ದೇಹದಾನದ ಮಹತ್ವ ವಿವರಿಸಿದ ಡಾ.ರಾಮಣ್ಣನವರ
- ರಕ್ತದಾನದಿಂದ ಆರೋಗ್ಯ ಸುಧಾರಣೆ
- ರಕ್ತದಾನ, ದೇಹದಾನದ ಮಹತ್ವ ವಿವರಿಸಿ
- ಎನ್ ಸಿಸಿ ಶಿಬಿರದಲ್ಲಿ ಡಾ.ರಾಮಣ್ಣನವರ ಅಭಿಪ್ರಾಯ
ದೈಹಿಕ ಆರೋಗ್ಯಕ್ಕೆ ರಕ್ತದಾನ ಸಹಕಾರಿ
| ಡಾ.ಮಹಾಂತೇಶ ರಾಮಣ್ಣವರ | ಎನ್ ಸಿಸಿ ಶಿಬಿರ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಪ್ರತಿಕ್ಷಣವೂ ನಮಗೆ ಹೊಸ ಜೀವನವನ್ನು ನೀಡುವ ಅಂಗಾಂಗಗಳ ಸಂರಕ್ಷಣೆ ಮಾಡುವುದರಿಂದ ಬರುವ ಅನಾರೋಗ್ಯದ ಅಪಾಯಗಳನ್ನು ತಪ್ಪಿಸಲು ಸಾಧ್ಯ. ಅಂಗಗಳ ಆರೋಗ್ಯದ ಬಗ್ಗೆ ತಿಳಿದುಕೊಳ್ಬೇಕು ಎಂದು ಕೆಎಲ್‌ಇ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾಶಾಸ್ತ್ರದ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣನವರ ಅಭಿಪ್ರಾಯಪಟ್ಟರು.
ಸ್ಥಳೀಯ ಜಾಧವ ಬುಧವಾರ 26 ಕರ್ನಾಟಕ ಎನ್‌ಸಿಸಿ ಘಟಕವು ಆಯೋಜಿಸಿದ್ದ ವಾರ್ಷಿಕ ಎನ್‌ಸಿಸಿ ಶಿಬಿರದಲ್ಲಿ ಅವರು ಮಾತನಾಡಿದರು 550 ಎನ್‌ಸಿಸಿ ಕೆಡೆಟ್‌ಗಳಿಗೆ ಅಂಗಾಂಗ ದಾನ ಹಾಗೂ ದೇಹದಾನದ ಮಹತ್ವ ಕುರಿತು ಉಪನ್ಯಾಸ ಪ್ರಸ್ತುತಪಡಿಸಲಾಗಿದೆ.
ನಮ್ಮ ಹೃದಯ, ಪುಪ್ಪುಸ, ಯಕೃತ, ಮೂತ್ರಪಿಂಡ, ಸಣ್ಣ-ದೊಡ್ಡ ಕರುಳು, ಬೆನ್ನುಹುರಿ, ಮೆದುಳು, ಜಠರ ಇವೆಲ್ಲವೂ ಆರೋಗ್ಯವಾಗಬೇಕಾದರೆ, ಉತ್ತಮವಾದ ತೆಗೆದುಕೊಳ್ಳಬೇಕು. ಬಾಯಿ ರುಚಿಗಾಗಿ ಹೊರಗಿನ ಆಹಾರ ಸೇವನೆ ಅಪಾಯಕಾರಿ.ರಕ್ತದಾನ ಕುರಿತು ಸಾಕಷ್ಟು ತಪ್ಪು ಅನಿಸಿಕೆಗಳಿದ್ದರೆ ತಲೆಯಿಂದ ತೆಗೆದು, ನಮ್ಮ ದೈಹಿಕ ಆರೋಗ್ಯಕ್ಕೆ ರಕ್ತದಾನ ಮಾಡಬೇಕು ಎಂದು ಹೇಳಿದರು.
ಮರಣದ ನಂತರ ನಮ್ಮ ದೇಹವನ್ನು ಸುಡುವುದು ಅಥವಾ ಮಣ್ಣಲ್ಲಿ ಹೂತೋ ಹಾಕುತ್ತಾರೆ ಬದಲಿಗೆ ದೇಹದಾನ ಮಾಡುವುದರಿಂದ ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವುದು. ಅಷ್ಟೇ ಅಲ್ಲದೆ ನೇತ್ರದಾನ ಮಾಡುವುದರಿಂದ ಇಬ್ಬರಿಂದ ಮೂವರು ಅಂಧರ ಬದುಕಿಗೆ ಬೆಳಕಾಗಬಹುದು ಎಂದರು.
ಕಮಾಂಡಿಂಗ್ ಆಫೀಸರ್ ಕರ್ನಲ್ ಸುನೀಲ ದಾಗರ,ಸಿದ್ಧಾರ್ಥ ರೆಡು, ಸುಬೇದಾರ ಮೇಜರ್ ಕಲ್ಲಪ್ಪ ಪಾಟೀಲ, ಮೇಜರ್ ಡಾ.ಮಹೇಶ ಗುರನಗೌಡರ ಇತರರಿದ್ದರು.