Body found in Vatadahosahalli lake
ಗೌರಿಬಿದನೂರು: ವಾಟದಹೊಸಹಳ್ಳಿ ಕೆರೆಯಲ್ಲಿ ಅದೇ ಗ್ರಾಮದ ರಾಮಚಂದ್ರಪ್ಪ (57) ಎಂಬುವವರ ಶವ ಪತ್ತೆಯಾಗಿದೆ.
ಇವರು ಮೂರು ದಿನಗಳ ಹಿಂದೆ ಕಾಣೆಯಾಗಿದ್ದರು. ಶುಕ್ರವಾರ ಬೆಳಗ್ಗೆ ಕೆರೆಯಲ್ಲಿ ಅವರ ಶವ ಕಂಡುಬಂದಿದೆ. ಗ್ರಾಮಾಂತರ ಠಾಣೆಯ ಉಪನಿರೀಕ ಹರೀಶ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಹೊರತೆಗೆದು, ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.