Body of elderly woman found in large lake in Kannampally
ಚಿಂತಾಮಣಿ: ಕನ್ನಂಪಲ್ಲಿಯ ನಿವಾಸಿ ಹಾದಿಗೆರೆ ಮುನಿಲಕ್ಷ$್ಮಮ್ಮ ಎಂಬುವವರ ಶವ ಕಲ್ಲಹಳ್ಳಿ ಗ್ರಾಮದ ದೊಡ್ಡಕೆರೆಯಲ್ಲಿ ಪತ್ತೆಯಾಗಿದೆ.
ಕನ್ನಂಪಲ್ಲಿಯ ನಿವಾಸಿ ಹಾದಿಗೆರೆ ಆಂಜಪ್ಪ ಪತ್ನಿ ಮುನಿಲಕ್ಷ$್ಮಮ್ಮ ಅವರು 5 ದಿನಗಳಿಂದ ನಾಪತ್ತೆಯಾಗಿದ್ದರು. ಕುಟುಂಬದವರು ಹುಡುಕಾಟ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ. ಸೋಮವಾರ ಬೆಳಗ್ಗೆ ದೊಡ್ಡಕೆರೆಯಲ್ಲಿ ಮಹಿಳೆಯ ಶವ ತೇಲುತ್ತಿರುವುದನ್ನು ಗಮನಿಸಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಮುರಳೀಧರ್ ಮತ್ತು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರ ಸಮ್ಮುಖದಲ್ಲಿ ಶವ ಹೊರೆತೆಗದಾಗ ಮೃತರ ಗುರುತು ಪತ್ತೆಯಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐದು ದಿನಗಳಿಂದ ಮುನಿಲಕ್ಷ$್ಮಮ್ಮ ನಾಪತ್ತೆಯಾಗಿದ್ದರೂ ಕುಟುಂಬದವರು ದೂರು ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ.