ವಿಜಯಪುರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ಪೋಸ್ಟರ್‌ರನ್ನು ಗಣ್ಯರು ಬಿಡುಗೊಳಿಸಿದರು. ಬಸವರಾಜ ಸೂಳಿಭಾವಿ, ನಾಗರಾಜ ಲಂಬು, ಅನಿಲ ಹೊಸಮನಿ ಮತ್ತಿತರರಿದ್ದಾರೆ. 
ರಾಜ್ಯ

ಪುಸ್ತಕ ಮೇಳದ ಪೋಸ್ಟರ್ ಬಿಡುಗಡೆ

ಮಾರುತಿ ತಳ್ಳಳ್ಳಿ

ಪ್ರಮುಖ ಮುಖ್ಯಾಂಶಗಳು

  • ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಆಯೋಜನೆ
  • ಪೂರ್ವಭಾವಿ ಸಭೆ
ವಿಜಯಪುರ: ಮೇ ಸಾಹಿತ್ಯ ಮೇಳ ವಿಜಯಪುರ ಬಳಗ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ಪೋಸ್ಟರ್‌ರನ್ನು ಚಿಂತಕ ಬಸವರಾಜ ಸೂಳಿಭಾವಿ ಭಾನುವಾರ ಬಿಡುಗಡೆಗೊಳಿಸಿದರು.
ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಪುಸ್ತಕ ಮೇಳದ ಉಪಸಮಿತಿಯ ಪೂರ್ವಭಾವಿ ಸಭೆಯಲ್ಲಿ ಪುಸ್ತಕ ಮೇಳದ ಪೋಸ್ಟರ್ ಬಿಡುಗೊಳಿಸಲಾಯಿತು.
ಚಿಂತಕ ಬಸವರಾಜ ಸೂಳಿಭಾವಿ ಮಾತನಾಡಿ, ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ಉಪಸಮಿತಿ ಸದಸ್ಯರು ಪುಸ್ತಕ ಮೇಳವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು
ಎಂದು ಸಲಹೆ ನೀಡಿದರು.
ರಾಜ್ಯ ಎಸ್ಸಿ/ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿಯ ಬಿ.ಎಚ್. ನಾಡಗಿರಿ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಚನ್ನು ಕಟ್ಟಿಮನಿ, ಮಾನವ ಬಂಧುತ್ವ ವೇದಿಕೆಯ ಪ್ರಭುಗೌಡ ಪಾಟೀಲ, ಬೌದ್ಧವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ, ಉಪಾಧ್ಯಕ್ಷ ಶಶಿಕಾಂತ ಹೊನವಾಡಕರ, ಪ್ರಧಾನ ಕಾರ್ಯದರ್ಶಿ ನಾಗರಾಜ ಲಂಬು, ನಿರ್ದೇಶಕ ರಾಜೇಶ ತೊರವಿ, ಸಂಘಟಕರಾದ ಅನೀಲ ಹೊಸಮನಿ, ಯಮನಪ್ಪ ಗುಣಕಿ, ಕೆ.ಎಂ. ಕೂಡಲಗಿ, ಮಿಲನಕುಮಾರ ನಾಮದಾರ, ಅಪ್ಪಾಸಾಹೇಬ ಯರನಾಳ, ಸುಖದೇವ ಕಟ್ಟಿಮನೆ, ಸುಭಾಸ ಹೊನಕಂಠಿ, ದಾನೇಶ ಅವಟಿ, ಭೀಮರಾವ ತಳಕೇರಿ, ಸಂತೋಷ ಶಹಾಪುರ, ಮಹಾಂತೇಶ ಕಟ್ಟಿಮನಿ, ಸಂಘರ್ಷ ಹೊಸಮನಿ, ಬಿ.ಆರ್. ಬನಸೋಡೆ ಮತ್ತಿತರರಿದ್ದರು.