- ಹಳೇ ಸೋಫಾ, ಸ್ಲಿಪ್ಪರ್, ಹಾಸಿಗೆ, ಕಮೋಡ್ಗಳನ್ನು ಸಿಕ್ಕ ಸಿಕ್ಕ ರಸ್ತೇಲಿ ಬಿಸಾಡ್ಬೇಡಿ
- BSWMLನಿಂದ ಡಿ ಕ್ಲಟರ್ ಎನ್ನುವ ಆಪ್ ಜಾರಿ, ಫ್ರೀಯಾಗಿ ವಿಲೇವಾರಿ ಮಾಡಲು ಅವಕಾಶ
- DClutter ಮೂಲಕ ಬೆಂಗಳೂರಿನ ರಸ್ತೆಯ ಅಂದ ಕಾಪಾಡಿಕೊಳ್ಳಲು ಶ್ರಮ
DClutter: ಬೆಂಗಳೂರಿನಲ್ಲಿ ಅತಿ ದೊಡ್ಡ ಸಮಸ್ಯೆಗಳು ಎಂದು ಲಿಸ್ಟ್ ಮಾಡುತ್ತಾ.. ಕುಳಿತರೆ ಒಂದೆರಡಲ್ಲ ನೂರಾರು ಸಿಗುತ್ತದೆ. ರಸ್ತೆ ಗುಂಡಿ, ಟ್ರಾಫಿಕ್, ದುಬಾರಿ ಮನೆ ಬಾಡಿಗೆ, ನೀರಿನ ಸಮಸ್ಯೆ. ಇದೆಲ್ಲಕ್ಕಿಂತ ಬೃಹತ್ ಮುಜುಗರಕ್ಕೀಡು ಮಾಡುವಂತದ್ದು ಎಂದರೆ ಅದು, ಎಲ್ಲೆಂದರಲ್ಲಿ ಕಸ ಬಿಸಾಡುವುದು. ಇದರಿಂದ ಸಿಲಿಕಾನ್ ಸಿಟಿ ಸೌಂದರ್ಯ ಹಾಳಾಗುತ್ತದೆ ಎಂದು ಪರಿಗಣಿಸಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಹೊಸ ತಂತ್ರವೊಂದನ್ನು ಜಾರಿ ಮಾಡಿದೆ.
ಹೌದು, ಇತ್ತೀಚೆಗೆ ಬೆಂಗಳೂರಿನ ರಸ್ತೆಯ ಗಲ್ಲಿ ಗಲ್ಲಿಯಲ್ಲೂ ಕಸ ಇರುವ ಬಗ್ಗೆ ಉದ್ಯಮಿ ಕಿರಣ್ ಮಜುಂದಾರ್ ಅವರು ಪೋಸ್ಟ್ ಹಂಚಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿದ್ದರು. ಇಷ್ಟೆಲ್ಲ ರಾಧಾಂತಗಳ ಮಧ್ಯೆ BSWML 'DClutter' ಎನ್ನುವ ಆಪ್ ಅನ್ನು ಜಾರಿ ಮಾಡಿದೆ. ಏನಿದು ಹೊಸ ಅಪ್ಲಿಕೇಶನ್ ಬಳಕೆ ಮಾಡಿಕೊಳ್ಳೋದು ಹೇಗೆ, ಯಾವ ಕಸವನ್ನು ನೀಡಬೇಕು ಎಂಬುದರ ಬಗ್ಗೆ ಡಿಟೇಲ್ಸ್ ಈ ಲೇಖನದಲ್ಲಿ ಇದೆ.
ಇನ್ಮುಂದೆ ಕಸದೋರು ಬಂದಿಲ್ಲ. ಆಫೀಸ್ನಲ್ಲಿದ್ದಾಗ ಕಸದ ಟಿಪ್ಪರ್ ಲಾರಿಯವರು ಬಂದರೆ ನಾವೇನು ಮಾಡ್ಬೇಕು ಎಂದು ಸಬೂಬು ಹೇಳುವ ಹಾಗಿಲ್ಲ. ಹಾಗೆಯೇ ಬೇಡವಾದ ಗೃಹೋಪಯೋಗಿ ವಸ್ತು ಯಾರಿಗೂ ತಿಳಿಯದಂತೆ ರಸ್ತೆಯಲ್ಲಿ ಬಿಸಾಡೋದು ಬೇಡ. ಬದಲಾಗಿ BSWML ಬಿಡುಗಡೆ ಮಾಡಿರುವ 'ಡಿ ಕ್ಲಟರ್' ಎನ್ನುವ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರ ಮೂಲಕ ವಾರಕ್ಕೊಮ್ಮೆ ಕಸವನ್ನು ಸಂಗ್ರಹಿಸುತ್ತದೆ.
