ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ
- ಪ್ರಕಟಣೆಗಳ ಮೇಲೆ ಶೇ. 50 ರಿಯಾಯಿತಿ
ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಜನವರಿ ತಿಂಗಳಾದ್ಯಂತ ತನ್ನ ಪ್ರಕಟಣೆಗಳ ಮೇಲೆ ಶೇ. 50 ರಿಯಾಯಿತಿ ಘೋಷಿಸಿದೆ.
ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಂಪುಟ ಮಾಲೆಯ 49 ಸಂಪುಟಗಳು, ಕನಕದಾಸ (ನಾಟಕ), ಕನಕದಾಸರ ಕೃತಿಗಳ ಭಾಷೆ ಮತ್ತು ಶೈಲಿ, ಕನ್ನಡ ಸಂಸ್ಕೃತಿ ಅಧ್ಯಯನದ ಆಕರವಾಗಿ ಕನಕದಾಸರ ಕೃತಿಗಳ ಅಧ್ಯಯನ, ಕನಕದಾಸರ ಕೃತಿಗಳ ಮಧ್ಯಕಾಲೀನ ಚರಿತ್ರೆಯ ಪುನಾರಚನೆ, ಗೋಪಾಳ ಗ್ಯಾನ, ಕನಕದಾಸರ ಕುರಿತ ನಾಟಕಗಳಲ್ಲಿ ಸಾಂಸ್ಕೃತಿಕ ಚಲನಶೀಲತೆ, ಇಪ್ಪತ್ತನೇ ಶತಮಾನ ಕಂಡ ಕನಕದಾಸರು, ಕನ್ನಡದ ಅನುಭಾವಿಕ ನೆಲೆ ಮತ್ತು ಕನಕದಾಸರು ಹಾಗೂ ಸಂತಕವಿ ಕನಕದಾಸರ ಜೀವನ ಚರಿತ್ರೆಯ ಬಗೆಗೆ ಹಿಂದಿ, ತಮಿಳು, ತೆಲಗು, ಬಂಗಾಳಿ, ಮಲೆಯಾಳ, ಮರಾಠಿ, ಅಸ್ಸಾಂ, ಪಂಜಾಬ ಭಾಷೆಗಳಿಗೆ ಅನುವಾದಗೊಂಡ ಪುಸ್ತಕಗಳು ಮಾರಾಟದಲ್ಲಿ ಇರಲಿವೆ.
ಆಸಕ್ತರು ಕನ್ನಡ ಭವನದ ಆವರಣದಲ್ಲಿರುವ ಸಿರಿಗನ್ನಡ ಪುಸ್ತಕ ಮಳಿಗೆಗೆ ಅಥವಾ ಕಲಾಗ್ರಾಮದಲ್ಲಿರುವ ಅಧ್ಯಯನ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ ಇಲ್ಲವೆ ಅಂಚೆ ಹಾಗೂ ಆನ್‌ಲೈನ್ ಮೂಲಕವೂ ಪುಸ್ತಕಗಳನ್ನು ಖರೀದಿಸಬಹುದು ಎಂದು ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ತಿಳಿಸಿದ್ದಾರೆ.