Bangalore Metro station closure August 15 
ರಾಜ್ಯ

ಬೆಂಗಳೂರಿನ ಪ್ರಯಾಣಿಕರೇ ಗಮನಿಸಿ: ನಾಳೆ ಫ್ರೀಡಂ ಹಬ್ಬ ಹಿನ್ನೆಲೆ, ವಿಧಾನಸೌಧ ನಿಲ್ದಾಣ ತಾತ್ಕಾಲಿಕ ಬಂದ್!..Bangalore Metro

ಪ್ರಮುಖ ಮುಖ್ಯಾಂಶಗಳು

  • ವಿಧಾನಸೌಧದಲ್ಲಿ ನಡೆಯುತ್ತಿರುವ 'ಫ್ರೀಡಂ ಹಬ್ಬ' ಹಿನ್ನೆಲೆ ವಿಧಾನಸೌಧ ಮೆಟ್ರೋ ನಿಲ್ದಾಣ ಬಂದ್
  • ಆಗಸ್ಟ್ 15 ಬೆಳಗ್ಗೆ 10:00 ಗಂಟೆಯಿಂದ ರಾತ್ರಿ 9:30 ರವರೆಗೆ ವಿಧಾನಸೌಧ ಮೆಟ್ರೋ ನಿಲ್ದಾಣ ಬಂದ್
  • ಕಬ್ಬನ್ ಪಾರ್ಕ್ ಅಥವಾ ಸರ್ ಎಂ. ವಿಶ್ವೇಶ್ವರಯ್ಯ (ಸೆಂಟ್ರಲ್ ಕಾಲೇಜು) ಮೆಟ್ರೋ ನಿಲ್ದಾಣಗಳನ್ನು ಬಳಸಬಹುದು.
Bangalore Metro station closure August 15: 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿ  ಫ್ರೀಡಂ ಹಬ್ಬ-2026ವನ್ನು ಮೊದಲ ಬಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಶನಿವಾರ ಕಾರ್ಯಕ್ರಮಕ್ಕೆ  ಸಮಸ್ಯೆ ಉಂಟಾಗದಂತೆ, ಜನದಟ್ಟೆಯನ್ನು ತಡೆಯುವ ಸಲುವಾಗಿ ಮೆಟ್ರೋ ಹಾಗೂ ಇತರ ವಾಹನ ಸಂಚಾರದಲ್ಲಿ ಬದಲಾವಣೆ ತಂದಿದ್ದು, ಆ ಬಗ್ಗೆ ಬೆಂಗಳೂರು ಟ್ರಾಫಿಕ್​ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. 

ವಿಧಾನಸೌಧ ನಿಲ್ದಾಣ ಬಂದ್

ಸ್ವಾತಂತ್ರ್ಯ ದಿನಾಚರಣೆಯ ಭಾಗಾವಾಗಿ ವಿಧಾನಸೌಧದ ಆವರಣದಲ್ಲಿ ಫ್ರೀಡಂ ಹಬ್ಬ ಹಮ್ಮಿಕೊಂಡಿರುವ ಹಿನ್ನೆಲೆ, 

 ಶನಿವಾರ (ಆಗಸ್ಟ್ 15) ರಂದು ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರೋ ನಿಲ್ದಾಣವನ್ನು (ವಿಧಾನಸೌಧ) ತಾತ್ಕಾಲಿಕವಾಗಿ ಮುಚ್ಚುವುದಾಗಿ ಘೋಷಿಸಿದೆ.

ನಿಲುಗಡೆ ಇರೊಲ್ಲ

BMRCL ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯ ಪ್ರಕಾರ, ಸಾರ್ವಜನಿಕ ಸುರಕ್ಷತೆ ಮತ್ತು ಜನದಟ್ಟಣೆ ನಿಯಂತ್ರಣ ಕ್ರಮವಾಗಿ ಈ ನಿಲ್ದಾಣವು ಬೆಳಗ್ಗೆ 10:00 ಗಂಟೆಯಿಂದ ರಾತ್ರಿ 9:30 ರವರೆಗೆ ಪ್ರವೇಶ ಹಾಗೂ ನಿರ್ಗಮನ ಎರಡಕ್ಕೂ ಸಂಪೂರ್ಣವಾಗಿ ಬಂದ್ ಇರಲಿದೆ. ಆದಾಗ್ಯೂ, ಮೆಟ್ರೋ ರೈಲುಗಳು ಎಂದಿನಂತೆ ಈ ಮಾರ್ಗದಲ್ಲಿ ಸಂಚರಿಸಲಿವೆ ಆದರೆ ಈ ನಿಲ್ದಾಣದಲ್ಲಿ ನಿಲ್ಲುವುದಿಲ್ಲ.

ಯಾವ ಸಮಯದಲ್ಲಿ ಬಂದ್

ಕಾರ್ಯಕ್ರಮ ಮುಗಿದ ನಂತರ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ ರಾತ್ರಿ 9:30 ರ ನಂತರ ನಿಲ್ದಾಣದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ನಿಗಮ ತಿಳಿಸಿದೆ. ಆದರೆ, ರಾತ್ರಿ 10:00 ಗಂಟೆಯವರೆಗೆ ನಿಲ್ದಾಣದಿಂದ ಹೊರಹೋಗುವುದನ್ನು ನಿರ್ಬಂಧಿಸಲಾಗಿದೆ. ಆಚರಣೆಯ ನಂತರ ಹೆಚ್ಚಾಗುವ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು, ಅಗತ್ಯವಿದ್ದರೆ ಹೆಚ್ಚಿನ ಮೆಟ್ರೋ ಸೇವೆಗಳನ್ನು ನಡೆಸಲಾಗುವುದು ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.

ಈ ನಿಲ್ದಾಣ ಬಳಕೆ ಮಾಡಿಕೊಳ್ಳಿ

ಈ ನಿಲ್ದಾಣವು ಮುಚ್ಚಿರುವ ಸಮಯದಲ್ಲಿ ಪ್ರಯಾಣಿಸುವ ಸಾರ್ವಜನಿಕರು ಹತ್ತಿರದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಅಥವಾ ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣ ಗಳನ್ನು ಪರ್ಯಾಯ ನಿಲ್ದಾಣಗಳಾಗಿ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ, (ಏಜೆನ್ಸೀಸ್).