ಚಿತ್ತಾಪುರದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಅಭಿಯಾನವನ್ನು ನಿವೃತ್ತ ಸರ್ಕಾರಿ ನೌಕರ ಸಂದ ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ರೋಣದ ಉದ್ಘಾಟಿಸಿದರು. ಕಾಶಿರಾಯ ಕಲಾಲ್​, ಬಿಕೆ ಗಿರಿಜಾ, ಬಿಕೆ ವಿದ್ಯಾ, ವಿಶ್ವನಾಥ ಸಾಲಿ ಇತರರಿದ್ದರು.  
ರಾಜ್ಯ

ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠ

ಚಿತ್ತಾಪುರ: ಎಲ್ಲ ದಾನಗಳಲ್ಲೂ ರಕ್ತದಾನ ಶ್ರೇಷ್ಠವಾಗಿದ್ದು, ನೀವು ನೀಡುವ ಹನಿ ರಕ್ತ ಇನ್ನೊಂದು ಜೀವ ಉಳಿಸುತ್ತದೆ ಎಂದು ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ರೋಣದ ಹೇಳಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಶಿವಸ್ಮತಿ ಭವನದಲ್ಲಿ ರಾಜಯೋಗಿನಿ ದಾದಿ ಪ್ರಕಾಶಮಣಿಜೀ ಪುಣ್ಯಸ್ಮತಿ ಹಾಗೂ ವಿಶ್ವ ಬಂಧುತ್ವ ದಿವಸ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ರಕ್ತದಾನ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಕಲಬುರಗಿ ಶಾಖೆ ಮುಖ್ಯಸ್ಥೆ ಬಿಕೆ ಗಿರಿಜಾ ಮಾತನಾಡಿ, ಪ್ರತಿವರ್ಷ 20 ಲಕ್ಷ ಜನರು ರಕ್ತದ ಕೊರತೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅನೇಕರು ರಕ್ತಹಿನತೆಯಿಂದ ಬಳಲುತ್ತಿದ್ದು, ಹಲವರಿಗೆ ರಕ್ತದ ಅವಶ್ಯಕತೆಯಿದೆ. ಹೀಗಾಗಿ ಎಲ್ಲರೂ ರಕ್ತದಾನ ಮಾಡಿ ಜೀವ ಉಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಸರ್ಕಾರಿ ಬಾಲಕರ ಪ್ರೌಢಶಾಲೆ ಮುಖ್ಯಗುರು ಕಾಶಿರಾಯ ಕಲಾಲ್​, ವಿಶ್ವನಾಥ ಸಾಲಿ ಮಾತನಾಡಿದರು. ಪ್ರಮುಖರಾದ ಪ್ರಮೋದ ರಾಠೋಡ್​, ವೀರೇಶ ಭುಯ್ಯಾರ, ರೀಟು ಶಿವಕೇರಿ, ಕೇದಾರನಾಥ ಕುಲಕರ್ಣಿ, ಬಿಕೆ ವಿದ್ಯಾ, ಬಿಕೆ ಸಮರ್ಥಿ, ಸುಗಲಾ, ಉಮಾ ಕಾಶಿ, ಸಾಬಣ್ಣ ಮೊಗಲಾ, ಶಿವುಕುಮಾರ ಗೊಬ್ಬೂರ, ತೀರ್ಥಪ್ಪ, ದೇವಿಂದ್ರಪ್ಪ ಸಜ್ಜನಶೆಟ್ಟಿ, ಮಲ್ಲಿಕಾರ್ಜುನ ಇತರರಿದ್ದರು.