ದೊಡ್ಡಬಳ್ಳಾಪುರದ ಕೊನಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನಶೆಮುಕ್ತ ಭಾರತ' ಅಭಿಯಾನದಲ್ಲಿ ಮನಶಾಸ್ತ್ರಜ್ಞ ಸದಾನಂದ, ಕಾಲೇಜು ಪ್ರಾಂಶುಪಾಲೆ ವಿನುತಾ, ಪ್ರೌಢಶಾಲೆ ಮುಖ್ಯಶಿಕ್ಷಕ ನಾರಾಯಣಸ್ವಾಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಚಾಲಕ ವಿಶ್ವಾಸ್​, ಯುವ ಸಂಚಲನದ ಚಿದಾನಂದ್​, ನವೀನ್​ ಇದ್ದರು. 
ರಾಜ್ಯ

ನಶೆಯಿಂದ ಮಿದುಳಿಗೆ ತೊಂದರೆ / DODABALLAPUR

ಬೆಂಗಳೂರು ಗ್ರಾಮಾಂತರ ಡೆಸ್ಕ್
ದೊಡ್ಡಬಳ್ಳಾಪುರ : ಯುವ ಸಮೂಹವನ್ನು ಮಾದಕ ವ್ಯಸನದ ಜಾಲದಿಂದ ಪಾರು ಮಾಡುವ ಉದ್ದೇಶದಿಂದ ಕೊನಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ "ನಶೆಮುಕ್ತ ಭಾರತ ಸಪ್ತಾಹ' ಅಂಗವಾಗಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಕಳ್ಳಸಾಗಣೆ' ವಿರೋಧಿ ದಿನ ಆಚರಿಸಲಾಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಮಾತನಾಡಿ, ಯುವಜನರು ಸಣ್ಣ ವಯಸ್ಸಿನಲ್ಲೇ ವಿವಿಧ ರೂಪಗಳಲ್ಲಿ ನಶೆಯ ಮೊರೆ ಹೋಗುತ್ತಿದ್ದಾರೆ. ಅವರನ್ನು ಈ ಪಿಡುಗಿನಿಂದ ರಕ್ಷಿಸಿ, ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಡಿಎಚ್​ಇಒ ಮಹಾದೇವಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹದಿಹರೆಯದವರು ಹೆಚ್ಚು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇದು ಮೆದುಳಿನ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೆ, ವ್ಯಕ್ತಿಯ ಆಲೋಚನಾ ಶಕ್ತಿ ಮತ್ತು ಭಾವನೆಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಇದರಿಂದ ದೈಹಿಕ ಆರೋಗ್ಯ ಸಮಸ್ಯೆಗಳ ಜತೆಗೆ ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟ್ಟಗಳೂ ಎದುರಾಗುತ್ತವೆ ಎಂದು ಎಚ್ಚರಿಸಿದರು.