ಸೂಲಿಬೆಲೆ ಹೋಬಳಿ ಸೊಣ್ಣಹಳ್ಳಿಪುರ ಕೆನರಾ ಬ್ಯಾಂಕ್​ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ಬ್ಯೂಟಿ ಪಾರ್ಲರ್​ ತರಬೇತಿ ಶಿಬಿರದ ಸಮಾರೋಪದಲ್ಲಿ ಉಪ ಪ್ರಬಂಧಕ ಕೃಷ್ಣಚೈತನ್ಯ ರೆಡ್ಡಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ನಿರ್ದೇಶಕ ರವಿ, ಗ್ರಾಪಂ ಮಾಜಿ ಅಧ್ಯಕ್ಷೆ ಭಾರತಿ ದೇವರಾಜ್​ ಇತರರು ಇದ್ದರು. 
ರಾಜ್ಯ

ಆರ್ಥಿಕ ಸ್ವಾವಲಂಬಿಗಳಾಗಿ ಜೀವನ ಕಟ್ಟಿಕೊಳ್ಳಿ / SULIBEEL

ಸೂಲಿಬೆಲೆ :

ಮಹಿಳೆಯರು ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಿ ಜೀವನ ಕಟ್ಟಿಕೊಳ್ಳಬೇಕು ಎಂದು ಕೆನರಾ ಬ್ಯಾಂಕ್​ ಉಪಪ್ರಬಂಧಕ ಕೃಷ್ಣ ಚೈತನ್ಯ ರೆಡ್ಡಿ ಸಲಹೆ ನೀಡಿದರು.

ಸೂಲಿಬೆಲೆ ಹೋಬಳಿ ಸೊಣ್ಣಹಳ್ಳಿಪುರ ಕೆನರಾ ಬ್ಯಾಂಕ್​ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಬ್ಯೂಟಿ ಪಾರ್ಲರ್​ ಹಾಗೂ ಎಂಬ್ರಾಯಿಡರ್​ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

30 ದಿನಗಳ ಬ್ಯೂಟಿ ಪಾರ್ಲರ್​ ತರಬೇತಿ ಮುಗಿಸಿರುವ ಮಹಿಳೆಯರು ತಮ್ಮ ಸ್ವ&ಉದ್ಯೋಗ ಪ್ರಾರಂಭಿಸುವ ಮೂಲಕ ಜೀವನ ರೂಪಿಸಿಕೊಳ್ಳುವುದು ಹಾಗೂ ಜನಪರವಾದ ಕಾಳಜಿಯಿಂದ ಆರ್ಥಿಕವಾದ ನೆಲೆಗಟ್ಟಿನಲ್ಲಿ ಮತ್ತಷ್ಟು ಜನರಿಗೆ ದಾರಿದೀಪವಾಗಬೇಕ ಎಂದರು.

ಕೆನರಾ ಬ್ಯಾಂಕ್​ ಸ್ವ&ಉದ್ಯೋಗ ಸಂಸ್ಥೆಯ ರವಿಕುಮಾರ್​ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರು ಮತ್ತು ಪುರುಷರಿಗಾಗಿ ನಾನಾ ರೀತಿಯ ತರಬೇತಿಗಳನ್ನು ಹಮ್ಮಿಕೊಳ್ಳುವಮೂಲಕ ಸ್ವ ಉದ್ಯೋಗ ಸೃಷ್ಟಿಸಲಾಗುತ್ತಿದೆ ಹಾಗೂ ವ್ಯಾಪ್ತಿಯ ಬ್ಯಾಂಕ್​ಗಳಲ್ಲಿ ಸಾಲ ಮಂಜೂರಾತಿ ಸಹ ಮಾಡಿಸಿಕೊಡುತ್ತೇವೆ ಎಂದರು. ಮುಖ್ಯಶಿಕ್ಷಕಿ ಉಮಾದೇವಿ, ಶಾಲಾ ಅಧ್ಯಕ್ಷ ಚಂದ್ರಪ್ಪ, ಮಹಾಲಕ್ಷಿ$್ಮ, ಚೈತ್ರಾ, ನಾಗೇಶ್​, ಸುಗುಣ, ಮುನಿಕೃಷ್ಣ ಇತರರು ಇದ್ದರು.