ಶಹಾಪುರ ತಾಲೂಕಿನ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದಲ್ಲಿ ಭಾನುವಾರ ಬುದ್ದ, ಬಸವ, ಅಂಬೇಡ್ಕರ್ ಜಯಂತಿ ನಿಮಿತ್ತ ಹಮ್ಮಿಕೊಂಡ ವಿಭಾಗ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಉದ್ಘಾಟಿಸಿದರು. ಅಮರೇಶ ಯತಗಲ್, ಸಾಹಿತಿ ಸಿದ್ರಾಮ ಹೊನ್ಕಲ್, ಶರಣು ಗದ್ದುಗೆ, ರವೀಂದ್ರ ಹೊಸಮನಿ,ಅಂಬ್ಲಯ್ಯ ಸೈದಾಪುರ, ಅಯ್ಯಣ್ಣ ಕನ್ಯಕೊಳ್ಳುರ, ಆರ್.ಚೆನ್ನಬಸ್ಸು ವನದುರ್ಗ, ಗಿರಿಯಪ್ಪಗೌಡ ಬಾಣತಿಹಾಳ,ಚೆನ್ನಪ್ಪ ಆನೇಗುಂದಿ, ಪ್ರಕಾಶ ದೊರೆ, ಸಿದ್ದಪ್ಪ ಹೊಟ್ಟಿ ಇತರರಿದ್ದರು.
- ಹಂಪಿ ವಿವಿ ನಿರ್ದೇಶಕ ಅಮರೇಶ ಹೇಳಿಕೆ
- ಭೀ.ಗುಡಿಯಲ್ಲಿ ವಿಭಾಗಮಟ್ಟದ ಕವಿಗೋಷ್ಠಿ
ಶಹಾಪುರ: ಗೌತಮ ಬುದ್ಧ ಸಮಾಜದಲ್ಲಿ ಶಾಂತಿ, ನೆಮ್ಮದಿ ಬಿತ್ತುವ ಕನಸ್ಸು ಕಂಡಿದ್ದರು. ಬಸವಣ್ಣನವರು ಕಲ್ಯಾಣ ರಾಜ್ಯ ನಿರ್ಮಾಣದ ಗುರಿ ಹೊಂದಿದ್ದರು. ಅದೇ ರೀತಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರಜಾ ರಾಜ್ಯ ಕಟ್ಟುವ ಕನಸ್ಸು ಕಂಡಿದ್ದರು ಹೀಗಾಗಿ ಈ ಮೂವರು ಜ್ಞಾನ ಸೂರ್ಯ ಆಗಿದ್ದರು ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ನಿರ್ದೇಶಕ ಅಮರೇಶ ಯತಗಲ್ ಹೇಳಿದರು.
ತಾಲೂಕಿನ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದಲ್ಲಿ ಭಾನುವಾರ ಬುದ್ದ, ಬಸವ, ಅಂಬೇಡ್ಕರ ಜಯಂತ್ಯುತ್ಸವ ನಿಮಿತ್ತ ವಿಭಾಗ ಮಟ್ಟದ ಕವಿಗೋಷ್ಠಿ ಹಾಗೂ ಕೋಲ್ಮಿಂಚಿನ ಬೆಳಕು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು, ಈ ಮೂವರು ಕಂಡಿದ್ದ ಕನಸು ಸಮಾಜದ ಅಭಿವೃದ್ಧಿಯಾಗಿದ್ದರ ಫಲವಾಗಿ ಈಗ ನನಸಾಗಿವೆ ಎಂದರು.
ಮೇರು ಸಾಧಕರನ್ನು ಜಾತಿಗೆ ಸಿಮೀತಗೊಳಿಸಬಾರದು. ಜಾತಿ ಮುಖ್ಯವಲ್ಲ ಅವರ ತತ್ವ, ಸಿದ್ಧಾಂತ, ಬದುಕು ಮುಖ್ಯ. ಅಂಬೇಡ್ಕರ್ ಅವರು ನಮ್ಮ ಹೋರಾಟ ದೀಪ. ಮನುಕುಲದ ಅರಿವು ವಿಸ್ತರಿಸುವ ಬೆಳಕಿನ ಜ್ಯೋತಿ ಈ ಮೂವರು ಆಗಿದ್ದಾರೆ ಎಂದರು.
ನಗರದ ಬುದ್ಧ ವಿಹಾರದ ನಾಗರತ್ನ ಭಂತೆ, ಸಾಹಿತಿ ಸಿದ್ರಾಮ ಹೊನ್ಕಲ್, ಶರಣು ಗದ್ದುಗೆ, ರವೀಂದ್ರ ಹೊಸಮನಿ, ಅಂಬ್ಲಯ್ಯ ಸೈದಾಪುರ, ಅಯ್ಯಣ್ಣ ಕನ್ಯಕೊಳ್ಳುರ, ಆರ್.ಚೆನ್ನಬಸ್ಸು ವನದುರ್ಗ, ಗಿರಿಯಪ್ಪಗೌಡ ಬಾಣತಿಹಾಳ, ಚೆನ್ನಪ್ಪ ಆನೇಗುಂದಿ, ಪ್ರಕಾಶ ದೊರೆ, ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಪೂಜಾರಿ, ಶ್ರೀಶೈಲ್ ಹೊಸಮನಿ, ಸಿದ್ದಪ್ಪ ಹೊಟ್ಟಿ, ಯಲ್ಲಪ್ಪ ನರಿ, ರಾಜು ಅಣಬಿ, ಭೀಮರಾಯ ತಳವಾರ, ಬಾಬುರಾವ ಭೂತಾಳೆ ಭಾಗವಹಿಸಿದ್ದರು.
ಈ ವೇಳೆ ಹಿರಿಯ ಸಾಹಿತಿ ಶರಣಪ್ಪ ಕರಡಿ, ದಿ.ಬುದ್ದೂಷ ದೇವೆಂದ್ರ ಹೆಗಡೆ, ಪಾರ್ವತಿ ಬುದನೂರ ಅವರಿಗೆ ಬುದ್ದ, ಬಸವ, ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
"
ಮದ್ಯಪಾನ ಸೇವನೆಯಿಂದ ಯುವಕರು ಬಲಿಯಾಗುತ್ತಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳು ಯುವಕರಿಗೆ ದಾರಿ ದೀಪವಾಗಲಿ. ಇಂತಹ ಸಾಹಿತ್ಯದ ಕಾರ್ಯಕ್ರಮಗಳಿಗೆ ತಮ್ಮ ಮಕ್ಕಳನ್ನು ಕರೆತರಬೇಕು.
— > ಶರಣಪ್ಪ ಸಲಾದಪುರ ಅಧ್ಯಕ್ಷರು, ಮದ್ಯಪಾನ ಸಂಯಮ ಮಂಡಳಿ