ಯಶವಂತಪುರದಲ್ಲಿ ಬ್ರಹ್ಮರಥೋತ್ಸವ ಸಂಪನ್ನ Yeshwantpur
ಮಡಿವಾಳ: ಶ್ರೀರಾಮನವಮಿ ಅಂಗವಾಗಿ ಮಡಿವಾಳ ಗ್ರಾಪಂ ವ್ಯಾಪ್ತಿಯ ಯಶವಂತಪುರ ಗ್ರಾಮದ ಶ್ರೀ ಕೋದಂಡರಾಮಸ್ವಾಮಿ ದೇವಾಲಯಲ್ಲಿ ಶುಕ್ರವಾರ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿತು.Yeshwantpur
ಮಾಲೂರು ತಾಲೂಕಿನ ಯಶವಂತಪುರ ಗ್ರಾಮದಲ್ಲಿ ಶ್ರೀರಾಮನವಮಿ ಅಂಗವಾಗಿ ಶ್ರೀ ಕೋದಂಡರಾಮಸ್ವಾಮಿ ದೇವಾಲಯಲ್ಲಿ ಸ್ವಾಮಿಗೆ ಬೆಳಗ್ಗೆ ಅಭಿಷೇಕ, ಹೋಮ, ಹವನ, ವಿಶೇಷ ಅಲಂಕಾರ ನಡೆದವು. ಮಧ್ಯಾಹ್ನ 12 ಗಂಟೆ ಸುವಾರಿಗೆ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಭಕ್ತರು ಬಾಳೆಹಣ್ಣು, ದವನ ಅರ್ಪಿಸುವ ಮೂಲಕ ಹರಕೆ ತೀರಿಸಿದರು.
ಕಂವಿನರ್ ಎಂ.ರಾಮು, *ಅರ್ಚಕ ಕೋದಂಡರಾಮಚಾರ್, ಧರ್ಮದರ್ಶಿ ಸರೋಜ ಮುನಿಸ್ವಾಮಿ, ವೈ.ಎಂ.ಬೈರೇಗೌಡ, ಎನ್.ಶಿವಕುವಾರ್, ವೈ.ಟಿ.ನಾರಾಯಣಸ್ವಾಮಿ, ಕೆ.ಸಿ.ಸೂರಪ್ಪ, ರಾಮಯ್ಯ, ಕೃಷ್ಣಪ್ಪ, ವೈ.ಪಿ.ನಟರಾಜ್, ಎಸ್.ಮುನಿರಾಜು, ದಾಸಯ್ಯ ಇದ್ದರು.