ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಏರ್ಪಡಿಸಿದ್ದ ಟಿಕ್ನಿಷಿಯನ್ ತರಬೇತಿ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಚಾಲನೆ ನೀಡಿದರು. ರಾಕೇಶ ಕಾಂಬಳೆ, ಸುರೇಂದ್ರ ಪಾಟೀಲ್, ಚನ್ನಪ್ಪ ಯಟಗಲ್, ಭೀಮಾಶಂಕರ ಡಾಂಗೆ, ಶ್ರೀಮಂತಗೌಡ ಪಾಟೀಲ್ ಇತರರಿದ್ದರು. ==========
- ಕೈದಿಗಳಿಗೆ ನ್ಯಾಯಾಧೀಶ ಶ್ರೀನಿವಾಸ ನವಲೆ ಸಲಹೆ
- ಕೇಂದ್ರ ಕಾರಾಗೃಹದಲ್ಲಿ ಟಿಕ್ನಿಷಿಯನ್ ತರಬೇತಿ
ಕಲಬುರಗಿ: ಅಗತ್ಯ ತರಬೇತಿ ಮೂಲಕ ಸ್ವಯಂ ಉದ್ಯೋಗದೊಂದಿಗೆ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಕೈದಿಗಳಿಗೆ ಸಲಹೆ ನೀಡಿದರು.
ಕೇಂದ್ರ ಕಾರಾಗೃಹದಲ್ಲಿ ಗುಲ್ಬರ್ಗ ಜನಶಿಕ್ಷಣ ಸಂಸ್ಥಾನ್ ಸಹಯೋಗದಡಿ ಬಂದಿಗಳಲ್ಲಿ ಪತ್ರಿ ತಂಡಕ್ಕೆ 40 ಶಿಬಿರಾರ್ಥಿಗಳಿಗೆ ಬುಧವಾರ ಏರ್ಪಡಿಸಿದ್ದ ಸಹಾಯಕ ಎಲೆಕ್ಟ್ರಿಕಲ್ ಟಿಕ್ನಿಷಿಯನ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾವಲಂಬಿ ಬದುಕಿಗೆ ಇಂಥ ತರಬೇತಿಗಳು ಪೂರಕ. ಕಾರಾಗೃಹದಲ್ಲಿ ನೀಡುವ ವೃತ್ತಿಪರ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜನಶಿಕ್ಷಣ ಸಂಸ್ಥಾನ್ ನಿರ್ದೇಶಕ ಸುರೇಂದ್ರ ಪಾಟೀಲ್ ಮಾತನಾಡಿ, ತಮ್ಮ ಸಂಸ್ಥೆ ಸಾಮಾನ್ಯವಾಗಿ ಗ್ರಾಮೀಣ ಜನರಿಗೆ ಉಚಿತ ತರಬೇತಿ ನೀಡುತ್ತಿದೆ. ಈ ಬಾರಿ ಕಲಬುರಗಿ ಕೇಂದ್ರ ಕಾರಾಗೃಹ ಬಂದಿಗಳಿಗೆ ತರಬೇತಿ ನೀಡಲು ಮುಂದಾಗಿದ್ದು, ಪ್ರಾರಂಭದಲ್ಲಿ 40 ಶಿಬಿರಾರ್ಥಿಗಳಿಗೆ ಸಹಾಯಕ ಎಲೆಕ್ಟ್ರಿಕಲ್ ಟಿಕ್ನಿಷಿಯನ್ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಮುಖ್ಯ ಅಧೀಕ್ಷಕ ರಾಕೇಶ ಕಾಂಬಳೆ, ಸಂಸ್ಥೆ ಸಹಾಯಕ ಅಧೀಕ್ಷಕ ಚನ್ನಪ್ಪ ಯಟಗಲ್, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ ಮಾತನಾಡಿದರು. ಸಂಸ್ಥೆಯ ಬಸವರಾಜ ಡಾಬಾ, ರಾಜಶೇಖರ ಬಿರಾದಾರ್, ತರಬೇತುದಾರ ಸೈಯದ್ ಬಿಲಾಲ್, ಶ್ರೀಮಂತಗೌಡ ಪಾಟೀಲ್ ಇತರರಿದ್ದರು. ಸಂಸ್ಥೆ ಸಹಾಯಕ ಅಧೀಕ್ಷಕ ಬಿ.ಸುರೇಶ್ ಸ್ವಾಗತಿಸಿದರು. ಶಿಕ್ಷಕ ನಾಗರಾಜ ಮೂಲಗೆ ನಿರೂಪಣೆ ಮಾಡಿ ವಂದಿಸಿದರು. ಶಿವಶಂಕರ ಪ್ರಾರ್ಥನಾ ಗೀತೆ ಹಾಡಿದರು.
"
ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಅನೇಕ ರೀತಿಯ ತರಬೇತಿ ನೀಡುವ ಉದ್ದೇಶ ಹೊಂದಿದೆ. ಕಲಬುರಗಿಯ ಜನಶಿಕ್ಷಣ ಸಂಸ್ಥಾನ್ ಮೂಲಕ ಆಯ್ದ 40 ಶಿಕ್ಷಾ ಬಂದಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು.
— > ರಾಕೇಶ ಕಾಂಬಳೆ ಮುಖ್ಯ ಅಧೀಕ್ಷಕ, ಕೇಂದ್ರ ಕಾರಾಗೃಹ ಕಲಬುರಗಿ