Boy who went fishing dies
ಶಿಡ್ಲಘಟ್ಟ: ತಾಲೂಕಿನ ಬಶೆಟ್ಟಹಳ್ಳಿ ಹೋಬಳಿಯ ವಲಸೇನಹಳ್ಳಿಯ ರಾಜನಕೆರೆಯಲ್ಲಿ ಶನಿವಾರ ಮೀನು ಹಿಡಿಯಲು ಹೋಗಿ ಬಾಲಕ ಮೃತಪಟ್ಟಿದ್ದಾನೆ.
ಚೇಳೂರು ತಾಲೂಕಿನ ಗೆರಿಗಿರೆಡ್ಡಿಪಾಳ್ಯದ ರಾಮು ಕುಟುಂಬಸ್ಥರು ದಿಬ್ಬೂರಹಳ್ಳಿಯ ನೆಂಟರ ಮನೆಗೆ ಬಂದಾಗ, ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಗಂಗಯ್ಯ (13) ನೀರಿಗೆ ಬಿದ್ದಿದ್ದು, ಹೂಳಿನಲ್ಲಿ ಸಿಲುಕಿ ಮೇಲೆ ಬರಲಾಗದೇ ಮುಳುಗಿದ್ದಾನೆ.
ಪಾಲಕರು ಬಾಲಕನನ್ನು ಹುಡುಕಿದರೂ ಸಿಗದ ಕಾರಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ಬಾಲಕನನ್ನು ಮೇಲೆತ್ತಿದ್ದಾರೆ. ಆದರೆ ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿದ್ದ ಎನ್ನಲಾಗಿದೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.