ಯಾವ ಕಸ ನೀಡಬೇಕು?
ಮುರಿದ ಹಾಸಿಗೆಗಳು, ಕಬೋರ್ಡ್, ಪಾದರಕ್ಷೆ, ಬಟ್ಟೆ, ಬೆಡ್, ಕಮೋಡ್, ಬೆಂಚು, ಮಕ್ಕಳ ಆಟಿಕೆ, ಸಿಂಕ್ ಎಲೆಕ್ಟ್ರಾನಿಕ್ಸ್ ನಲ್ಲಿಯಂತಹ ಬೃಹತ್ ವಸ್ತುಗಳನ್ನು ನೀಡಬಹುದು. ಕೆಲವು ಹಣ ಬರುವಂತಹ ವಸ್ತುಗಳನ್ನು ಗುಜರಿ ಅಂಗಡಿಕೊಟ್ಟರೆ, ಇನ್ನು ಬೇಡವಾದ ವಸ್ತುವನ್ನು ಫುಟ್ಪಾತ್ ಮೇಲೆ, ಉದ್ಯಾನಗಳ ಮುಂದೆ,ರಸ್ತೆ ಬದಿ, ಖಾಲಿ ರಸ್ತೆಯಲ್ಲಿ ಸುರಿಯುತ್ತಾರೆ. ಮಳೆ ಬಂದು ತೊಯ್ದರೆ ಸುತ್ತಮುತ್ತಲಿನ ಜನರಿಗೆ, ಕಸ ತೆಗೆಯುವವರಿಗೆ ಸಮಸ್ಯೆ . ಹೀಗಾಗಗಿ ಜನರು ಬೇಜವಾಬ್ದಾರಿಯಿಂದ ವರ್ತಿಸದೆ ಡಿ ಕಲ್ಚರ್ ಮೂಲಕ ಕಸದವರಿಗೆ ನೀಡಬಹುದು.
ಬಳಕೆ ಮಾಡೋದು ಹೇಗೆ?
ಆಂಡ್ರ್ಯಾಡ್ ಮತ್ತು ಐಓಎಸ್ ಫ್ಲಾಟ್ ಫಾರ್ಮ್ನಲ್ಲಿ ಲಭ್ಯವಿರುವ ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡು, ನೋಂದಾಯಿಸಿ, ಲೋಕೇಶನ್ ಸರಿಯಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಂತರ ಬಿಸಾಡುವ ವಸ್ತುಗಳನ್ನುಆಯ್ಕೆ ಮಾಡಿ ನೇರವಾಗಿ ತಮ್ಮ ಮನೆಗಳಿಂದಲೇ ಅವುಗಳನ್ನು ಪಡೆದುಕೊಂಡು ಹೋಗಲು ಸಮಯವನ್ನು ನಿಗದಿ ಪಡಿಸಬಹುದು. ಆದರೆ, ಇಲ್ಲಿ ಹಸಿ ತಾಜ್ಯ ತೆಗೆದುಕೊಳ್ಳುವುದಿಲ್ಲ. ಜೊತೆಗೆ ಇದು ಉಚಿತ ಪಿಕಪ್ ಆಗಿರುತ್ತದೆ ಎನ್ನಲಾಗಿದೆ.
BSWML ಸಿಇಒ ಏನಂದ್ರು?
ನಾವು ಈ ಪದ್ಧತಿ ಜಾರಿ ಮಾಡಿದ ನಂತರ ನಮಗೆ ಸಾಕಷ್ಟು ಕರೆ ಬಂದಿದೆ. ಇದದು ಒಳ್ಳೆಯ ಕೆಲಸ ಎಂದಿದ್ದಾರೆ.ನಾವು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತೇವೆ. ಈ ಅಪ್ಲಿಕೇಶನ್ ಬಳಕೆ ಮಾಡಿಕೊಳ್ಳಬೇಕು ಜನರು ಬೆಂಗಳೂರಿನ ರಸ್ತೆಗಳ ಅಂದವನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು. ನಾಗರಿಕರಲ್ಲಿ ಜವಾಬ್ದಾರಿಯುತ ವಿಲೇವಾರಿ ಅಭ್ಯಾಸಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ರಸ್ತೆಯಲ್ಲಿ ತ್ಯಾಜ್ಯ ವಿಲೇವಾರಿ ಕಡಿಮೆಯಾಗುವುದು ಎಂದು ಭರವೆ ಇಟ್ಟುಕೊಂಡಿದ್ದೇವೆ ಎಂದು ಬಿಎಸ್‌ಡಬ್ಲ್ಯೂಎಂಎಲ್ ಸಿಇಒ ಕರಿಗೌಡ ಮಾತನಾಡಿದರು, (ಏಜೆನ್ಸೀಸ್).