ಬುದ್ದಿವಾದ ಹೇಳಿದಕ್ಕೆ ಮನೆ ಬಿಟ್ಟು ಹೋದ ಬಾಲಕ 
ರಾಜ್ಯ

ಬುದ್ದಿವಾದ ಹೇಳಿದಕ್ಕೆ ಮನೆ ಬಿಟ್ಟು ಹೋದ ಬಾಲಕ

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಬುದ್ದವಾದ ಹೇಳಿದಕ್ಕೆ ಮನೆ ಬಿಟ್ಟು ಹೋದ ಬಾಲಕ
  • ಹುಕ್ಕೇರಿ ತಾಲೂಕಿನ ಆನಂದಪುರದಲ್ಲಿ ಘಟನೆ
  • ಹೋಮ್ ವರ್ಕ್ ಮಾಡು ಎಂದಿದಕ್ಕೆ ಮನೆ ಬಿಟ್ಟ ಮಗ
ಬುದ್ದಿಮಾತಿಗೆ ಮನೆ ಬಿಟ್ಟು ಹೋದ ಬಾಲಕ
ಚಿಕ್ಕೋಡಿ: ಹೋಂವರ್ಕ್ ಮಾಡಿಕೋ ಎಂದು ತಾಯಿ ಮಗನಿಗೆ ಬುದ್ದಿವಾದ ಹೇಳಿದಕ್ಕೆ ಮನನೊಂದು ಬಾಲಕನ ಮನೆ ಬಿಟ್ಟು ಹೋದ ಘಟನೆ ಹುಕ್ಕೇರಿ ತಾಲೂಕಿನ ಆನಂದಪುರ ಗ್ರಾಮದಲ್ಲಿ ಜ.11ರಂದು ನಡೆದಿದೆ. ಆನಂದಪುರದ ನಿವಾಸಿ ಶ್ರೇಯಸ್ ಆನಂದ ಕಲ್ಲೋಳಿಮಠ (13) ಮನೆ ಬಿಟ್ಟು ಹೋಗಿರುವ ಬಾಲಕ. ಈ ಕುರಿತು ಬಾಲಕನ ತಾಯಿ ಅಶ್ವಿನಿ ಯಮಕನಮರಡಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಗನ ಅಪಹರಣ ಶಂಕೆಯೂ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.