ನಿಡಗುಂದಾ ಕಂಚಾಳಕುಂಠಿ ನಂದೀಶ್ವರ ಮಠದಲ್ಲಿ ಗುರುಪೂರ್ಣಿಮೆ ನಿಮಿತ್ತ ಬುಧವಾರ ಶ್ರೀ ಕರುಣೇಶ್ವರ ಶಿವಾಚಾರ್ಯರಿಗೆ ಪುಸ್ತಕದ ತುಲಾಭಾರ ಸೇವೆ ಸಲ್ಲಿಸಲಾಯಿತು. ಶ್ರೀದೇವಿ, ಶಿವಕುಮಾರ, ಶರಣು ಶಂಕರ ಮೆಡಿಕಲ್, ಮರೆಪ್ಪ ಗೌತಮ್, ಬಸವರಾಜ ಕೊಂಡಪಳ್ಳಿ, ಸೂರ್ಯಪ್ರಕಾಶ, ಸಂಗಯ್ಯ ಸ್ವಾಮಿ ಅಣವಾರ ಇತರರಿದ್ದರು.
- ನಿಡಗುಂದಾ ಕಂಚಾಳಕುಂಠಿ ನಂದೀಶ್ವರ ಮಠದ ಶ್ರೀ ಕರುಣೇಶ್ವರ ಶಿವಾಚಾರ್ಯ ಅಭಿಮತ
ಚಿಂಚೋಳಿ: ಗುರು ಎಂದರೆ ಅಜ್ಞಾನವೆಂಬ ಕತ್ತಲೆ ಕಳೆದು ಜ್ಞಾನದ ಬೆಳಕು ನೀಡುವ ದಿವ್ಯ ಶಕ್ತಿ. ಪುಸ್ತಕಗಳು ಮಾನವನ ನಿಜವಾದ ಬಂಧು ಮತ್ತು ಜ್ಞಾನದ ಗಣಿಗಳು. ಪುಸ್ತಕ ತುಲಾಭಾರ ಸಮಾಜಕ್ಕೆ ಜ್ಞಾನಾರ್ಜನೆ ಸಂದೇಶ ನೀಡಲಿ ಎಂದು ಶ್ರೀ ಕರುಣೇಶ್ವರ ಶಿವಾಚಾರ್ಯರು ಆಶಿಸಿದರು.
ನಿಡಗುಂದಾದ ಕಂಚಾಳಕುಂಠಿ ನಂದೀಶ್ವರ ಮಠದಲ್ಲಿ ಗುರುಪೂರ್ಣಿಮೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ಪುಸ್ತಕದ ತುಲಾಭಾರ ಸೇವೆ ಹಾಗೂ ಪಾದಪೂಜೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ತಂದೆ&ತಾಯಿಯನ್ನು ಪೂಜಿಸಬೇಕು. ಶರಣ ಪರಂಪರೆ ಉಳಿಸಿ ಬೆಳೆಸುವದರ ಜತೆ ಶಿಕ್ಷಕರನ್ನು ಆರಾಧಿಸಬೇಕು. ದುಶ್ಚಗಳಿಂದ ದೂರ ಉಳಿದು ಗುರುವಿನ ಸನ್ಮಾರ್ಗದಲ್ಲಿ ನಡೆದು ಬದುಕು ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ಪ್ರಮುಖರಾದ ಶರಣು ಶಂಕರ ಮೆಡಿಕಲ್, ಮರೆಪ್ಪ ಗೌತಮ್, ಬಸವರಾಜ ಕೊಂಡಪಳ್ಳಿ, ಸೂರ್ಯಪ್ರಕಾಶ, ಸಂಗಯ್ಯ ಸ್ವಾಮಿ ಅಣವಾರ, ಶಂಕರ ಅಣವಾರ, ಶಾಮರಾವ, ನಾಗಪ್ಪ ಮಾಸ್ಟರ್, ಅಮೃತರಾವ, ಶಿವರಾಜ, ಲಾಲಪ್ಪ, ಚಂದ್ರಕಾಂತ, ರಾಜು, ವಿರೂಪಾಕ್ಷ, ವಿಷ್ಣುವರ್ಧನ, ಗುಂಡೇರಾವ ಮುಡಬಿ, ಸುರೇಶ ಬಟಗೇರ, ಅವಿನಾಶ ಗೋಸೂಲ್ ಇತರರಿದ್ದರು.
"
ಜ್ಞಾನದ ಮಹತ್ವ ಸಾರಲು ಶ್ರೀಗಳಿಗೆ ವಿವಿಧ ಧಾರ್ಮಿಕ, ಸಾಹಿತ್ಯಿಕ ಹಾಗೂ ವೈಚಾರಿಕ ಪುಸ್ತಕಗಳಿಂದ ತುಲಾಭಾರ ಸೇವೆ ಸಲ್ಲಿಸಲಾಗಿದೆ. ತುಲಾಭಾರಕ್ಕೆ ಬಳಸಿದ ಉನ್ನತ ವಿಚಾರಗಳ ಪುಸ್ತಕಗಳನ್ನು ಮಠದ ಗ್ರಂಥಾಲಯ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಅಧ್ಯಯನಕ್ಕೆ ವಿನಿಯೋಗಿಸಲು ನಿರ್ಧರಿಸಲಾಗಿದೆ.
— > ಶ್ರೀದೇವಿ&ಶಿವಕುಮಾರ ದಂಪತಿ