ಬೆಂಗಳೂರು:ಆರೋಗ್ಯ ತಂತ್ರಜ್ಞಾನಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಬಿಎಂಇಸಿ ಇಮೇಜಿಂಗ್ ಪ್ರೈವೇಟ್ಲಿಮಿಟೆಡ್ ಸಂಸ್ಥೆಯು ಹಿಲ್ಟನ್ಬೆಂಗಳೂರು ಎಂಬಸಿ ಮಾನ್ಯತಾಬಿಸಿನೆಸ್ ಪಾರ್ಕ್‌ನಲ್ಲಿ ನಾಯಕತ್ವಸಮಾವೇಶ ಹಮ್ಮಿಕೊಂಡಿತ್ತು.
ಕಾರ್ಯಕ್ರಮದಮುಖ್ಯ ಅತಿಥಿಗಳಾಗಿ ಮದ್ರಾಸ್ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್,ಡಿಲಾಯಿಟ್ಇಂಡಿಯಾದ ಹಿರಿಯ ಸಲಹೆಗಾರ ಡಿ.ಪಿ.ನಾಗೇಂದ್ರ ಕುಮಾರಮತ್ತು ಎಸ್‌ಎಎಮ್‌ಇಇಆರ್ ಸಂಸ್ಥೆಯಮಹಾನಿರ್ದೇಶಕ ಡಾ.ಪಿ.ಹನುಮಂತ ರಾವ್ಪಾಲ್ಗೊಂಡಿದ್ದರು.
ಬಿಎಂಇಸಿಸಂಸ್ಥೆಯ ನೂತನ ಕೃತಕ ಬುದ್ಧಿಮತ್ತೆ(ಎಐ)ಆಧಾರಿತ ಆರೋಗ್ಯಸೇವಾ ಉತ್ಪನ್ನವನ್ನು ಬಿಡುಗಡೆಮಾಡಿ ಮಾತನಾಡಿದ ನ್ಯಾ.ಜಿ.ಆರ್.ಸ್ವಾಮಿನಾಥನ್,ದೇಶೀಯ ತಂತ್ರಜ್ಞಾನಅಭಿವೃದ್ಧಿಯ ಮೂಲಕ ಆರೋಗ್ಯಸೇವೆಯನ್ನು ಮತ್ತಷ್ಟು ಸುಲಭ,ಕೈಗೆಟಕುವ ಹಾಗೂಗುಣಮಟ್ಟಯುತವಾಗಿಸಲು ಬಿಎಂಇಸಿಇಮೇಜಿಂಗ್ ಕೈಗೊಂಡಿರುವ ಪ್ರಯತ್ನಗಳನ್ನುಶ್ಲಾಘಿಸಿದರು.ಭಾರತವನ್ನುವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿಸ್ವಾವಲಂಬಿ ರಾಷ್ಟ್ರವನ್ನಾಗಿಸುವಆತ್ಮನಿರ್ಭರ ಭಾರತ ಪರಿಕಲ್ಪನೆಗೆಸಂಸ್ಥೆಯ ಕೊಡುಗೆ ಮಹತ್ವದ್ದಾಗಿದೆಎಂದರು.
ಎಸ್‌ಎಎಮ್‌ಇಇಆರ್ಮಹಾನಿರ್ದೇಶಕ ಡಾ.ಪಿ.ಹನುಮಂತ ರಾವ್, ಬಿಎಂಇಸಿ ಇಮೇಜಿಂಗ್ಸಂಸ್ಥೆಯು ಕೈಗೆಟಕುವ,ಸುಲಭವಾಗಿಲಭ್ಯವಾಗುವ ಹಾಗೂ ದೇಶೀಯವಾಗಿಅಭಿವೃದ್ಧಿಪಡಿಸಲಾದ ವೈದ್ಯಕೀಯಚಿತ್ರಣ ಮತ್ತು ಆರೋಗ್ಯ ತಂತ್ರಜ್ಞಾನಪರಿಹಾರಗಳನ್ನು ಒದಗಿಸುವಲ್ಲಿತೊಡಗಿಸಿಕೊಂಡಿದೆ ಎಂದರು.
ಸಮಾವೇಶದಲ್ಲಿಆರೋಗ್ಯ ಕ್ಷೇತ್ರದಲ್ಲಿನ ಹೊಸತಂತ್ರಜ್ಞಾನಗಳ ಕುರಿತು ಚರ್ಚೆ,ಸಂವಾದ ಮತ್ತುಅನ್ವೇಷಣೆಯ ಚಿಂತನೆಗೆ ವೇದಿಕೆಯಾಯಿತು.ದೇಶದ ಆರೋಗ್ಯಸೇವಾ ವ್ಯವಸ್ಥೆಯನ್ನು ಆಧುನೀಕರಿಸುವದಿಸೆಯಲ್ಲಿ ಬಿಎಂಇಸಿ ಇಮೇಜಿಂಗ್ಸಂಸ್ಥೆ ಮತ್ತೊಂದು ಮಹತ್ವದಹೆಜ್ಜೆಯನ್ನು ಇರಿಸಿತು.