ಸುರಪುರದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ನ್ಯಾಯಾಽÃಶ ಯಮನಪ್ಪ ಬಮ್ಮಣಗಿ ಮಾತನಾಡಿದರು. ನಂದಕಿಶೋರ ಝಂವ್ಹಾರ, ಬಸವರಾಜ ಅನ್ಸೂರ್ ಇತರರಿದ್ದರು. 
ರಾಜ್ಯ

ರಕ್ತದಾನ ಶ್ರೇಷ್ಠ ಮಾನವೀಯ ಸೇವೆ

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಽÃಶ ಯಮನಪ್ಪ ಬಮ್ಮಣಗಿ ಅನಿಸಿಕೆ
  • ಸುರಪುರದಲ್ಲಿ ಸೇವಾ ಮಹಾತೀರ್ಥ ಕಾರ್ಯಕ್ರಮ
ಸುರಪುರ : ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಜೀವದಾನ ನೀಡಲು ಪ್ರತಿಯೊಬ್ಬ ಆರೋಗ್ಯವಂತ ನಾಗರಿಕ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಬೇಕು. ರಕ್ತದಾನ ಜೀವ ರಕ್ಷಕ ಮತ್ತು ಶ್ರೇಷ್ಠ ಮಾನವೀಯ ಸೇವೆಯಾಗಿದೆ ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಽÃಶ ಯಮನಪ್ಪ ಬಮ್ಮಣಗಿ ಹೇಳಿದರು.
ಗುರುಪೂರ್ಣಿಮೆ ನಿಮಿತ್ತ ನಾರಾಯಣ ರೇಖಿ ಸತ್ಸಂಗ ಪರಿವಾರದಿಂದ ಮಾಹೇಶ್ವರಿ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸೇವಾ ಮಹಾತೀರ್ಥ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಅಪಘಾತ, ಜಟಿಲ ಶಸöಚಿಕಿತ್ಸೆ, ಹೆರಿಗೆ ಹಾಗೂ ವಿವಿಧ ಕಾಯಿಲೆಗಳ ಸಂದರ್ಭಗಳಲ್ಲಿ ರಕ್ತದ ಅಗತ್ಯ ಹೆಚ್ಚಿರುತ್ತದೆ. ಸಕಾಲಕ್ಕೆ ರಕ್ತ ಸಿಗದಿದ್ದರೆ ಜೀವ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ರಕ್ತದಾನದ ಬಗ್ಗೆ ತಪ್ಪು ಕಲ್ಪನೆ ದೂರ ಮಾಡಬೇಕಾದ ಅಗತ್ಯವಿದೆ. ದಾನಿಯ ಒಂದು ಯೂನಿಟ್ ರಕ್ತ ಮೂರು ಅಮೂಲ್ಯ ಜೀವಗಳನ್ನು ಉಳಿಸಲಿದೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಽÃಶೆ -Àಕೀರವ್ವ ಕೆಳಗೇರಿ, ದಿವಾಣಿ ನ್ಯಾಯಾಽÃಶೆ ಕೆ.ಎಂ. ಪಾಟೀಲ್, ಸತ್ಸಂಗ ಪರಿವಾರದ ಅಧ್ಯಕ್ಷೆ ರಾಜಶ್ರೀ ನಂದಕಿಶೋರ ಝಂವ್ಹಾರ, ವಕೀಲರ ಸಂಘದ ಅಧ್ಯಕ್ಷ ಬಸವರಾಜ ಅನ್ಸೂರ್ ಇತರರಿದ್ದರು. ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವೈದ್ಯರ ತಂಡ ದಾನಿಗಳಿಂದ ೩೭ ಯೂನಿಟ್ ರಕ್ತ ಸಂಗ್ರಹಿಸಿ ಪ್ರಶಂಸಾ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.