ಆನೇಕಲ್​ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕರವೇ ಹೊತ್ತಿಗೆಯನ್ನು ರಾಜ್ಯ ಉಪಾಧ್ಯಕ್ಷ ಲೊಕೇಶ್​ ಗೌಡ ಬಿಡುಗಡೆ ಮಾಡಿದರು. ಕರವೇ ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ್​, ಮುಖಂಡರಾದ ಮಹೇಶ್​, ಸುನೀಲ್​, ಕಾವೇರಣ್ಣ, ವಿಶ್ವನಾಥ್​, ಶೇಖರ್​, ಮುಸ್ತಾಕ್​, ಬಾಲರಾಜ್​, ಸನತ್​ ಇತರರು ಇದ್ದರು. 
ರಾಜ್ಯ

29ಕ್ಕೆ ಗಡಿನಾಡು ಕನ್ನಡಿಗರ ಉತ್ಸವ / ANEKAL

ಆನೇಕಲ್​ :

ಪಟ್ಟಣದ ಎಎಸ್​ಬಿ ಆಟದ ಮೈದಾನದಲ್ಲಿ ಆ.29ರ ಸಂಜೆ 6 ಗಂಟೆಗೆ ಎಚ್​.ಶಿವರಾಮೇಗೌಡ ಅವರ ಕರ್ನಾಟಕ ರಕ್ಷಣಾ ವೇದಿಕೆಯಿಂದ "ರಾಜ್ಯ ಗಡಿನಾಡು ಕನ್ನಡಿಗರ ಉತ್ಸವ' ಹಮ್ಮಿಕೊಳ್ಳಲಾಗಿದೆ ಎಂದು ಕರವೇ ರಾಜ್ಯ ಉಪಾಧ್ಯಕ್ಷ ಲೋಕೇಶ್​ ಗೌಡ ತಿಳಿಸಿದರು.

ಗಡಿನಾಡು ಕನ್ನಡಿಗರ ಸ್ವಾಭಿಮಾನದ ಸಂಕೇತ.

ಶಿವರಾಮೇಗೌಡ ಅವರ ಅಧ್ಯಕ್ಷತೆಯಲ್ಲಿ ಶಾಸಕ ಬಿ.ಶಿವಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪುರಸಭೆ ಮಾಜಿ ಅಧ್ಯಕ್ಷ ಪದ್ಮನಾಭ ಚಾಲನೆ ನೀಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಸಂಜೆ 5.30ಕ್ಕೆ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ನಂತರ ತಿಲಕ್​ ವೃತ್ತದಿಂದ ಎಎಸ್​ಬಿ ಮೈದಾನದವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. ಮಹಿಳೆಯರಿಂದ ಪೂರ್ಣಕುಂಭ ಕಳಸ, 10ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು, ಅಲಂಕೃತ ಎತ್ತಿನ ಗಾಡಿಯಲ್ಲಿ ಕನ್ನಡ ಡಿಂಡಿಮದೊಂದಿಗೆ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ಸಾಗಲಿದೆ ಎಂದರು.

ಸಂಜೆ 6 ಗಂಟೆಯಿಂದ ಖ್ಯಾತ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇಂದ್ರ ಮಾಜಿ ಸಚಿವ ಡಾ.ಎ.ನಾರಾಯಣಸ್ವಾಮಿ, ಬಿಜೆಪಿ ಮುಖಂಡರಾದ ಟಿ.ವಿ.ಬಾಬು, ಹುಲ್ಲಹಳ್ಳಿ ಶ್ರೀನಿವಾಸ್​, ಎಸ್​ಸಿ/ಎಸ್​ಟಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಮದ್ದೂರಪ್ಪ, ಬೊಮ್ಮಸಂದ್ರ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎ.ಪ್ರಸಾದ್​, ವಿವಿಧ ಸಂಘಟನೆಗಳ ಮುಖಂಡರು, ಸ್ಥಳಿಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು. ಆನೇಕಲ್​ಗೆ ತಾಲೂಕಿಗೆ ಕೊಡುಗೆ ನೀಡಿದ ಹಲವು ಮಹನೀಯರನ್ನು ಹಾಗೂ ಶಾಲಾ ಮಕ್ಕಳನ್ನು ಸನ್ಮಾನಿಸಲಾಗುವುದು ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕ್ರಮದ ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.