ಕೆರೆ ತುಂಬುವ ಯೋಜನೆಯಿಂದಾಗಿ ಗುರುಮಠಕಲ್ ತಾಲೂಕಿನ ಗೌಡಗೇರಾ ಗ್ರಾಮದ ಕೆರೆ ತುಂಬುವ ಕಾರ್ಯಕ್ರಮಕ್ಕೆ ಸಾಯಿಬಣ್ಣ ಬೋರಬಂಡಾ, ಶರಣಪ್ಪ ಮಾನೇಗಾರ ಪೂಜೆ ಸಲ್ಲಿಸುವ ಮೂಲಕ ಚಾಲನೆ ನಿಡಿದರು. ಖಾಜಾ ಮೈನೋದ್ದೀನ್, ಆನಂದ ಬೋಯಿನಿ, ರಾಮಪ್ಪ ಇತರರಿದ್ದರು.
- ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೋರಬಂಡ ಹೇಳಿಕೆ
- ಗೌಡಗೇರಾ ಕೆರೆ ತುಂಬುವ ಕಾರ್ಯಕ್ಕೆ ಚಾಲನೆ
ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ನಿರಂತರ ಹೋರಾಟ ಮಾಡಿದ್ದರ ಬಲವಾಗಿ ಇಂದು ತಾಲೂಕಿನ ಕೆರೆಗಳಿಗೆ ಜೀವಕಳೆ ಬಂದಿದೆ ಎಂದು ಸಮಿತಿ ಸಂಸ್ಥಾಪಕ ಅಧ್ಯಕ್ಷ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಯಿಬಣ್ಣ ಬೋರಬಂಡಾ ಹೇಳಿದರು.
ಮತಕ್ಷೇತ್ರದ ಗೌಡಗೇರಾ ಗ್ರಾಮದ ಕೆರೆಗೆ ನೀರು ತುಂಬುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ೨೦೧೫ರಲ್ಲಿ ಕ್ಷೇತ್ರದಲ್ಲಿ ನೀರಾವರಿಗೆ ಹೋರಾಟ ಆರಂಭಿಸಲಾಗಿತ್ತು. ನಮಗೆ ದೇವರು ಅನ್ಯಾಯ ಮಾಡಿದ್ದಾನೆ. ಕುಡಿಯುವ ನೀರು ಸಹ ನೀಡಿಲ್ಲ, ನಮ್ಮ ಭಾಗದ ಜನರು ದೊಡ್ಡ ಪ್ರಮಾಣದಲ್ಲಿ ಗಂಟು ಮೂಟೆ ಕಟ್ಟಿಕೊಂಡು ಗುಳೆ ಹೋಗುವುದನ್ನು ತಡೆದು ಅವರ ಬಾಳು ಹಸನು ಮಾಡಬೇಕು ಎಂಬ ಕನಸು ಹೊಂದಿದ್ದೆ. ಅದರಂತೆ ಹೋರಾಟ ಮಾಡುವ ಮೂಲಕ ೧೦೫ ಕೆರೆಗಳಿಗೆ ನೀರು ಭರ್ತಿ ಮಾಡಲಾಗುತ್ತಿದೆ. ರೈತರು ಕೆರೆಗಳ ನೀರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಈ ವೇಳೆ ಖಾಜಾ ಮೈನೋದ್ದೀನ್, ಆನಂದ ಬೋಯಿನಿ, ರಾಮಪ್ಪ ಇತರರಿದ್ದರು.