ಚಿತ್ತಾಪುರದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಗೀತ ವೈಭವ ಕಾರ್ಯಕ್ರಮವನ್ನು ಕಾಂಗ್ರೆಸ್​ ಮುಖಂಡ ಸುಭಾಷ್​ ಜಾಧವ್​ ಉದ್ಘಾಟಿಸಿದರು. ಪಂಡಿತ್​ ಶಿರವಾಟಿ, ಮಸ್ತಾನ್​ ಪಟೇಲ್​, ಮಾರುತಿ ಶಿರವಾಟಿ, ಸಿದ್ರಾಮ ಬುಡ್ಗಜಂಗಮ, ಶಂಕ್ರಮ್ಮ ರಾಮತೀರ್ಥ ಇದ್ದರು. 
ರಾಜ್ಯ

ಕಲೆ, ಸಂಸ್ಕೃತಿ ಕ್ಷೇತ್ರಕ್ಕೆ ಬುಡ್ಗ ಜಂಗಮರ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ಪಂಡಿತ್​ ಶಿರವಾಟಿ ಹೇಳಿಕೆ
  • ಚಿತ್ತಾಪುರದಲ್ಲಿ ಜಾನಪದ ಸಂಗೀತ ವೈಭವ
ಚಿತ್ತಾಪುರ: ಬುಡ್ಗ ಜಂಗಮ ಸಮಾಜದವರು ಅಲೆಮಾರಿ, ಅವಿದ್ಯಾವಂತರು ಆಗಿರಬಹುದು. ಆದರೆ ಕಲೆ, ಸಂಸ್ಕೃತಿ, ನಾಟಿ ವೈದ್ಯ ಕ್ಷೇತ್ರದಲ್ಲಿ ಪಾಂಡಿತ್ಯ ಹೊಂದಿದ್ದಾರೆ ಎಂದು ಬುಡ್ಗ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಪಂಡಿತ್​ ಶಿರವಾಟಿ ಹೇಳಿದರು.
ಆಶ್ರಯ ಕಾಲನಿಯಲ್ಲಿ ಅಲೆಮಾರಿ ಕಲಾ ವೇದಿಕೆ, ಕನ್ನಡ ಮತ್ತು ಸಂಸತಿ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಜಾನಪದ ಸಂಗೀತ ವೈಭವದಲ್ಲಿ ಮಾತನಾಡಿ, ಈ ಸಮುದಾಯದವರು ಬುರ್ರಕಥೆ ಮೂಲಕ ಭರತ ಭೂಮಿಯ ರಾಜ&ಮಹಾರಾಜರ ಕಥೆ, ಕಾದಂಬರಿ, ರಾಮಾಯಣ, ಮಹಾಭಾರತ, ಪುರಾಣ&ಪ್ರವಚನಗಳನ್ನು ಜನರಿಗೆ ಮನಮುಟ್ಟುವಂತೆ ಹೇಳುತ್ತಾರೆ. ವೇಷಭೂಷಣಗಳನ್ನ ಹಾಕಿಕೊಂಡು ಜನರನ್ನು ರಂಜಿಸುತ್ತಾರೆ. ಹಳ್ಳಿಗಾಡಿನ ಜನರಿಗೆ ಬಹು ಸೊಗಸಾದ ಸಂಗೀತ ನಾಟಕ ಹಗಲುವೇಷ, ಬುರ್ರಕಥೆ ಪ್ರದರ್ಶಿಸಿ ಜನರ ಮನ ಗೆದ್ದ ಮಹಾನ್​ ಕಲಾವಿದರು ಎಂದು ಬಣ್ಣಿಸಿದರು.
ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಣ ಸಂದ ಜಿಲ್ಲಾ ಉಪಾಧ್ಯಕ್ಷ ಮಸ್ತಾನ್​ ಪಟೇಲ್​ ಮಾತನಾಡಿದರು. ಕಾಂಗ್ರೆಸ್​ ಮುಖಂಡ ಸುಭಾಷ್​ ಜಾಧವ್​ ಉದ್ಘಾಟಿಸಿದರು.
ಅಲೆಮಾರಿ ಕಲಾ ವೇದಿಕೆ ಅಧ್ಯಕ್ಷ ಮಾರುತಿ ಶಿರವಾಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಗುರುಲಿಂಗಪ್ಪ ಮೊಗಲಾ, ಲಲಿತಾ ಶಾಸಿ, ರಾಜೇಶ್ವರಿ ದೇವರ್​, ಸಂಗೀತಾ ಪಾಟೇಕರ್​, ಶಿವರಾಜ್​ ಚಿತ್ತಾಪುರ, ಮಾಣಿಕೆಪ್ಪ ಶಂಕ್ರಪ್ಪ, ಚನ್ನಪ್ಪ ಸುಡಗಾಡು ಸಿದ್ದ, ಯಲ್ಲಪ್ಪ ಡೊಕ್ಕಾ, ಸಿದ್ರಾಮ ಬುಡ್ಗಜಂಗಮ, ಅನವಾರ ಮೇಸಿ ಚಿತ್ತಾಪುರ, ಶಾಲುಬೇಗಂ ಚಿತ್ತಾಪುರ, ಮಹಾಲಿಂಗಮ್ಮ ಚಿತ್ತಾಪುರ ಇತರರಿದ್ದರು.
ಕಲಾವಿದರ ಹಾಡಿಗೆ ಜನ ಫಿದಾ
ಕಲಾವಿದರಾದ ಶಂಕ್ರಮ್ಮ ಮಹಾದೇವ ರಾಮತೀರ್ಥ ಬುರ್ರಕಥೆ, ರಾಕೇಶ ಯಾದಗಿರಿ ವಚನ ಗೀತೆ, ಶಂಕರ ಶಾಸಿ ಯಾದಗಿರಿ ಭಾವಗೀತೆ, ಮಾರುತಿ ಮುಗಳಕರ್​ ತತ್ವಪದ, ಭರತಕುಮಾರ ಶಿರವಾಟಿ ಬಸವಣ್ಣನ ಪಾತ್ರ, ಗಂಗಮ್ಮ ಯಾದಗಿರಿ ಜಾನಪದ ಸಂಗೀತ, ಪಂಚಶೀಲ ಸುಮಾರ, ಮಾಂತೇಶ ನರಬೋಳಿ ತಬಲಾ ಸಾಥ್​ ನೀಡುವ ಮೂಲಕ ಜಾನಪದ ಕಲಾಲೋಕವನ್ನು ಸೃಷ್ಟಿಸಿದರು. ಹಳ್ಳಿ ಸೊಗಡಿನ ಹಾಡುಗಳಿಗೆ ಜನ ಫಿದಾ ಆದರು.