ಹಾರಕೂಡದಲ್ಲಿ ಗುರುವಾರ ಆಯೋಜಿಸಿದ ರಕ್ತದಾನ ಶಿಬಿರವನ್ನು ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಉದ್ಘಾಟಿಸಿದರು. ಮಾಜಿ ಎಂಎಲ್ಸಿ ವಿಜಯಸಿಂಗ್​, ಸಿದ್ರಾಮಪ್ಪ ಗುದಗೆ, ಡಾ. ಶೃತಿ ಮಲ್ಲಣಗೌಡರು, ಪಿಎಸ್​ಐ ಸುವರ್ಣ ಮಲಶೆಟ್ಟಿ, ಪಿಡಿಒ ಯೋಗೇಶ ಹಿರೇಮಠ ಇತರರಿದ್ದರು.  
ರಾಜ್ಯ

ಅಮೂಲ್ಯ ಜೀವ ಉಳಿಸುವ ರಕ್ತದಾನ

ಪ್ರಮುಖ ಮುಖ್ಯಾಂಶಗಳು

  • ಹಾರಕೂಡ ಶ್ರೀ ಅಭಿಪ್ರಾಯ
  • ಬಸವಕಲ್ಯಾಣದಲ್ಲಿ ಶಿಬಿರ ಆಯೋಜನೆ
ಬಸವಕಲ್ಯಾಣ: ಆರೋಗ್ಯವಂತರು ವೈದ್ಯರ ಮಾರ್ಗದರ್ಶನದಲ್ಲಿ ರಕ್ತದಾನ ಮಾಡುವುದರಿಂದ ಸಂಕಷ್ಟದಲ್ಲಿರುವ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ. ಚನ್ನವಿರ ಶಿವಾಚಾರ್ಯರು ಸಲಹೆ ನೀಡಿದರು.
ಹಾರಕೂಡದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಮನುಷ್ಯ ಯೋಗ್ಯ ರೀತಿಯ ಧ್ಯಾನ ಮತ್ತು ತನ್ನ ಅರ್ಹತೆಗೆ ತಕ್ಕಂತೆ ಸ್ವತ್ಪಾತ್ರರಿಗೆ ಮಾಡುವ ದಾನದಿಂದ ಸಮಾಧಾನ ಲಭಿಸುತ್ತದೆ. ಯುವಕರು ಉತ್ತಮ ಜೀವನ ಶೈಲಿ ರೂಪಿಸಿಕೊಂಡು ರಕ್ತದ ಗುಣಮಟ್ಟ ಕಾಯ್ದುಕೊಳ್ಳಬೇಕು. ಇಂತಹ ಶಿಬಿರಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾಜದ ಸ್ವಾಸ್ಥ$್ಯಕಾಪಾಡುವಲ್ಲಿ ಮಹತ್ವದ ಪಾತ್ರ ನಿಭಾಯಿಸಬೇಕು ಎಂದು ಹೇಳಿದರು.
ಮಾಜಿ ಎಂಎಲ್ಸಿ ವಿಜಯಸಿಂಗ್​ ಮಾತನಾಡಿ, ಇನ್ನೊಬ್ಬರ ಒಳತಿಗಾಗಿ ಮಾಡುವ ರಕ್ತದಾನ ಸಮಾಜವನ್ನು ಗಟ್ಟಿಗೊಳಿಸುವ ಮತ್ತು ಸಾಮಾಜಿಕ ಹಿತಕಾರಿ ನಿಸ್ವಾರ್ಥ ಸೇವೆಯಾಗಿದೆ.ಇಂತಹ ಜನಪರ ಕಾರ್ಯಗಳು ಹಾರಕೂಡ ಪೂಜ್ಯರ ಆಶೀರ್ವಾದದಿಂದ ಸಾಗಿ ಬರುತ್ತಿರುವುದು ನಮ್ಮೆಲ್ಲರ ಸುದೈವ ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಶೃತಿ ಮಲ್ಲಣಗೌಡರು, ಪಿಎಸ್​ಐ ಸುವರ್ಣ ಮಲಶೆಟ್ಟಿ, ಪಿಡಿಒ ಯೋಗೇಶ ಹಿರೇಮಠ, ರಾಮಲಿಂಗ ರೆಡ್ಡಿ, ಶರಣು ಆಲಗೂಡ, ನಾಗೇಶ ಮಹಾಜನ, ಮಹಾದೇವ ಪೂಜಾರಿ, ಸಂಜುಕುಮಾರ ದೇಗಾಂವ, ರವಿ ರಾಯಜಿ, ಭೀಮರಾವ್​ ನಾಟೇಕರ್​, ಅನಿಲ ಹಾರಕೂಡ ಇತರರಿದ್ದರು.
ಚೆನ್ನಪ್ಪ ಹೊಳ್ಕರ್​ ಸ್ವಾಗತಿಸಿ, ನಿರೂಪಣೆ ಮಾಡಿದರು. ಸಿದ್ರಾಮ ಹೆಗಡೆ ವಂದಿಸಿದರು. ಕಲ್ಪನಾ ಶಿಂದೆ ಪ್ರಾರ್ಥನಾ ಗೀತೆ ಹಾಡಿದರು.