದು ಆರಕ್ಷಕ ನಿರೀಕ್ಷಕ ಭರತ್​ಗೌಡ ತಿಳಿಸಿದರು.
ಜಾಗೃತಿ ಜಾಥಾ : ಪೊಲೀಸ್​ ಇಲಾಖೆ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ನಗರ ಪೊಲೀಸ್​ ಠಾಣೆ ಸಿಬ್ಬಂದಿ ಸೇರಿದಂತೆ ನಗರದ ಹರ್ಷ ಕಾಲೇಜು, ಹೊಯ್ಸಳ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ಸುಮಾರು 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಕೈಯಲ್ಲಿ ಜಾಗೃತಿ ಫಲಕಗಳನ್ನು ಹಿಡಿದಿದ್ದ ವಿದ್ಯಾರ್ಥಿಗಳು ೂಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು.
ನಗರ ಠಾಣೆ ಸಬ್​ ಇನ್​ಸ್ಪೆಕ್ಟರ್​ ನಾಗರಾಜು, ಪ್ರೊಪೆಷನರಿ ಇನ್​ಸ್ಪೆಕ್ಟರ್​ ಪ್ರಭುಲಿಂಗರೆಡ್ಡಿ, ಎಎಸ್​ಐ ಬಿ.ಎಸ್​.ರು, ಸಿಬ್ಬಂದಿ ಮೋಹನ್​, ಬಸವರಾಜು, ರಮೇಶ್​, ದೈಹಿಕ ಪರಿವೀಕ್ಷಕ ನಾರಾಯಣ್​ ಮತ್ತಿತರರು ಉಪಸ್ಥಿತರಿದ್ದರು.