Budget preparation that supports comprehensive development 
ರಾಜ್ಯ

ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್ ತಯಾರಿ

ತುಮಕೂರು ಡೆಸ್ಕ್
ಪಾವಗಡ: ಪುರಸಭೆ ನಿಧಿ, ಸರ್ಕಾರದ ಅನುದಾನ ಮತ್ತು ಶಾಸಕರ ವಿಶೇಷ ಅನುದಾನಗಳನ್ನು ಬಳಸಿ ಪುರಸಭೆ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್ ತಯಾರಿಸಲು ಸ್ಥಳೀಯ ನಾಗರೀಕರು, ಸಂ-ಸಂಸ್ಥೆಗಳ ಪದಾಧಿಕಾರಿಗಳ ಸಲಹೆ ಸೂಚನೆಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಂಡು ಅಭಿವೃದ್ಧಿ ವಾಡಲಾಗುವುದು ಎಂದು ಮುಖ್ಯಾಧಿಕಾರಿ ಜಾಫರ್ ಷರೀಪ್ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎರಡನೇ ಬಜೆಟ್ ಪೂರ್ವಬಾವಿ ಸಭೆಯಲ್ಲಿ ವಾತನಾಡಿದ ಅವರು, ಪುರಸಭೆಯ ಆದಾಯ, ಸರ್ಕಾರದ ಅನುದಾನ ಮತ್ತು ಶಾಸಕರ ವಿಶೇಷ ಅನುದಾನಗಳನ್ನು ವಾನದಂಡಗಳನ್ನು ಅನುಸರಿಸಿ ಆದ್ಯತೆ ಆಧಾರದಲ್ಲಿ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವಾಡಲಾಗುವುದು ಎಂದರು.
ಪುರಸಭೆ ವಾಜಿ ಅಧ್ಯಕ್ಷ ಸುದೇಶ್ ಬಾಬು ವಾತನಾಡಿ, ಪಟ್ಟಣ ಹಸರೀಕರಣಕ್ಕಾಗಿ ಉದ್ಯಾನವನ ನಿರ್ವಾಣ ವಾಡಲು ಲಕ್ಷಾಂತರ ಹಣ ತೆಗೆದಿಡಲಾಗಿದೆ. ಅಧಿಕಾರಿಗಳ ಆದೇಶದ ನಂತರ ಪಟ್ಟಣದ ವಾರ್ಡ್‌ಗಳಲ್ಲಿ ಉದ್ಯಾನವನ ನಿರ್ಮಿಸಿ, ನೀರು ಸೌಲಭ್ಯ ಒದಗಿಸಿಕೊಡಬೇಕು ಎಂದರು.
ಎಎಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾವಾಂಜಿನಪ್ಪ ವಾತನಾಡಿ, ಕಳೆದ ವರ್ಷ ಬಜೆಟ್ ಮಂಡನೆಗೆ ಸಂ-ಸಂಸ್ಥೆಗಳ, ಸಾರ್ವಜನಿಕರ ಸಲಹೆ ಪಡೆದು ಬಜೆಟ್ ಮಂಡಿಸಿದ ಕಾಮಗಾರಿಗಳ ಪೈಕಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಹಾಲುಣಿಸುವ ಕೇಂದ್ರ, ಪೊಲೀಶ್ ಚೌಕಿ, ನಗರ ಹಸರೀಕರಣ, ಪಟ್ಟಣದ ೨೩ ವಾರ್ಡ್‌ಗಳ ಹೆಸರಿನ ನಾಮಫಲಕ ಅಳವಡಿಸುವ ಕಾಮಗಾರಿ ಸೇರಿ ಶೇ.೫೦ ಕಾರ್ಯಗತವಾಗಿಲ್ಲ ಎಂದು ಪ್ರಶ್ನಿಸಿದರು.
ಆಟೊ ಚಾಲಕರ ಸಂದ ಅಧ್ಯಕ್ಷ ಬೇಕರಿ ನಾಗರಾಜ್, ಹರೀಶ್, ಪ್ರದೀಪ್, ಕರವೇ ಲಕ್ಷ್ಮೀನಾರಾಯಣ, ವಳ್ಳೂರ್ ನಾಗೇಶ್ ಇದ್ದರು.