ಮದ್ಯದ ಅಂಗಡಿ ಸ್ಥಾಪನೆ Protest ವಿರೋಧಿಸಿ ಬಂಗಾರಪೇಟೆ ತಾಲೂಕು ಕಾರಹಳ್ಳಿ ಗ್ರಾಮ ಪಂಚಾಯಿತಿ ಮುಂದೆ ಮಹಿಳೆಯರು ಪೊರಕೆ ಹಿಡಿದು ಪ್ರತಿಭಟಿಸಿದರು
- ಕಾರಹಳ್ಳಿ ಗ್ರಾಪಂ ಮುಂಭಾಗ ದಲಿತಪರ ಸಂಟನೆಗಳಿಂದ ಹೋರಾಟ
ಬಂಗಾರಪೇಟೆ: ಕಾರಹಳ್ಳಿಯಲ್ಲಿ ಮದ್ಯದ ಅಂಗಡಿ ಸ್ಥಾಪನೆ ವಿರೋಧಿಸಿ ದಲಿತಪರ ಸಂಟನೆಗಳ ನೇತೃತ್ವದಲ್ಲಿ ನೂರಾರು ಮಂದಿ ಮಹಿಳೆಯರು ಕಾರಹಳ್ಳಿ ಗ್ರಾಪಂ ಮುಂಭಾಗ ಸೋಮವಾರ ಪೊರಕೆ ಚಳವಳಿ ನಡೆಸಿದರು.
ಬಂಗಾರಪೇಟೆ ತಾಲೂಕು ಕಾರಹಳ್ಳಿ ಗ್ರಾಪಂ ವ್ಯಾಪ್ತಿಯ ಗಾಯತ್ರಿ ಬಡಾವಣೆಯಲ್ಲಿ ವೈಟ್ಫೀಲ್ಡ್ ಸಮೀಪವಿರುವ ವೈನ್ ಶಾಪ್ ಸ್ಥಳಾಂತರಿಸಿ ಕಾರಹಳ್ಳಿಯಲ್ಲಿ ತೆರೆಯಲು ಹಲವು ತಿಂಗಳಿನಿಂದ ತೆರೆ ಮರೆಯಲ್ಲಿ ಪಿತೂರಿ ನಡೆಯುತ್ತಿತ್ತು. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಹಲವು ಸದಸ್ಯರು ಮತ್ತು ಗ್ರಾಮದ ಮುಖಂಡರು ವೈನ್ಶಾಪ್ ತೆರೆಯಲು ಅನುಮತಿ ನೀಡಬಾರದು ಎಂದು ಗ್ರಾಪಂ ಪಿಡಿಒ Protest ಮತ್ತು ಸ್ಥಳಿಯ ಅಬಕಾರಿ ವಲಯ ನಿರೀಕರಿಗೆ ದೂರು ಸಲ್ಲಿಸಿದ್ದರು.
ಅಬಕಾರಿ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ದೂರಿಗೆ ಸ್ಪಂದಿಸದೆ ಎನ್ಒಸಿ ಸಂಬಂಧಿಸಿದಂತೆ ಗ್ರಾಪಂ ಪಿಡಿಒಗೆ ಪತ್ರ ಬರೆದಿದ್ದರು. ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಪಿಡಿಒ ಈ ವಿಷಯ ಮಂಡಿಸಿದ್ದರು. ಅದೇ ಸಮಯದಲ್ಲಿ ಪಂಚಾಯಿತಿ ಕಾರ್ಯಾಲಯಕ್ಕೆ ಆಗಮಿಸಿದ ಹಲವು ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಮುಂದಿನ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಗ್ರಾಪಂ ಅಧ್ಯ ಶ್ರೀನಿವಾಸ್ ತಿಳಿಸಿದ್ದರು.
ಈ ಮಧ್ಯೆ ಎನ್ಒಸಿ ನೀಡುವ ಸಂಬಂಧವಾಗಿ ಪ್ರತಿ ಸದಸ್ಯರಿಂದ ಸಹಿ ಸಂಗ್ರಹಣ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಷಯ ತಿಳಿದ ಗ್ರಾಮಸ್ಥರು ವೈನ್ಶಾಪ್ಗೆ ಅನುಮತಿ ನೀಡಬಾರದೆಂದು ಒತ್ತಾಯಿಸಿ ಪ್ರತಿಭಟಿಸಿದರು.
ಯಾವುದೇ ವಿಷಯವನ್ನು ವಾರ್ಡ್ ಸಭೆಯಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು. ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಬಕಾರಿ ಇಲಾಖೆಯ ಪತ್ರ ಮಂಡಿಸಿ ಎನ್ಒಸಿಗೆ ಪ್ರಯತ್ನ ನಡೆದಿದೆ. ವೈನ್ ಶಾಪ್ ಬೇಡ ಎಂದರೂ ಎನ್ಒಸಿ ನೀಡುವ ಪಿತೂರಿ ನಡೆಯುತ್ತಿದೆ. ಇಒ ಗಮನಕ್ಕೆ ಈ ವಿಷಯ ಬಂದಿದ್ದರೂ ಮೌನವಾಗಿರುವುದರಿಂದ ಅನುಮಾನ ಉಂಟಾಗಿದೆ. ಪಿಡಿಒ ಮತ್ತು ಅಧ್ಯರು ಹಣದ ಆಮಿಷ ನೀಡಿ ರಹಸ್ಯವಾಗಿ ಸದಸ್ಯರಿಂದ ಎನ್ಒಸಿ ನೀಡಲು ಸಹಿ ಮಾಡಿಸಿಕೊಳ್ಳುತ್ತಿದ್ದಾರೆ. - ವೆಂಕಟೇಶ್, ದಲಿತ ಮುಖಂಡ ಹುಣಸಿನಹಳ್ಳಿ.
ತಹಸೀಲ್ದಾರ್ ಸ್ಥಳ ಪರಿಶೀಲನೆ:
ಗಾಯತ್ರಿ ಬಡಾವಣೆಯಲ್ಲಿ ವೈನ್ ಶಾಪ್ ಕಟ್ಟಡವನ್ನು ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಎನ್ಒಸಿ ರ್ನಿಣಯದ ಬಗ್ಗೆ ತೆಗೆದುಕೊಂಡಿರುವ ಮಾಹಿತಿ ಬಗ್ಗೆ ಪಿಡಿಒ ಅವರಿಂದ ಮಾಹಿತಿ ಪಡೆದು, ಈ ಸಂಬಂಧವಾಗಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು. ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿ ಪ್ರತಿಭಟನೆ ಹಿಂಪಡೆದ ಗ್ರಾಮಸ್ಥರು ಮತ್ತೆ ವೈನ್ ಶಾಪ್ ಸ್ಥಾಪನೆಗೆ ಅನುಮತಿ ನೀಡಿದರೆ, ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.