ಅಸ್ಥಿಮಜ್ಜೆ ಕಸಿ ಶಸಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಬಾಲಕನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಸಚಿವ ಶರಣಪ್ರಕಾಶ್ ಪಾಟೀಲ್, ಅಸ್ಥಿಮಜ್ಜೆ ಕಸಿ ಘಟಕದ ಸಹ ಪ್ರಾಧ್ಯಾಪಕಿ ಡಾ. ವಸುಂಧರಾ ಕೈಲಾಸನಾಥ್.  
ರಾಜ್ಯ

ಕಿದ್ವಾಯಿಯಲ್ಲಿ ಬಾಲಕನಿಗೆ ಅಸ್ಥಿಮಜ್ಜೆ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

ಪ್ರಮುಖ ಮುಖ್ಯಾಂಶಗಳು

  • ವೀಲ್ಮ್ಸ್ ಟ್ಯೂಮರ್ (ನೆಫ್ರೊಬ್ಲಾಸ್ಟೊಮಾ) ಅಪರೂಪದ ಕಾಯಿಲೆ
  • 9 ವರ್ಷದ ಬಾಲಕನಿಗೆ ಕಿದ್ವಾಯಿಯಲ್ಲಿ ಯಶಸ್ವಿ ಕಸಿ ಚಿಕಿತ್ಸೆ
  • ವೈದ್ಯರ ಕಾರ್ಯಕ್ಕೆ ಸಚಿವ ಶರಣಪ್ರಕಾಶ್ ಪಾಟೀಲ್ ಮೆಚ್ಚುಗೆ
ಬೆಂಗಳೂರು: ವೀಲ್ಮ್ಸ್ ಟ್ಯೂಮರ್ (ನೆಫ್ರೊಬ್ಲಾಸ್ಟೊಮಾ) ಎಂಬ ಅಪರೂಪದ ಮೂತ್ರಪಿಂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 9 ವರ್ಷದ ಬಾಲಕನಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅಸ್ಥಿಮಜ್ಜೆ ಕಸಿ ಶಸಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದ್ದು, ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ. ಈ ಹಿನ್ನೆಲೆ ವೈದ್ಯರ ತಂಡವನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅಭಿನಂದಿಸಿದ್ದಾರೆ.
ಬಾಲಕನಲ್ಲಿ ಕಳೆದ 2022ರ ಡಿಸೆಂಬರ್‌ನಲ್ಲಿ ಈ ಕಾಯಿಲೆ ಪತ್ತೆಯಾಗಿತ್ತು. ಕಿಮೋಥೆರಪಿ ನೀಡಿ ಎಡ ಮೂತ್ರಪಿಂಡಕ್ಕೆ ಶಸಚಿಕಿತ್ಸೆ ನಡೆಸಲಾಗಿತ್ತು. ನಂತರ ರೇಡಿಯೇಷನ್ ಚಿಕಿತ್ಸೆ ಒದಗಿಸಲಾಗಿತ್ತು. ಆದರೆ 2025ರ ಏಪ್ರಿಲ್‌ನಲ್ಲಿ ರೋಗ ಮರುಕಳಿಸಿತು. ಆ ಸಂದರ್ಭದಲ್ಲಿ ಕೊನೆಯದಾಗಿ ನಮ್ಮ ಮುಂದಿದ್ದ ಒಂದೇ ಒಂದು ಆಯ್ಕೆಯೆಂದರೆ ಅದು ಕಿಮೋಥೆರಪಿ ಮತ್ತು ಅಸ್ಥಿಮಜ್ಜೆ ಕಸಿ ಶಸಚಿಕಿತ್ಸೆ ಎಂದು ವೈದ್ಯರು ತಿಳಿಸಿದ್ದಾರೆ.
ಸಂಸ್ಥೆಯ ಅಸ್ಥಿಮಜ್ಜೆ ಕಸಿ ಘಟಕದ ಸಹ ಪ್ರಾಧ್ಯಾಪಕಿ ಡಾ. ವಸುಂಧರಾ ಕೈಲಾಸನಾಥ್ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಕಿಮೋಥೆರಪಿ ಚಿಕಿತ್ಸೆ, ಹೆಚ್ಚಿನ ಪ್ರಮಾಣದ ಬಿಎಂಟಿ ಔಷಧಗಳ ಅಗತ್ಯತೆ ಮತ್ತು ಕಾಯಿಲೆಯ ತೀವ್ರತೆಯು ಬಾಲಕನ ಜೀವಕ್ಕೆ ಅಪಾಯಕಾರಿಯಾಗಿತ್ತು. ಈ ಪ್ರಕರಣದ ನಿರ್ವಹಣೆ ಸವಾಲಿನಿಂದ ಕೂಡಿತ್ತು ಎಂದು ತಿಳಿಸಿದ್ದಾರೆ.
ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ. ಟಿ. ನವೀನ್ ಮಾತನಾಡಿ, ಸಂಸ್ಥೆಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ 130 ಅಸ್ಥಿಮಜ್ಜೆ ಕಸಿ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಾಲಕನಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿರುವ ವೈದ್ಯರ ತಂಡವನ್ನು