ಕಲಬುರಗಿ ಜಗತ್​ ವೃತ್ತದ ಬಳಿ ಲುಂಬಿನಿ ಉದ್ಯಾನವನದಲ್ಲಿ ಶುಕ್ರವಾರ ಆಯೋಜಿಸಿದ್ದ ಬುದ್ಧ ಜಯಂತಿ ಕಾರ್ಯಕ್ರಮವನ್ನು ಶಾಸಕ ಅಲ್ಲಮಪ್ರಭು ಪಾಟೀಲ್​ ಉದ್ಘಾಟಿಸಿದರು. ಭಂತೆ ಧಮ್ಮಜ್ಯೋತಿ, ತಿಪ್ಪಣ್ಣಪ್ಪ ಕಮಕನೂರ, ಫೌಜಿಯಾ ತರನ್ನುಮ್​, ಭಂವರಸಿಂಗ್​ ಮೀನಾ, ಡಾ.ಎಸ್​.ಡಿ.ಶರಣಪ್ಪ, ಅಡ್ಡೂರು ಶ್ರೀನಿವಾಸುಲು, ರಾಯಪ್ಪ ಹುಣಸಗಿ, ಜಗದೀಶ್ವರಿ ನಾಸಿ, ಎ.ಬಿ.ಹೊಸಮನಿ, ಸುರೇಶ ಬಡಿಗೇರ ಇತರರಿದ್ದರು. 
ರಾಜ್ಯ

ಬುದ್ಧನ ಶಾಂತಿ ಸಂದೇಶ ಇಂದಿನ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಲ್ಲಮಪ್ರಭು ಪಾಟೀಲ್​ ಪ್ರತಿಪಾದನೆ
  • ಜಿಲ್ಲಾಡಳಿತದಿಂದ ಜಯಂತ್ಯುತ್ಸವ
ಕಲಬುರಗಿ: ವಿಶ್ವವ್ಯಾಪಿ ಬುದ್ಧನ ಶಾಂತಿ ಮತ್ತು ಅಹಿಂಸೆ ಸಂದೇಶ ಇಂದಿನ ಸಂರ್ಷಮಯ ಜಗತ್ತಿಗೆ ಅತ್ಯಗತ್ಯ. ಬುದ್ಧನ ಜ್ಞಾನೋದಯದ ಕಿರಣಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೆ ಇಡೀ ಮಾನವಕುಲಕ್ಕೆ ಬೆಳಕಾಗಿವೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್​ ಪ್ರತಿಪಾದಿಸಿದರು.
ಜಗತ್​ ವೃತ್ತದ ಬಳಿಯ ಲುಂಬಿನಿ ಉದ್ಯಾನವನದ ಡಾ.ಬಿ.ಆರ್​. ಅಂಬೇಡ್ಕರ್​ ಪ್ರತಿಮೆ ಎದುರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಡಿ ಶುಕ್ರವಾರ ಆಯೋಜಿಸಿದ್ದ ಬುದ್ಧ ಜಯಂತ್ಯುತ್ಸವ ಉದ್ಘಾಟಿಸಿದ ಅವರು, ಬಾಬಾಸಾಹೇಬ್​ ಅಂಬೇಡ್ಕರ್​ ಶೋಷಿತರ ಪರ ಹೋರಾಡಿ ಅಂತಿಮವಾಗಿ ಬುದ್ಧನ ವೈಜ್ಞಾನಿಕ ಮತ್ತು ಮಾನವೀಯ ತತ್ವಗಳಿಂದ ಪ್ರಭಾವಿತರಾದರು. 1956ರಲ್ಲಿ ಲಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ಸಮಾನತೆಯ ಹೊಸ ಯುಗ ಆರಂಭಿಸಿದರು ಎಂದರು.
ವಿಧಾನ ಪರಿಷತ್​ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಬುದ್ಧ, ಬಸವ ಮತ್ತು ಅಂಬೇಡ್ಕರ್​ ಆಶಯ ಒಂದೇ ಆಗಿತ್ತು. ಶಾಂತಿ, ಕರುಣೆ ಮತ್ತು ಸತ್ಯದ ಮಾರ್ಗವನ್ನು ಗೌತಮ ಬುದ್ಧ ತೋರಿಸಿಕೊಟ್ಟರೆ, ಸಂವಿಧಾನದ ಮೂಲಕ ಗೌರವಯುತವಾಗಿ ಬದುಕುವುದು ಹೇಗೆಂಬುದನ್ನು ಅಂಬೇಡ್ಕರ್​ ಕಲಿಸಿಕೊಟ್ಟಿದ್ದಾರೆ. ಇವರ ತತ್ವಗಳನ್ನು ಪಾಲಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರ ಅನುಭವ ಮಂಟಪಕ್ಕಿಂತಲೂ 2500 ವರ್ಷಗಳ ಹಿಂದೆಯೇ ಬುದ್ಧ ಸಮಾನತೆಯ ಸಂಟನೆ ರೂಪಿಸಿದ್ದರು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯೆ ಚಂದ್ರಿಕಾ ಪರಮೇಶ್ವರ, ಬುದ್ಧ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್​, ನಗರ ಪೊಲೀಸ್​ ಆಯುಕ್ತ ಡಾ.ಎಸ್​.ಡಿ. ಶರಣಪ್ಪ, ಎಸ್​ಪಿ ಅಡ್ಡೂರು ಶ್ರೀನಿವಾಸುಲು, ಜಿಪಂ ಸಿಇಒ ಭಂವರ್​ಸಿಂಗ್​ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ರಾಜ್ಯ ಸರ್ಕಾರಿ&ಅರೆ ಸರ್ಕಾರಿ ಎಸ್​ಸಿ&ಎಸ್​ಟಿ ನೌಕರರ ಸಂದ ಅಧ್ಯಕ್ಷ ಮಹೇಶ ಹುಬಳ್ಳಿ, ಸಮಾಜದ ಮುಖಂಡ ಎ.ಬಿ.ಹೊಸಮನಿ ಇತರರಿದ್ದರು.
ಕನ್ನಡ ಮತ್ತು ಸಂಸತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಸ್ವಾಗತಿಸಿದರು. ಭಂತೆ ಧಮ್ಮ ಜ್ಯೋತಿ ಬುದ್ಧ ವಂದನೆ ಸಲ್ಲಿಸಿದರು. ಸಿದ್ದಾರ್ಥ ಚಿಮ್ಮಾ ಇದ್ಲಾಯಿ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು.
"

ಬುದ್ಧನ ಜನನ, ಜ್ಞಾನೋದಯ ಹಾಗೂ ಮಹಾಪರಿನಿರ್ವಾಣ ಈ ಮೂರೂ ಟನೆಗಳು ಒಂದೇ ದಿನ ಅಂದರೆ ವೈಶಾಖ ಪೂರ್ಣಿಮೆಯಂದು ನಡೆದಿರುವುದು ವಿಶ್ವ ಇತಿಹಾಸದ ಅಪರೂಪದ ವಿದ್ಯಮಾನ. ಅಶೋಕ ಚಕ್ರವರ್ತಿ ಕಾಲದಿಂದ ಹರಡುತ್ತ ಬಂದ ಈ ಧರ್ಮದ ಹಾದಿಯಲ್ಲಿ ಯುವ ಪೀಳಿಗೆ ಸಾಗಬೇಕು.

— > ಅಲ್ಲಮಪ್ರಭು ಪಾಟೀಲ್​ ಶಾಸಕ