ಬೇಲೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರಜನಿಕಾಂತ್ ಮಾತನಾಡಿದರು 
ರಾಜ್ಯ

ಮನೆಗೆ ಭೇಟಿ ನೀಡುವಂತೆ ಬಿಎಲ್ಒಗಳಿಗೆ ಆದೇಶ

ಪ್ರಮುಖ ಮುಖ್ಯಾಂಶಗಳು

  • ಚುನಾವಣಾ ವಿಭಾಗದ ಇಆರ್‌ಒ ರಜನಿಕಾಂತ್
  • ತಾಲೂಕು ಕಚೇರಿ ಸಭಾಂಗಣ

ಬೇಲೂರು:

ತಾಲೂಕಿನಲ್ಲಿ ಮತದಾರರ ಪಟ್ಟಿಯಿಂದ ಯಾರೂ ವಂಚಿತರಾಗಬಾರದೆಂಬ ಕಾರಣಕ್ಕೆ ಪ್ರತಿ ಮನೆಗೆ ಭೇಟಿ ನೀಡುವಂತೆ ಬಿಎಲ್ಒಗಳಿಗೆ ಆದೇಶಿಸಲಾಗಿದೆ ಎಂದು ಚುನಾವಣಾ ವಿಭಾಗದ ಇಆರ್‌ಒ ರಜನಿಕಾಂತ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಬಿಎಲ್ಎ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 24,782 ಮತದಾರರಿದ್ದು ಇದರಲ್ಲಿ 18810 ಮತದಾರರು ಬಾಕಿ ಉಳಿದಿದ್ದು, ಶೇ.90.81 ರಷ್ಟು ಸಾಧನೆ ಮಾಡಲಾಗಿದೆ. ಮತ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆೆ ಆ.7ರ ಸಂಜೆ 5 ರವರೆಗೆ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದೆ. ಯಾರೂ ಸಹ ಮತದಾರರ ಪಟ್ಟಿಯಿಂದ ವಂಚಿತರಾಗಬಾರದೆಂದು ಜಿಲ್ಲಾಧಿಕಾರಿ ಆದೇಶಿಸಿದ್ದು, ಅದರಂತೆ ಪ್ರತಿ ಮನೆಗೆ ಮೂರು ಬಾರಿ ಭೇಟಿ ನೀಡಲು ಬಿಎಲ್‌ಒಗಳಿಗೆ ಸೂಚಿಸಲಾಗಿದೆ. 8402 ಮತದಾರರು ಸ್ಥಳ ಬದಲಾವಣೆ, ಮರಣ, ಎರಡು ಕಡೆ ಪಟ್ಟಿಯಲ್ಲಿರುವುದನ್ನು ಗುರುತಿಸಿ ತೆಗೆಯಲಾಗಿದೆ ಎಂದು ಮಾಹಿತಿ ನೀಡಿದರು.
ಮನೆ ಖಾಲಿಯಾಗಿರುವ ಕುರಿತು ಪಟ್ಟಿ ಮಾಡಲಾಗಿದೆ. ಅಲ್ಲದೆ ಆ.8ರಂದು ಕೊನೇ ದಿನಾಂಕವನ್ನು ಚುನಾವಣಾ ಆಯೋಗ ನೀಡಿದ್ದು, ಅಷ್ಟರಲ್ಲಿ ಶೇ.100ರಷ್ಟು ಮಾತದಾರರ ಪಟ್ಟಿ ಮಾಡಲು ಸೂಚಿಸಲಾಗಿದೆ. ಹೊಸ ಮತದಾರರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಗುರುತಿನ ಕಾರ್ಡ್ ಪಡೆಯಬಹುದು ಎಂದು ತಿಳಿಸಿದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಮತದಾರರ ಪಟ್ಟಿಯಿಂದ ಹೊರಗುಳಿದ ಮತದಾರರನ್ನು ಗುರುತಿಸಿ ಸೇರಿಸಲು ಬಿಎಲ್ಒಗಳ ಜತೆ ಸಭೆ ನಡೆಸಲಾಗುತ್ತಿದೆ. 1700 ಮತದಾರರಿಗಿಂತ ಹೆಚ್ಚಿದ್ದರೆ ಒಂದು ಉಪ ಪೊಲೀಸ್ ಠಾಣೆ ತೆರೆಯಲು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ಪಟ್ಟಿ ಸಿದ್ಧಪಡಿಸಿದ್ದು, ಸಭೆ ಕರೆದಾಗ ಎಲ್ಲ ರಾಜಕೀಯ ಮುಖಂಡರು ಭಾಗವಹಿಸಬೇಕು ಎಂದ ಅವರು, ಲೋಪವಿದ್ದಲ್ಲಿ ಚರ್ಚಿಸಲು ಅವಕಾಶವಿದೆ. ತಾಲೂಕಿನ ಬಿಕ್ಕೊಡು, ಅರೇಹಳ್ಳಿ, ಭಾಗದ ಕೆಲ ಮತ ಕೇಂದ್ರಗಳಲ್ಲಿ ಮತದಾರರು ಕಮ್ಮಿ ಇದ್ದು, ಕೆಲ ಬೂತ್‌ಗಳಲ್ಲಿ ಹೆಚ್ಚಿರುವ ಮತದಾರರನ್ನು ತೆಗೆದು ಕಡಿಮೆ ಇರುವ ಬೂತ್‌ಗಳಿಗೆ ಸೇರಿಸಲು ಪಟ್ಟಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ 270 ಬೂತ್‌ಗಳಿದ್ದು ಚುನಾವಣೆ ಸಂದರ್ಭ ಚುನಾವಣಾಧಿಕಾರಿಗಳು ಇನ್ನೂ 6 ಬೂತ್‌ಗಳನ್ನು ಸೇರಿಸಬಹುದಾಗಿದೆ ಎಂದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಗಂಗಾಧರ್ ಬಹುಜನ, ಬಿಜೆಪಿ ಮುಖಂಡ ರಂಗನಾಥ್, ಕಾಂಗ್ರೆಸ್ ಮುಖಂಡ ಸಚಿನ್, ಬಿಆರ್‌ಸಿ ಶಿವಮರಿಯಪ್ಪ ಇತರರಿದ್ದರು.

.